ಆರ್‍ಸಿಬಿ ಓನರ್ ಅನನ್ಯಾ ಬಿರ್ಲಾ ಮತ್ತು ಮಾಜಿ ಆರ್‍ಸಿಬಿ ನಾಯಕ ಕೇವಿನ್ ಪೀಟರ್ಸನ್ ಜೊತೆಗಿನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಈ ಕುರಿತ ಒಂದು ಮಾಹಿತಿ ಇಲ್ಲಿದೆ.
ಆರ್‌ಸಿಬಿ (RCB) ಹೊಸ ಚೇರ್ಮನ್ ಆರ್ಯಮನ್ ಬಿರ್ಲಾ ಅವರ ಅಕ್ಕ ಅನನ್ಯಾ ಬಿರ್ಲಾ (Ananya Birla) ಏನೇ ಮಾಡಿದರೂ ಸುದ್ದಿ ಆಗುತ್ತೆ. ಫ್ಯಾಷನ್, ಇನ್ವೆಸ್ಟ್‌ಮೆಂಟ್, ಫಿಟ್ನೆಸ್.. ಹೀಗೇ ಯಾವುದೇ ಫೀಲ್ಡನಲ್ಲೂ ಕಾಣಿಸಿಕೊಂಡರೂ ದೊಡ್ಡ ಸುದ್ದಿ ಆಗ್ತಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ಸಖತ್ ವೈರಲ್ ಆಗ್ತಿದೆ.
ವೈರಲ್ ಫೋಟೋ ಹಿಂದಿನ ಕತೆ
ಇಂಗ್ಲೆಂಡ್‌ನ ಮಾಜಿ ಕ್ರಿಕೆಟ್ ದಂತಕತೆ ಕೇವಿನ್ ಪೀಟರ್‍ಸನ್ (Kevin Pietersen) ಜೊತೆಗೆ ಇರುವ ಫೋಟೋಗಳು ವೈರಲ್ ಆಗಿವೆ. ಇದನ್ನು ನೋಡಿದ ಆರ್‍ಸಿಬಿ ಅಭಿಮಾನಿಗಳು ಆರ್‍ಸಿಬಿ ಮಾಲೀಕರು, ಮಾಜಿ ಆರ್‍ಸಿಬಿ ಸ್ಟಾರ್ ಜೊತೆಗೆ. ಒಂದೇ ಫ್ರೇಮ್‌ನಲ್ಲಿ ಅನನ್ಯಾ ಬಿರ್ಲಾ ಮತ್ತು ಕೇವಿನ್ ಪೀಟರ್‍ಸನ್ (Kevin Pietersen with Ananya Birla). ಕಂಪ್ಲಿಟ್ಲೀ ಆರ್‍ಸಿಬಿ ರಕ್ತ ಎಂದು ಬರೆದುಕೊಂಡಿದ್ದಾರೆ.
ಫೋಟೋದಲ್ಲಿ ಏನಿದೆ ಅಂತಾ ನೋಡೋದಾದರೆ.. ಒಂದು ಕ್ರಿಕೆಟ್ ಮೈದಾನ. ಅಲ್ಲಿ ಪೀಟರ್‍ಸನ್ ಮತ್ತು ಅನನ್ಯಾ ಕ್ರಿಕೆಟ್ ಆಡುತ್ತಿರುವ ಫೋಟೋ ಅದಾಗಿದೆ. ಇನ್ನು ಅನನ್ಯಾ ಮತ್ತು ಪೀಟರ್‍ಸನ್ ಫೋಟೋಗೆ ಪೋಸ್ ನೀಡಿದ್ದಾರೆ. ಸದ್ಯ ವೈರಲ್ ಆಗ್ತಿರುವ ಫೋಟೋ ಅಸಲಿ ಫೋಟೋದಂತೆ ಕಾಣ್ತಿಲ್ಲ. ಫೋಟೋ ಮೇಲೆ ಗೂಗಲ್ ಜೈಮಿನಿ (Google Gemini) ಎಂದು ಬರೆಯಲಾಗಿದೆ. ಆದರೆ.. ಫೋಟೋ ಮಾತ್ರ ತುಂಬಾ ಇಂಟ್ರೆಸ್ಟಿಂಗ್ ಆಗಿದ್ದು, ಆರ್‍ಸಿಬಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಆರ್‍ಸಿಬಿ ಫ್ಯಾನ್ಸ್ ತಮ್ಮದೇ ರೀತಿಯಲ್ಲಿ ಆ ಫೋಟೋವನ್ನು ಅರ್ಥೈಸಿಕೊಂಡು ಲೈಕ್ ಜೊತೆಗೆ ಕಾಮೆಂಟ್ ಮಾಡುತ್ತಿದ್ದಾರೆ.
ಕೇವಿನ್ ಪೀಟರ್‍ಸನ್ ಅವರು 2009ರಲ್ಲಿ ಆರ್‍ಸಿಬಿ ಆಟಗಾರರಾಗಿ ಆಯ್ಕೆಯಾಗಿ ನಾಯಕರಾದರು. ಹರಾಜಿನಲ್ಲಿ 1.55 ಮಿಲಿಯನ್ ಡಾಲರ್‍ಗೆ ಅವರನ್ನು ಆರ್‍ಸಿಬಿ ಖರೀದಿಸಿತ್ತು. 2010ರಲ್ಲೂ ಆರ್‍ಸಿಬಿಯಲ್ಲಿದ್ದರು. 2012ರಲ್ಲಿ ಡೆಲ್ಲಿ ಡೇರ್‍ಡೆವಿಲ್ಸ್ ತಂಡವನ್ನು ಸೇರಿಕೊಂಡಿದ್ದರು.
ಇನ್ನು ಅನನ್ಯಾ ಬಿರ್ಲಾ ಬಗ್ಗೆ ಹೇಳೋದಾದರೆ.. ಅವರ ವಯಸ್ಸು 24, ವೃತ್ತಿ ಗಾಯನ, ಬ್ಯುಸಿನೆಸ್. ಇಷ್ಟು ಹೇಳಿದ್ರೆ ತಿಳಿಯುತ್ತೋ ಇಲ್ವೋ, ಆದರೆ ಬಿಲಿಯನೇರ್ ಬ್ಯುಸಿನೆಸ್‌ಮೆನ್ ಕುಮಾರಮಂಗಲಂ ಮಗಳು ಅಂದರೆ ಥಟ್ಟನೆ ಗೊತ್ತಾಗುತ್ತೆ. ಅಪ್ಪನ ಹೆಸರು ಹೇಳದೇ ಸ್ವತಂತ್ರವಾಗಿ ಬೆಳೆಯಲು ಈಕೆಗಿಷ್ಟ. ಪಾಪ್ ಮ್ಯೂಸಿಕ್‌ನಲ್ಲಿ ಎತ್ತರಕ್ಕೇರುತ್ತಿರುವ ಈ ಯುವ ಉದ್ಯಮಿ ಫಿಟ್‌ನೆಸ್‌ನಲ್ಲೇನೂ ಕಮ್ಮಿ ಇಲ್ಲ. ಉದ್ಯಮಿಯ ಮಗಳಲ್ಲದೆ ಸ್ವಂತ ಪರಿಶ್ರಮದಿಂದ ಉದ್ಯಮಿ, ಗಾಯಕಿ ಮತ್ತು ಹೂಡಿಕೆದಾರರಾಗಿ ಬೆಳೆದಿದ್ದಾರೆ. 17ನೇ ವಯಸ್ಸಿಗೆ 'ಸ್ವತಂತ್ರ ಮೈಕ್ರೋಫಿನ್' ಸ್ಥಾಪಿಸಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.
ಇತ್ತೀಚೆಗಷ್ಟೇ ಆರ್‌ಸಿಬಿ ತಂಡದ ಚುಕ್ಕಾಣಿ ಹಿಡಿದ ಆರ್ಯಮನ್ ವಿಕ್ರಮ್ ಬಿರ್ಲಾ ಇವರ ಸಹೋದರ. ಬಿರ್ಲಾ ಕುಟುಂಬದ ಪರಂಪರೆಯನ್ನು ಮುಂದುವರಿಸುವುದರ ಜೊತೆಗೆ ಇವರು ಸ್ವತಂತ್ರವಾಗಿ ಬೆಳೆದಿದ್ದಾರೆ. 1994 ರಲ್ಲಿ ಮುಂಬೈನಲ್ಲಿ ಜನಿಸಿದ ಅನನ್ಯಾ, ಮುಂಬೈನ ಅಮೇರಿಕನ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಮುಗಿಸಿದ್ದಾರೆ. ನಂತರ ವಿಶ್ವವಿಖ್ಯಾತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಮ್ಯಾನೇಜ್‌ಮೆಂಟ್ ವ್ಯಾಸಂಗ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಇವರಿಗೆ ಸಂಗೀತ ಮತ್ತು ಉದ್ಯಮ ಎರಡರಲ್ಲೂ ಆಸಕ್ತಿ ಹೊಂದಿದ್ದಾರೆ.


