ತಿಣುಕಾಡಿ ಫೈನಲ್ ಪ್ರವೇಶಿಸಿ ಚಾಂಪಿಯನ್ ಆದ ಆಸ್ಟ್ರೇಲಿಯಾ, ಭಾರತಕ್ಕೆ 2003ರಂತೆ 23ರಲ್ಲೂ ಸೋಲು!
ವಕ್ತ್ ಬದಲ್ ದಿಯಾ.., 10 ಪಂದ್ಯದಲ್ಲಿ ಭಾರತ ತೋರಿದ ಪ್ರದರ್ಶನವನ್ನು ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದೆ. ಕಳೆದ 10 ಪಂದ್ಯದಲ್ಲಿ ಆಸೀಸ್ ನೀಡಿದ ಪ್ರದರ್ಶನ ಭಾರತ ನೀಡಿ ಟ್ರೋಫಿ ಕೈಚೆಲ್ಲಿದೆ. ಭಾರತ ಮಣಿಸಿದ ಆಸ್ಟ್ರೇಲಿಯಾ 6ನೇ ಬಾರಿಗೆ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತು.
ಅಹಮ್ಮದಾಬಾದ್(ನ.19) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗುವ ಎಲ್ಲಾ ಅರ್ಹತೆ ಪಡೆದಿತ್ತು. ಕಳೆದ 10 ಪಂದ್ಯದಲ್ಲಿ ಚಾಂಪಿಯನ್ ಆಟವನ್ನೇ ಪ್ರದರ್ಶಿಸಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಅದೃಷ್ಠ ಕೈಕೊಟ್ಟಿತು. ಬ್ಯಾಟಿಂಗ್ ನೆಲಕಚ್ಚಿತು. ರನ್ ಕಡಿಮೆಯಾಯಿತು, ಬೌಲಿಂಗ್‌ನಲ್ಲಿ ನಿರೀಕ್ಷಿಸಿದಂತೆ ವಿಕೆಟ್ ಬೀಳಲಿಲ್ಲ. ಟ್ರಾವಿಸ್ ಅಬ್ಬರಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ಕೊನೆಯದಾಗಿ ಭಾರತ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಶರಣಾಯಿತು. ಕೋಟ್ಯಾಂತರ ಭಾರತೀಯರ ಟ್ರೋಫಿ ಕನಸು ನುಚ್ಚು ನೂರಾಯಿತು. 2003ರಂತೆ ಭಾರತಕ್ಕೆ ಮತ್ತೆ ಸೋಲಿನ ಆಘಾತ ಎದುರಾಯಿತು. ಲೀಗ್ ಹಂತದಲ್ಲಿ ಹರಸಾಹಸದ ಗೆಲುವಿನ ಮೂಲಕ ಸೆಮಿಫೈನಲ್ ಪ್ರವೇಶಿಸಿ, ಸೌತ್ ಆಫ್ರಿಕಾ ವಿರುದ್ಧ ಪ್ರಯಾಸದ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ ಆಸೀಸ್ ದಾಖಲೆ ಬರೆದಿದೆ. ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಆಟ ಪ್ರದರ್ಶಿಸಿ ಟ್ರೋಫಿ ಗೆದ್ದುಕೊಂಡಿದೆ. 6ನೇ ಐಸಿಸಿ ವಿಶ್ವಕಪ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ ಇತಿಹಾಸ ರಚಿಸಿದೆ. ಇತ್ತ ಭಾರತ ಕೊನೆಯ ಒಂದೇ ಒಂದು ತಪ್ಪಿನಿಂದ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
ಸ್ಲೋ ಪಿಚ್ ಕಂಡೀಷನ್ ಅರ್ಥ ಮಾಡಿಕೊಳ್ಳುವಷ್ಟರಲ್ಲೇ ಭಾರತ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಹೋರಾಟದ ಮೂಲಕ ಭಾರತತ 240 ರನ್ ಸಿಡಿಸಿದರೂ ಆತಂಕ ಕಡಿಮೆಯಾಗಲಿಲ್ಲ. ಸುಲಭ ಟಾರ್ಗೆಟ್ ಕಾರಣ ಆಸ್ಟ್ರೇಲಿಯಾ ಮೊದಲ ಎಸೆತದಿಂದಲೇ ಅಗ್ರೆಸ್ಸೀವ್ ಬ್ಯಾಟಿಂಗ್ ಮೂಲಕ ರನ್ ಗಳಿಸಲು ಮುಂದಾಯಿತು. ಇದಕ್ಕೆ ತಕ್ಕಂತೆ ಮೊದಲ ಓವರ್‌ನಲ್ಲಿ ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ 16 ರನ್ ಚಚ್ಚಿದರು.
ಕೊಹ್ಲಿ ಗುರಿಯಾಗಿಸಿ ಬಾಲ್ ಎಸೆದ್ರಾ ಮ್ಯಾಕ್ಸ್‌ವೆಲ್? ಫೈನಲ್ ಪಂದ್ಯದ ಘಟನೆ ವೈರಲ್!
ಮೊಹಮ್ಮದ್ ಶಮಿ ದಾಳಿಯಲ್ಲಿ ಡೇವಿಡ್ ವಾರ್ನರ್ ವಿಕೆಟ್ ಉರುಳಿ ಬಿತ್ತು. ಮಿಚೆಲ್ ಮಾರ್ಶ್ 15 ರನ್ ಸಿಡಿಸಿ ನಿರ್ಗಮಿಸಿದರು. ಭಾರತ ನಿಧಾನವಾಗಿ ಮೇಲುಗೈ ಸಾಧಿಸಲು ಆರಂಭಿಸಿತು. ಸ್ಟೀವ್ ಸ್ಮಿತ್ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು. ಪ್ರಮುಖ 3 ವಿಕೆಟ್ ಪತನಗೊಂಡಿತು. ಅಭಿಮಾನಿಗಳಲ್ಲಿ ಮತ್ತೆ ಜೋಶ್ ಕಾಣಿಸತೊಡಗಿತು. ಆದರೆ ಟ್ರಾವಿಸ್ ಹೆಡ್ ಹಾಗೂ ಮಾರ್ನಸ್ ಲಬುಶಾನೆ ಜೊತೆಯಾಟ ಕೋಟ್ಯಾಂತರ ಭಾರತೀಯರ ಕನಸಿ ಗೋಪುರ ಧಕ್ಕೆ ತಂದಿದೆ.
ಟ್ರಾವಿಸ್ ಹೆಡ್ ಹಾಫ್ ಸೆಂಚುರಿ ಸಿಡಿಸುವ ಮೂಲಕ ಪಂದ್ಯದ ಗತಿ ಬದಲಿಸಿದರು. ಭಾರತದ ಪ್ರಯತ್ನಗಳು ವಿಫಲಗೊಂಡಿತು. ಕಳೆದ 10 ಪಂದ್ಯದಲ್ಲಿ ಎದುರಿಸದ ಆತಂಕ, ಒತ್ತಡ ಎಲ್ಲವನ್ನೂ ಒಂದೇ ಪಂದ್ಯದಲ್ಲಿ ಎದುರಿಸುವಂತಾಯಿತು. ಟ್ರಾವಿಸ್ ಹೆಡ್ ಆಕರ್ಷಕ ಶತಕ ಭಾರತದಿಂದ ಪಂದ್ಯವನ್ನು ಕಸಿದುಕೊಂಡಿತು. ಲಬುಶಾನೆ ಹೋರಾಟ ಆಸ್ಟ್ರೇಲಿಯಾದ ಹೈಹಿಡಿಯಿತು.
INDvAUS ಫೈನಲ್‌ನಲ್ಲಿ ಭಾರತದ ಬ್ಯಾಟಿಂಗ್‌ಗೆ ಜಯ್ ಶಾ, ಸೂರ್ಯಕುಮಾರ್ ಟ್ರೋಲ್!
ಆಸೀಸ್ ಗೆಲುವಿಗೆ ಅಂತಿಮ 43 ಎಸೆತದಲ್ಲಿ ಕೇವಲ 2 ರನ್ ಅವಶ್ಯಕತೆ ಇತ್ತು. ಈ ವೇಳೆ 137 ರನ್ ಸಿಡಿಸಿ ಪಂದ್ಯದ ಲೆಕ್ಕಾಚಾರ ಬದಲಿಸಿದ ಟ್ರಾವಿಸ್ ವಿಕೆಟ್ ಪತನಗೊಂಡಿತು. ಇತ್ತ ಲಬುಶಾನೆ ಅಜೇಯ 58 ರನ್ ಸಿಡಿಸಿದರು. ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. 6 ವಿಕೆಟ್ ಭರ್ಜರಿ ಗೆಲುವಿನ ಮೂಲಕ ಆಸ್ಟ್ರೇಲಿಯಾ ಐಸಿಸಿ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ಭಾರತೀಯರ ಪ್ರಾರ್ಥನೆ ಫಲಿಸಲಿಲ್ಲ. ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿತ್ತು. ಇಡೀ ಟೂರ್ನಿಯಲ್ಲಿ ಟೀಂ ಇಂಡಿಯಾ ರೀತಿ ಯಾವ ತಂಡವೂ ಪ್ರದರ್ಶನ ನೀಡಿಲ್ಲ. ಆದರೆ ಫೈನಲ್ ಪಂದ್ಯದಲ್ಲಿ ಅದೃಷ್ಠ ಕೈಕೊಟ್ಟಿತು. 2013ರಿಂದ ಭಾರತ ಎದುರಿಸುತ್ತಿರುವ ಐಸಿಸಿ ಟ್ರೋಫಿ ಬರ ಮತ್ತೆ ಮುಂದುವರಿಯಿತು.