Asianet Suvarna News Asianet Suvarna News

IPL 2022 ಕೊನೇ ಓವರ್ ನಲ್ಲಿ 4 ಸಿಕ್ಸರ್ ಸಿಡಿಸಿ ಗೆದ್ದ ಗುಜರಾತ್ ಟೈಟಾನ್ಸ್!

ಮಾರ್ಕೋ ಜಾನ್ಸೆನ್ ಎಸೆದ ಕೊನೇ ಓವರ್ ನಲ್ಲಿ ರಾಹುಲ್ ಟೇವಾಟಿಯಾ ಹಾಗೂ ರಶೀದ್ ಖಾನ್ ಜೋಡಿ 25 ರನ್ ದೋಚುವುದರೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗುಜರಾತ್ ಟೈಟಾನ್ಸ್ ತಂಡದ ಅದ್ಭುತ ಗೆಲುವಿಗೆ ಕಾರಣರಾಗಿದ್ದಾರೆ.

IPL 2022 GT vs SRH Rashid Khan Rahul Tewatia Heroic Innings Helps Gujarat Titans Beat Sunrisers Hyderabad by 5 wickets san
Author
Bengaluru, First Published Apr 27, 2022, 11:31 PM IST

ಮುಂಬೈ (ಏ.27): ಕೊನೇ ಓವರ್ ನಲ್ಲಿ ಬೇಕಿದ್ದ 23 ರನ್ ಗಳನ್ನು, ಮಾರ್ಕೋ ಜಾನ್ಸೆನ್ (Marco Jansen) ಓವರ್ ನಲ್ಲಿ 4 ಸ್ಫೋಟಕ ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ರಂಜಿಸಿದ ರಾಹುಲ್ ಟೇವಾಟಿಯಾ (Rahul Tewatia) ಹಾಗೂ ರಶೀದ್ ಖಾನ್ (Rashid Khan) ಜೋಡಿ ಗುಜರಾತ್ ಟೈಟಾನ್ಸ್ (Gujarat Titans) ತಂಡದ ಅದ್ಭುತ ಗೆಲುವಿಗೆ ಕಾರಣರಾಗಿದ್ದಾರೆ. ಇದರೊಂದಿಗೆ ಸನ್ ರೈಸರ್ಸ್ (Sunrisers Hyderabad) ತಂಡದ ಸತತ ಗೆಲುವಿನ ಓಟಕ್ಕೆ ಕೊನೆಯಾದಂತಾಗಿದೆ. 

ವಾಂಖೆಡೆ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ (SRH) ತಂಡ,  ಅಭಿಷೇಕ್ ವರ್ಮ (65ರನ್, 42 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಏಡೆನ್ ಮಾರ್ಕ್ರಮ್ (56ರನ್, 40 ಎಸೆತ, 2 ಬೌಂಡರಿ, 3 ಸಿಕ್ಸರ್) ಅವರ ಅದ್ಭುತ ಅರ್ಧಶತಕಗಳ ಮೂಲಕ 6 ವಿಕೆಟ್ ಗೆ 195 ರನ್ ಪೇರಿಸಿತು. ಪ್ರತಿಯಾಗಿ ಗುಜರಾತ್ ಟೈಟಾನ್ಸ್ (GT), 5 ವಿಕೆಟ್ ಗೆ 199 ರನ್ ಬಾರಿಸಿ ಗೆಲುವು ಕಂಡಿತು. ರಶೀದ್ ಖಾನ್ 11 ಎಸೆತಗಳಲ್ಲಿ 4 ಸಿಕ್ಸರ್ ಗಳಿದ್ದ 31 ರನ್ ಸಿಡಿಸಿದರೆ, ರಾಹುಲ್ ಟೇವಾಟಿಯಾ 21 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಇದ್ದ 40 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.

ಚೇಸಿಂಗ್ ಆರಂಭಿಸಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ನಿಯಮಿತವಾಗಿ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್ ಗೆ ವೃದ್ಧಿಮಾನ್ ಸಾಹ ಹಾಗೂ ಶುಭ್ ಮಾನ್ ಗಿಲ್ 69 ರನ್ ಗಳ ಉತ್ತಮ ಜೊತೆಯಾಟವಾಡಿದರು.  ವೃದ್ಧಿಮಾನ್ ಸಾಹ ಅವರ ಉತ್ತಮ ಬ್ಯಾಟಿಂಗ್ ಸಾಹಸ ಹಾಗೂ ಶುಭ್ ಮಾನ್ ಗಿಲ್ ಅವರ ಎಚ್ಚರಿಕೆ ಬ್ಯಾಟಿಂಗ್ ನಿಂದಾಗಿ ಎದುರಿಸಿದ ಮೊದಲ 52 ಎಸೆತಗಳಲ್ಲಿ ಈ ಜೋಡಿ 69 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ವಿಶ್ವಾಸ ನೀಡಿತ್ತು. ಕ್ರೀಸ್ ನಲ್ಲಿದ್ದ ಇದ್ದ ಹಂತದಲ್ಲಿ ನಿಧಾನಗತಿಯ ಬ್ಯಾಟಿಗ್ ಮಾಡುವ ಮೂಲಕ ಪರದಾಟ ನಡೆಸಿದ್ದ ಶುಭ್ ಮಾನ್ ಗಿಲ್ 8ನೇ ಓವರ್ ನಲ್ಲಿ ಉಮ್ರಾನ್ ಮಲೀಕ್ ಗೆ ಬೌಲ್ಡ್ ಆಗಿ ಹೊರನಡೆದರು.

ನಂತರ ವೃದ್ಧಿಮಾನ್ ಸಾಹಗೆ ಜೊತೆಯಾದ ನಾಯಕ ಹಾರ್ದಿಕ್ ಪಾಂಡ್ಯ (10) ಹೆಚ್ಚು ಹೊತ್ತು ಕ್ರೀಸ್ ನಲ್ಲಿರಲಿಲ್ಲ. 10ನೇ ಓವರ್ ನಲ್ಲಿ ಮತ್ತೆ ದಾಳಿಗಿಳಿದ ಮಲೀಕ್ 6 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 10 ರನ್ ಬಾರಿಸಿದ್ದ ಪಾಂಡ್ಯರನ್ನು ಔಟ್ ಮಾಡಿದರು. ಉತ್ತಮವಾಗಿ ಆಟವಾಡುತ್ತಿದ್ದ ವೃದ್ಧಿಮಾನ್ ಸಾಹ ತಂಡದ ಮೊತ್ತ 120ರ ಗಡಿ ದಾಟುತ್ತಿದ್ದಂತೆ ನಿರ್ಗಮಿಸಿದರೆ, ಉಮ್ರಾನ್ ಮಲೀಕ್ ತಾವು ಎಸೆದ ಕೊನೆಯ ಓವರ್ ನ ಸತತ ಎರಡು ಎಸೆತಗಳಲ್ಲಿ ಡೇವಿಡ್ ಮಿಲ್ಲರ್ (17) ಹಾಗೂ ಅಭಿನವ್ ಮನೋಹರ್ ವಿಕೆಟ್ ಅನ್ನು ಉರುಳಿಸಿ ಐದು ವಿಕೆಟ್ ಸಾಧನೆ ಮಾಡಿದರು. ಆ ಬಳಿಕ ರಾಹುಲ್ ಟೇವಾಟಿಯಾ ಹಾಗೂ ರಶೀದ್ ಖಾನ್ ಬಿರುಸಿನ ಆಟವಾಡುವ ಮೂಲಕ ಗೆಲುವಿಗೆ ಪ್ರಯತ್ನ ನಡೆಸಿದರು.

IPL 2022 ಅಭಿಷೇಕ್ ವರ್ಮ, ಏಡೆನ್ ಮಾರ್ಕ್ರಮ್ ಸೂಪರ್ ಅರ್ಧಶತಕ

ಸನ್ ರೈಸರ್ಸ್ ತಂಡದ ಪರವಾಗಿ 2ನೇ ಅತ್ಯುತ್ತಮ ಬೌಲಿಂಗ್: ಉಮ್ರಾನ್ ಮಲೀಕ್ 25 ರನ್ ಗೆ 5 ವಿಕೆಟ್ ಉರುಳಿಸಿರುವುದು ಸನ್ ರೈಸರ್ಸ್ ತಂಡದ ಪರವಾಗಿ ಐಪಿಎಲ್ ನಲ್ಲಿ 2ನೇ ಅತ್ಯುತ್ತಮ ಬೌಲಿಂಗ್ ಎನಿಸಿದೆ. 2017ರಲ್ಲಿ ಭುವನೇಶ್ವರ್ ಕುಮಾರ್ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ 18 ರನ್ ಗೆ ಐದು ವಿಕೆಟ್ ಉರುಳಿಸಿದ್ದು ಅತ್ಯುತ್ತಮ ನಿರ್ವಹಣೆ ಎನಿಸಿದೆ.

IPL 2022 ಸನ್‌ರೈಸರ್ಸ್ ವಿರುದ್ಧ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್!

ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಆಟಗಾರನ 3ನೇ ಅತ್ಯುತ್ತಮ ನಿರ್ವಹಣೆ: ಉಮ್ರಾನ್ ಮಲೀಕ್ ಅವರ ನಿರ್ವಹಣೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಬೌಲರ್ ನ ಮೂರನೇ ಅತ್ಯುತ್ತಮ ಐಪಿಎಲ್ ನಿರ್ವಹಣೆ ಎನಿಸಿದೆ. 2018ರಲ್ಲಿ ಸನ್ ರೈಸರ್ಸ್ ವಿರುದ್ಧ ಅಂಕಿತ್ ರಜಪೂತ್ 14 ರನ್ ಗೆ 5 ವಿಕೆಟ್ ಉರುಳಿಸಿದ್ದು ಅತ್ಯುತ್ತಮ ಸಾಧನೆಯಾಗಿದ್ದರೆ, 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವರುಣ್ ಚಕ್ರವರ್ತಿ 20 ರನ್ ಗೆ 5 ವಿಕೆಟ್ ಉರುಳಿಸಿದ್ದು 2ನೇ ಸ್ಥಾನದಲ್ಲಿದೆ.

Follow Us:
Download App:
  • android
  • ios