Asianet Suvarna News Asianet Suvarna News

ಸಾರ್ವಕಾಲಿನ ಕನಸಿನ ಐಪಿಎಲ್ ತಂಡವನ್ನು ಪ್ರಕಟಿಸಿದ ಹರ್ಭಜನ್ ಸಿಂಗ್..!

* ಐಪಿಎಲ್‌ನ ಕನಸಿನ ತಂಡವನ್ನು ಪ್ರಕಟಿಸಿದ ಹರ್ಭಜನ್ ಸಿಂಗ್

* ಹರ್ಭಜನ್ ಸಿಂಗ್ ಕನಸಿನ ತಂಡಕ್ಕೆ ಧೋನಿಗೆ ನಾಯಕ ಪಟ್ಟ

* ಭಜ್ಜಿ ಸಾರ್ವಕಾಲಿಕ ಕನಸಿನ ಐಪಿಎಲ್‌ ತಂಡದಲ್ಲಿ 6 ವಿದೇಶಿ ಆಟಗಾರರಿಗೆ ಸ್ಥಾನ

Former Cricketer Harbhajan Singh Names all time IPL XI MS Dhoni Names as captain kvn
Author
Bengaluru, First Published Apr 27, 2022, 6:17 PM IST

ಮುಂಬೈ(ಏ.27): ಟೀಂ ಇಂಡಿಯಾ ಮಾಜಿ ಸ್ಪಿನ್ನರ್‌ ಹರ್ಭಜನ್ ಸಿಂಗ್ (Harbhajan Singh) ತಮ್ಮ ಕನಸಿನ ಸಾರ್ವಕಾಲಿಕ ಐಪಿಎಲ್‌ ತಂಡವನ್ನು (All-time IPL XI) ಪ್ರಕಟಿಸಿದ್ದು, ತಮ್ಮ ಕನಸಿನ ಐಪಿಎಲ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿಗೆ (Mahendra Singh Dhoni) ನಾಯಕ ಪಟ್ಟ ನೀಡಿದ್ದಾರೆ. ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಯಶಸ್ವಿ ಮ್ಯಾಚ್ ಫಿನಿಶರ್ ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡದ ದಿಗ್ಗಜ ಕ್ರಿಕೆಟಿಗ ಎಂ ಎಸ್ ಧೋನಿ, ಐಪಿಎಲ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ವಯಸ್ಸು 40 ವರ್ಷವಾಗಿದ್ದರೂ ಸಹಾ ಧೋನಿ ತನ್ನ ಖದರ್ ಮಾತ್ರ ಕೊಂಚವೂ ಮಸುಕಾಗದಂತೆ ನೋಡಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕು ಬಾರಿ ನಾಯಕನಾಗಿ ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಮಹೇಂದ್ರ ಸಿಂಗ್ ಧೋನಿ ತನ್ನದೇ ಆದ ಮಹತ್ವದ ಪಾತ್ರವನ್ನು ನಿಭಾಯಿಸಿದ್ದಾರೆ. ಆದರೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿ (IPL 2022) ಆರಂಭಕ್ಕೂ ಮುನ್ನವೇ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಹೀಗಾಗಿ ಸಿಎಸ್‌ಕೆ ಫ್ರಾಂಚೈಸಿಯು ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾಗೆ (Ravindra Jadeja) ನಾಯಕತ್ವ ಪಟ್ಟ ಕಟ್ಟಿದೆ. ಐಪಿಎಲ್‌ನಲ್ಲಿ ಧೋನಿ ಏಕಾಂಗಿಯಾಗಿ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 

ಇನ್ನು ಭಾರತದ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians), ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇದೀಗ ಭಜ್ಜಿ ತಮ್ಮ ಸಾರ್ವಕಾಲಿನ ಐಪಿಎಲ್ ತಂಡವನ್ನು ಹೆಸರಿಸಿದ್ದಾರೆ. ಈ ಕನಸಿಕ ತಂಡಕ್ಕೆ ನಾಯಕರಾಗಿ ಮಹೇಂದ್ರ ಸಿಂಗ್ ಧೋನಿಯನ್ನು ಆರಿಸಿಕೊಂಡಿದ್ದಾರೆ. ಹರ್ಭಜನ್ ಸಿಂಗ್ ತಮ್ಮ ಸಾರ್ವಕಾಲಿನ ಕನಸಿನ ಐಪಿಎಲ್ ತಂಡದಲ್ಲಿ ಐವರು ಭಾರತೀಯ ಆಟಗಾರರು ಹಾಗೂ ಆರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ.  

ಐಪಿಎಲ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕ್ರಿಸ್‌ ಗೇಲ್ (Chris Gayle) ಹಾಗೂ ರೋಹಿತ್ ಶರ್ಮಾ (Rohit Sharma) ಅವರನ್ನು ಹರ್ಭಜನ್ ಸಿಂಗ್ ತಮ್ಮ ತಂಡದ ಆರಂಭಿಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಈ ಇಬ್ಬರು ಆಟಗಾರರು ಆರಂಭಿಕ ಆಟಗಾರರಾಗಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ (Virat Kohli) ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾ ಮೂಲದ ಆಲ್ರೌಂಡರ್ ಶೇನ್ ವಾಟ್ಸನ್‌ (Shane Watson) ಸ್ಥಾನ ಪಡೆದಿದ್ದಾರೆ. 

IPL 2022: ರಾಜಸ್ಥಾನ ರಾಯಲ್ಸ್ ಎದುರು ಹರ್ಷಲ್‌ ಪಟೇಲ್ ಈ ರೀತಿ ಮಾಡಿದ್ದು ಸರಿನಾ..?

ಇನ್ನು ಹರ್ಭಜನ್ ಸಿಂಗ್ ಆಯ್ಕೆ ಮಾಡಿದ ಸಾರ್ವಕಾಲಿನ ಕನಸಿನ ತಂಡದಲ್ಲಿ ಮಧ್ಯಮ ಕ್ರಮಾಂಕ ಕೂಡಾ ಸಾಕಷ್ಟು ಬಲಿಷ್ಠವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್‌ (AB de Villiers), ದಿ ಗ್ರೇಟ್ ಮ್ಯಾಚ್ ಫಿನಿಶರ್ ಮಹೇಂದ್ರ ಸಿಂಗ್ ಧೋನಿ ಹಾಗೂ ಸ್ಟಾರ್ ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ, ಕೀರನ್ ಪೊಲ್ಲಾರ್ಡ್‌ (Kieron Pollard) ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಲ್ರೌಂಡರ್‌ಗಳು ಮಾತ್ರವಲ್ಲದೇ ಮಿಸ್ಟ್ರಿ ಸ್ಪಿನ್ನರ್ ಸುನಿಲ್ ನರೈನ್ (Sunil Narine), ಮಾರಕ ವೇಗಿಗಳಾದ ಲಸಿತ್ ಮಾಲಿಂಗ (Lasith Malinga) ಹಾಗೂ ಜಸ್ಪ್ರೀತ್ ಬುಮ್ರಾ (Jasprit Bumrah) ಸ್ಥಾನ ಪಡೆದಿದ್ದಾರೆ.

ಹರ್ಭಜನ್ ಸಿಂಗ್ ಸಾರ್ವಕಾಲಿಕ ಐಪಿಎಲ್ ತಂಡ ಹೀಗಿದೆ ನೋಡಿ

ಕ್ರಿಸ್ ಗೇಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶೇನ್ ವಾಟ್ಸನ್, ಎಬಿ ಡಿವಿಲಿಯರ್ಸ್, ಎಂ ಎಸ್ ಧೋನಿ (ವಿಕೆಟ್ ಕೀಪರ್ & ನಾಯಕ), ರವೀಂದ್ರ ಜಡೇಜಾ, ಕೀರನ್ ಪೊಲ್ಲಾರ್ಡ್, ಸುನಿಲ್ ನರೈನ್. ಲಸಿತ್ ಮಾಲಿಂಗ, ಜಸ್ಪ್ರೀತ್ ಬುಮ್ರಾ.

Follow Us:
Download App:
  • android
  • ios