ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಫೈನಲ್ ಪಂದ್ಯ ಮೇ.31ರ ಸಂಜೆ ನಡೆಯಲಿದೆ. ಈ ಪಂದ್ಯಕ್ಕೂ ಮೊದಲು ವರ್ಣರಂಜಿತ ಸಮಾರೋಪ ಸಮಾರಂಭ ಆಯೋಜಿಸಲಾಗಿದೆಯಾ? ಬಸಿಸಿಐ ಹೇಳುವುದೇನು?

ಅಹಮ್ಮದಾಬಾದ್ (ಮೇ.30) ಐಪಿಎಲ್ ಟೂರ್ನ ಅಂತಿಮ ಘಟ್ಟ ತಲುಪಿದೆ. ಮೇ.31ರ ಸಂಜೆ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಐಪಿಎಲ್ ಫೈನಲ್ ಹೋರಾಟ ನಡೆಯಲಿದೆ. ಟ್ರೋಫಿಗಾಗಿ ನಡೆಯುವ ಈ ಹೋರಾಟಕ್ಕಾಗಿ ಈಗಾಗಲೇ ಆರ್‌ಸಿಬಿ ಅಭಿಮಾನಿಗಳು ಅಹಮ್ಮದಾಬಾದ್‌ನತ್ತ ಪ್ರಯಾಣ ಬೆಳೆಸಿದ್ದಾರೆ. ಇದೀಗ ಫೈನಲ್ ಪಂದ್ಯಕ್ಕೂ ಮೊದಲು ಕ್ಲೋಸಿಂಗ್ ಸೆರೆಮನಿ ಆಯೋಜಿಸಲಾಗುತ್ತಾ? ಅನ್ನೋ ಚರ್ಚೆಗಳು ಶುರುವಾಗಿದೆ. ಈ ಬಾರಿಯ ಟೂರ್ನಿ ಪ್ರಕಾರ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಸಣ್ಣ ಕ್ಲೋಸಿಂಗ್ ಸೆರೆಮನಿ ಕಾರ್ಯಕ್ರಮ ಇದೆ ಎಂದು ಹೇಳಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಸಿಸಿಐ ಹೇಳಿದ್ದೇನು?

ಐಪಿಎಲ್ 2026 ಟೂರ್ನಿಯ ಫೈನಲ್ ಪಂದ್ಯಕ್ಕೂ ಮೊದಲು ಕ್ಲೋಸಿಂಗ್ ಸೆರೆಮನಿ ಕುರಿತು ಬಿಸಿಸಿಐ ಅಥವಾ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಪ್ಲೇ ಆಫ್ ಟೂರ್ನಿಯಲ್ಲಿ ಸಣ್ಣ ಮಟ್ಟಿನ ಕ್ಲೋಸಿಂಗ್ ಸರೆಮನಿ ಆಯೋಜಿಸಲಾಗಿತ್ತು. ಹೀಗಾಗಿ ಫೈನಲ್ ಪಂದ್ಯಕ್ಕೂ ಮೊದಲು ಇದೇ ರೀತಿಯ ವರ್ಣರಂಜಿತ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಹೆಚ್ಚಿದೆ. ಐಪಿಎಲ್ ಆರಂಭದಲ್ಲಿ ಐಪಿಎಲ್ ಚೆರ್ಮೇನ್ ಕುರಿತು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದರು. 2025ರ ಐಪಿಎಲ್ ಫೈನಲ್ ಬಳಿಕ ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವ ದುರಂತ ಘಟನೆಗಳಿಂದ ಬಿಸಿಸಿಐ ತೀವ್ರ ಮುತುವರ್ಜಿ ವಹಿಸಲಿದೆ. ಸ್ಪಂದನಾತ್ಮಕ ಹೆಜ್ಜೆ ಇಡಲಿದೆ ಎಂದಿದ್ದರು. ಈ ನಿಟ್ಟಿನಲ್ಲಿ ನೋಡುವುದಾದರೆ ಕ್ಲೋಸಿಂಗ್ ಸೆರೆಮನಿ ಸಾಧ್ಯತೆಗಳು ಕಡಿಮೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ

ಮೇ.31ರ ಸಂಜೆ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ಹೋರಾಟ ನಡೆಸಲಿದೆ. ಈ ಪಂದ್ಯ ಅಹಮ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಆರ್‌ಸಿಬಿ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಇತ್ತ ಗುಜರಾತ್ ಟೈಟಾನ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮಣಿಸಿ ಫೈನಲ್ ಪ್ರವೇಶಿಸಿದೆ.

ಹಾಲಿ ಚಾಂಪಿಯನ್ ಆರ್‌ಸಿಬಿ

2025ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಆರ್‌ಸಿಬಿ ಚಾಂಪಿಯನ್ ಕಿರೀಟ್ ಮುಡಿಗೇರಿಸಿಕೊಂಡಿತ್ತು. ಹಾಲಿ ಚಾಂಪಿಯನ್ ಆರ್‌ಸಿಬಿ ಈ ಬಾರಿ ಸತತ 2ನೇ ಬಾರಿಗೆ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ. 2026ರ ಟೂರ್ನಿಯಲ್ಲೂ ಚಾಂಪಿಯನ್ ಆಟ ಪ್ರದರ್ಶನ ನೀಡಿ ಫೈನಲ್ ಪ್ರವೇಶ ಮಾಡಿದೆ.

2022ರಲ್ಲಿ ಚಾಂಪಿಯನ್ ಆಗಿರುವ ಗುಜರಾತ್ ಟೈಟಾನ್ಸ್

ಗುಜರಾತ್ ಟೈಟಾನ್ಸ್ ಕೂಡ 2ನೇ ಟ್ರೋಫಿ ಗೆಲ್ಲಲು ತಯಾರಿ ನಡೆಸುತ್ತಿದೆ. 2022ರಲ್ಲಿ ಗುಜರಾತ್ ಟೈಟಾನ್ಸ್ ಟ್ರೋಫಿ ಗೆದ್ದುಕೊಂಡಿದೆ. 2023ರ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ರನ್ನರ್ ಅಪ್ ಸಾಧನೆ ಮಾಡಿದೆ.