ಐಪಿಎಲ್ 2022 ಅಲ್ಲಿ ಖಲೀಲ್ ಅಹ್ಮದ್ ನೀರಸ ನಿರ್ವಹಣೆ ತೋರಿದ್ದರೂ ಬಿಸಿಸಿಐ ಮಾತ್ರ ಖಲೀಲ್ ಅವರ ಮೇಲೆ ಹೆಚ್ಚಿನ ವಿಶ್ವಾಸವಿಟ್ಟಿದೆ. ಖಲೀಲ್ ಅಹ್ಮದ್ ಫಾರ್ಮ್ ಗೆ ಬರುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಅವಕಾಶಗಳನ್ನು ಸೃಷ್ಟಿಸಲು ಬಿಸಿಸಿಐ ಮುಂದಾಗಿದೆ.

ಮುಂಬೈ (ಏ. 28): ಐಪಿಎಲ್​ನ (IPL 2022) 41ನೇ ಪಂದ್ಯದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders ) ಮುಖಾಮುಖಿಯಾಗ್ತಿವೆ. ಮೊದಲ ಮುಖಾಮುಖಿಯಲ್ಲಿ ಡೆಲ್ಲಿ (DC) ಜಯ ಸಾಧಿಸಿತ್ತು. ಆ ಸೇಡು ತೀರಿಸಿಕೊಳ್ಳಲು ರೈಡರ್ಸ್ ಕಾದು ಕುಳಿತಿದೆ. ಡೆಲ್ಲಿ 7 ಪಂದ್ಯಗಳಲ್ಲಿ ಮೂರು ಗೆದ್ದು ನಾಲ್ಕರಲ್ಲಿ ಸೋಲು ಕಂಡಿದ್ದರೆ, ಕೆಕೆಆರ್​​ 8ರಲ್ಲಿ ಮೂರು ಗೆದ್ದು ಐದರಲ್ಲಿ ಸೋಲು ಕಂಡಿದೆ. ಎರಡೂ ತಂಡಕ್ಕೂ ಇಂದು ಗೆಲುವು ಅನಿವಾರ್ಯ. ಹಾಗಾಗಿ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ಬಿಗ್ ಫೈಟ್ ನಿರೀಕ್ಷಿಸಲಾಗಿದೆ.

ಭಾರತೀಯ ಕ್ರಿಕೆಟ್ (Indian Cricket) ಕಣ್ಣು ಖಲೀಲ್ ಅಹ್ಮದ್​ ಮೇಲೆ: ಇಂದಿನ ಪಂದ್ಯಕ್ಕಿಂತ ಇಡೀ ಭಾರತೀಯ ಕ್ರಿಕೆಟ್ ಚಿತ್ತ ಖಲೀಲ್ ಅಹ್ಮದ್ ಅವರತ್ತ ನೆಟ್ಟಿದೆ. ಈ ರಾಜಸ್ಥಾನ ಬೌಲರ್, ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದು, 6 ಪಂದ್ಯಗಳಿಂದ 11 ವಿಕೆಟ್ ಪಡೆದಿದ್ದಾರೆ. 144 ಬಾಲ್​ ಎಸೆದು 190 ರನ್ ಬಿಟ್ಟುಕೊಟ್ಟಿದ್ದಾರೆ. ಅಂದರೆ 7.91ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಇವತ್ತು ಡೆಲ್ಲಿ ಪರ ಈತನೇ ಟ್ರಂಪ್​ ಕಾರ್ಡ್​ ಬೌಲರ್ ಕೂಡ.

ಅಷ್ಟೇ ಎಫೆಕ್ಟೀವ್ ಬೌಲರ್ ಅಲ್ಲದ ಖಲೀಲ್ ಅಹ್ಮದ್ ಹಿಂದೆ ಬಿಸಿಸಿಐ ಬಿದ್ದಿರೋದ್ಯಾಕೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಾ ಇರಬಹುದು. ಅದಕ್ಕೂ ಒಂದು ಕಾರಣವಿದೆ. ಖಲೀಲ್ ಈಗಲೇ ಟೀಂ ಇಂಡಿಯಾ ಪರ 11 ಒನ್​ಡೇ, 14 ಟಿ20 ಪಂದ್ಯಗಳನ್ನಾಡಿದ್ದಾರೆ. ಆದ್ರೆ 2019ರ ಬಳಿಕ ಅವರು ಟೀಮ್​ಗೆ ಸೆಲೆಕ್ಟ್ ಆಗಿಲ್ಲ. ಈಗ ಇವರ ಸೇವೆ ಟೀಂ ಇಂಡಿಯಾಗೆ ಬೇಕಿದೆ. ಘಟಾನುಘಟಿ ಬೌಲರ್ ಇದ್ದರೂ ಖಲೀಲ್ ಹಿಂದೆ ಬಿಸಿಸಿಐ ಬಿದ್ದಿರೋದ್ಯಾಕೆ ಗೊತ್ತಾ..? ಲೆಫ್ಟ್ ಆರ್ಮ್​ ಫಾಸ್ಟ್ ಬೌಲರ್ ಅನ್ನೋ ಒಂದೇ ಕಾರಣಕ್ಕೆ.

ಟಿ20 ವರ್ಲ್ಡ್​​ಕಪ್ ಗೆಲ್ಲಬೇಕು ಅಂದರೆ ಖಲೀಲ್ ಬೇಕೇ ಬೇಕು: 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಟೀಂ ಇಂಡಿಯಾ ಒಂದೇ ಒಂದು ಐಸಿಸಿ ಟೂರ್ನಿ ಗೆದ್ದಿಲ್ಲ. ಇದಕ್ಕೆ ಕಾರಣ ಹುಡುಕಿಕೊಂಡು ಹೊರಟರೆ ಒಬ್ಬ ಬೌಲರ್​ ಹೆಸರು ಬರುತ್ತದೆ. ಹೌದು, ಆ ಒಬ್ಬ ಬೌಲರ್​​​ಗೆ ಭಾರತೀಯರು ಹೆದರಿದ್ದರಿಂದಲೇ 9 ವರ್ಷದಿಂದ ಭಾರತಕ್ಕೆ ಐಸಿಸಿ ಟ್ರೋಫಿ ದಕ್ಕಿಲ್ಲ. ಆ ಬೌಲರ್ ಬೇರೆ ಯಾರೂ ಅಲ್ಲ, ಲೆಫ್ಟ್ ಆರ್ಮ್​ ಫಾಸ್ಟ್ ಬೌಲರ್.

IPL 2022 ಕೊನೇ ಓವರ್ ನಲ್ಲಿ 4 ಸಿಕ್ಸರ್ ಸಿಡಿಸಿ ಗೆದ್ದ ಗುಜರಾತ್ ಟೈಟಾನ್ಸ್!

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲಲು ಮೊಹಮ್ಮದ್ ಅಮಿರ್​ ಅನ್ನೋ ಲೆಫ್ಟ್ ಆರ್ಮ್​ ಫಾಸ್ಟ್ ಬೌಲರ್ ಕಾರಣ. 2019ರ ಒನ್​ಡೇ ವರ್ಲ್ಡ್​ ಸೆಮಿಫೈನಲ್​ನಲ್ಲಿ ಸೋಲಲು ನ್ಯೂಜಿಲೆಂಡ್ ತಂಡದಲ್ಲಿದ್ದ ಲೆಫ್ಟಿ ಬೌಲರ್ ಕಾರಣ. 2021ರ ಟಿ20 ವಿಶ್ವಕಪ್​​ನಲ್ಲಿ ಪಾಕ್ ವಿರುದ್ಧ ಸೋಲಲೂ ಸಹ ಅದೇ ಲೆಫ್ಟ್ ಆರ್ಮ್​ ಫಾಸ್ಟ್ ಬೌಲರ್ಸ್ ಕಾರಣ. ಕಣ್ಣಿಗೆ ಕಾಣೋದು ಈ ಮೂರು ಪಂದ್ಯ ಮಾತ್ರ. ಆದರೆ ಅದೆಷ್ಟೋ ಪಂದ್ಯಗಳಲ್ಲಿ ಲೆಫ್ಟ್ ಆರ್ಮ್​ ಫಾಸ್ಟ್ ಬೌಲರ್ಸ್​ಗೆ ಭಾರತೀಯರು ಆಡಲು ಪರದಾಡಿದ್ದಾರೆ.

ಸಾರ್ವಕಾಲಿನ ಕನಸಿನ ಐಪಿಎಲ್ ತಂಡವನ್ನು ಪ್ರಕಟಿಸಿದ ಹರ್ಭಜನ್ ಸಿಂಗ್..!

ಈಗ ಭಾರತಕ್ಕೆ ಒಬ್ಬ ಲೆಫ್ಟ್ ಆರ್ಮ್​ ಫಾಸ್ಟ್ ಬೌಲರ್ ಬೇಕಿದ್ದಾನೆ. ಈ ಐಪಿಎಲ್​ನಲ್ಲಿ ಭಾರತೀಯ ಲೆಫ್ಟಿ ಬೌಲರ್ ಪೈಕಿ ಶೈನ್ ಆಗ್ತಿರೋದು ಖಲೀಲ್ ಅಹ್ಮದ್ ಮಾತ್ರ. ಹಾಗಾಗಿಯೇ ಬಿಸಿಸಿಐ ಖಲೀಲ್ ಹಿಂದೆ ಬಿದ್ದಿರೋದು. ಈ ಸೀಸನ್​ನಲ್ಲಿ ಅಹ್ಮದ್ ಉತ್ತಮ ಪ್ರದರ್ಶನ ನೀಡಿದ್ದೇ ಆದ್ರೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯೋದು ಕನ್ಫರ್ಮ್​. ಟೀಮ್​ನಲ್ಲಿ ಸ್ಥಾನ ಪಡೆಯದಿದ್ದರೂ ಹೆಚ್ಚುವರಿ ಆಟಗಾರನಾಗಿ ಆಸ್ಟ್ರೇಲಿಯಾ ಫ್ಲೈಟ್ ಹತ್ತಲಿದ್ದಾರೆ. ಯಾಕೆ ಗೊತ್ತಾ..? ಟಿ20 ವಿಶ್ವಕಪ್ ವೇಳೆ ಭಾರತೀಯರಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡೋಕೆ.