2ನೇ ಏಕದಿನ: ರೋಹಿತ್ ಶರ್ಮಾ, ಕೆಎಲ್ ರಾಹುಲ್ ಸೆಂಚುರಿ!

ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಬೃಹತ್ ಮೊತ್ತದತ್ತ ಕಾಲಿಟ್ಟಿದೆ. ಇಬ್ಬರು ಆರಂಭಿಕರು ಸೆಂಚುರಿ ಸಿಡಿಸೋ ಮೂಲಕ ದಾಖಲೆ ಬರೆದಿದ್ದಾರೆ. 

Rohit sharma kl rahul hit century against west indies 2nd odi

ವಿಶಾಖಪಟ್ಟಣಂ(ಡಿ.18): ವೆಸ್ಟ್ ಇಂಡೀಸ್ ವಿರುದ್ದ 2ನೇ ಹಾಗೂ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಶತಕ ಸಿಡಿಸಿದ್ದಾರೆ.  ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ  ಏಕದಿನ ಕ್ರಿಕೆಟ್‌ನಲ್ಲಿ 28 ನೇ ಶತಕ ಸಿಡಿಸಿದರೆ, ರಾಹುಲ್ 3ನೇ ಶತಕ ಪೂರೈಸಿದರು. ಇಷ್ಟೇ ಅಲ್ಲ ರೋಹಿತ್ ಹಾಗೂ ರಾಹುಲ್ ಶತಕದ ಮೂಲಕದ ದಾಖಲೆ ನಿರ್ಮಿಸಿದ್ದಾರೆ. 

ಇದನ್ನೂ ಓದಿ: 2ನೇ ಏಕದಿನ: ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ವೆಸ್ಟ್ ಇಂಡೀಸ್, ಇಲ್ಲಿದೆ ಕಾರಣ!

ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ದಾಖಲೆ ಸರಿಗಟ್ಟಿದ್ದಾರೆ. ಕ್ಯಾಲೆಂಡರ್  ವರ್ಷದಲ್ಲಿ ಗರಿಷ್ಠ ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ರೋಹಿತ್ ಶರ್ಮಾ ಈ ವರ್ಷ 7 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.  ಮೊದಲ ಸ್ಥಾನವನ್ನು ಸಚಿನ್ ತೆಂಡುಲ್ಕರ್ ಅಲಂಕರಿಸಿದ್ದಾರೆ. 2000ನೇ ಇಸವಿಯಲ್ಲಿ ಸೌರವ್ ಗಂಗೂಲಿ ಹಾಗೂ 2016ರಲ್ಲಿ ಡೇವಿಡ್ ವಾರ್ನರ್ ಕ್ಯಾಲೆಂಡರ್ ವರ್ಷದಲ್ಲಿ 7 ಸೆಂಚುರಿ ಸಿಡಿಸಿದ್ದರು.

ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಏಕದಿನ ಶತಕ
9 ಸಚಿನ್ ತೆಂಡುಲ್ಕರ್ (1998)
7 ಸೌರವ್ ಗಂಗೂಲಿ (2000)
7 ಡೇವಿಡ್ ವಾರ್ನರ್ (2016)
7 ರೋಹಿತ್ ಶರ್ಮಾ (2019)

ಕಳಪೆ ಫಾರ್ಮ್ ಟೀಕೆ ಅನುಭವಿಸುತ್ತಿದ್ದ ಕೆಎಲ್ ರಾಹುಲ್ ಆಕರ್ಷಕ ಶತಕ ಸಿಡಿಸೋ ಮೂಲಕ ತಕ್ಕ ಉತ್ತರ ನೀಡಿದ್ದಾರೆ. 

ಡಿಸೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios