ಆಸಿಸ್ ಕ್ರಿಕೆಟಿಗರ ಪತ್ನಿಯರ ಟೀಕಿಸುವುದು ನಿಲ್ಲಿಸಿ, ಫ್ಯಾನ್ಸ್‌ಗೆ ಹರ್ಭಜನ್ ಸಿಂಗ್ ಎಚ್ಚರಿಕೆ!
ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿ ಗೆದ್ದ ಬೆನ್ನಲ್ಲೇ ಆಸಿಸ್ ಕ್ರಿಕೆಟಿಗರು, ಪತ್ನಿಯರು, ಕುಟುಂಬಸ್ಥರನ್ನು ಟೀಕಿಸಲಾಗುತ್ತದೆ. ಅವಾಚ್ಯ ಶಬ್ದಗಳು, ಅಶ್ಲೀಲತೆಗಳ ಮೂಲಕ ನಿಂದನೆ ಮಾಡಲಾಗುತ್ತಿದೆ. ಈ ಕುರಿತು ಹರ್ಭಜನ್ ಸಿಂಗ್ ಮಹತ್ವದ ಸಂದೇಶ ರವಾನಿಸಿದ್ದಾರೆ.
ಮುಂಬೈ(ನ.21) ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮಣಿಸಿದ ಆಸ್ಟ್ರೇಲಿಯಾ ಟ್ರೋಫಿ ಗೆದ್ದುಕೊಂಡಿದೆ. ಗೆಲುವಿನ ಬೆನ್ನಲ್ಲೇ ಆಸ್ಟ್ರೇಲಿಯಾ ಕ್ರಿಕೆಟಿಗರರು, ಅವರ ಪತ್ನಿಯರು, ಕುಟುಂಬಸ್ಥರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡಲಾಗುತ್ತಿದೆ. ಅಶ್ಲೀಲ ಪದಗಳು, ಅಸಭ್ಯ ಪೋಸ್ಟ್‌ಗಳನ್ನು ಹಾಕಿ ನಿಂದಿಸಲಾಗುತ್ತಿದೆ. ನಕಲಿ ಖಾತೆಗಳನ್ನು ತೆರೆದು ಈ ಕೃತ್ಯ ಮಾಡಲಾಗುತ್ತಿದೆ. ಟೀಕೆ, ನಿಂದನೆಗಳು ಹೆಚ್ಚಾಗುತ್ತಿದ್ದಂತೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ.
ಎಕ್ಸ್ ಖಾತೆಯಲ್ಲಿ ಈ ಕುರಿತು ಹರ್ಭಜನ್ ಸಿಂಗ್ ಸಂದೇಶ ರವಾನಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗರು, ಅವರ ಕುಟುಂಬ ಸದಸ್ಯರನ್ನು ಟ್ರೋಲ್ ಮಾಡಲಾಗುತ್ತಿರುವ ವರದಿಗಳು ಅತ್ಯಂತ ಕೆಟ್ಟ ಅಭಿರುಚಿ ಹೊಂದಿದೆ. ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡಿದೆ. ಭಾರತ ಬಲಿಷ್ಠ ಎದುರಾಳಿ ವಿರುದ್ದ ಸೋಲು ಕಂಡಿದೆ. ಆದರೆ ಆಟಗಾರರು, ಅವರ ಪತ್ನಿಯರು, ಕುಟುಂಬಸ್ಥರನ್ನು ಯಾಕೆ ಟ್ರೋಲ್ ಮಾಡಬೇಕು. ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಈ ವರ್ತನೆ ನಿಲ್ಲಿಸಿ. ವಿವೇಕ ಹಾಗೂ ಘಟನೆ ಅತ್ಯಂತ ಮುಖ್ಯ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಭಾವುಕರಾಗಿದ್ದ ಕೊಹ್ಲಿ-ರೋಹಿತ್ ಮುಖದಲ್ಲಿ ನಗು, ಮೋದಿ ಜೊತೆ ಕೈ ಕೈ ಹಿಡಿದ ಫೋಟೋ ವೈರಲ್!
ಆಸ್ಟ್ರೇಲಿಯಾ ಗೆಲುವು ದಾಖಲಿಸುತ್ತಿದ್ದಂತೆ ಗ್ಲನ್ ಮ್ಯಾಕ್ಸ್‌ವೆಲ್ ಪತ್ನಿ ಭಾರತ ಮೂಲದ ವಿನಿ ರಾಮನ್ ಅತೀ ಹೆಚ್ಚು ಟ್ರೋಲ್ ಮಾಡಲಾಗಿದೆ. ಕೆಟ್ಟ ಪದಗಳನ್ನು ಬಳಸಿ ನಿಂದಿಸಲಾಗಿದೆ. ಇನ್ನ ಪ್ಯಾಟ್ ಕಮಿನ್ಸ್ ಪತ್ನಿ ಸೇರಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹಲವರ ಕುಟುಂಬಸ್ಥರ ವಿರುದ್ಧ ಟೀಕೆ ಮಾಡಲಾಗಿದೆ.ಈ ಕುರಿತು ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಭಾರತ ವಿರುದ್ದ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಇದೇ ವೇಳೆ ಭಾರತ ತಂಡದ ಪ್ರದರ್ಶನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೋಫಿ ಗೆಲ್ಲದಿದ್ದರೂ ಟೀಂ ಇಂಡಿಯಾ ಹೋರಾಟಕ್ಕೆ ಶಹಬ್ಬಾಷ್ ಹೇಳಿದ್ದಾರೆ. ಇನ್ನು ಸೋಲಿನ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ತೆರಳಿ ಆಟಗಾರರನ್ನು ಸಂತೈಸಿದ್ದರು. ಕಣ್ಣೀರಿಡುತ್ತಿದ್ದ ವೇಗಿ ಮೊಹಮದ್ ಶಮಿಯನ್ನು ತಬ್ಬಿಕೊಂಡು ಅವರ ಸಾಧನೆಯನ್ನು ಕೊಂಡಾಡಿದ ಮೋದಿ, ಇಡೀ ತಂಡವನ್ನು ಉದ್ದೇಶಿಸಿ ‘ನೀವು ಫೈನಲ್‌ನಲ್ಲಿ ಸೋತಿರಬಹುದು, ಆದರೆ ಟೂರ್ನಿಯಲ್ಲಿ ನಿಮ್ಮ ಆಟ ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದೆ’ ಎಂದು ಹುರಿದುಂಬಿಸಿದರು.
ವಿಶ್ವಕಪ್ 2023ರ ವಿಶ್ವ ತಂಡ ಪ್ರಕಟಿಸಿದ ಐಸಿಸಿ; ರೋಹಿತ್‌ಗೆ ನಾಯಕತ್ವ, 6 ಭಾರತೀಯರಿಗೆ ಸ್ಥಾನ!