ಚೆನ್ನೈ(ಅ.28): ಸೌತ್ ಆಫ್ರಿಕಾ ಸರಣಿ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಕೋಚ್, ಸಹಾಯಕ ಸಿಬ್ಬಂಧಿ ವಿಶ್ರಾಂತಿಗೆ ಜಾರಿದ್ದಾರೆ. ಆಫ್ರಿಕಾ ವಿರುದ್ದದ ಸರಣಿಯಲ್ಲಿ ಎಲ್ಲಾ ವಿಭಾಗದಲ್ಲಿ ಭಾರತ ಉತ್ತಮ ನಿರ್ವಹಣೆ ತೋರಿದೆ. ಅದರಲ್ಲೂ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಕೀಪಿಂಗ್, ತಂಡದ ಫೀಲ್ಡಿಂಗ್ ಕುರಿತು ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಫೀಲ್ಡಿಂಗ್ ಕೋಚ್ ಶ್ರೀಧರ್ ಟೀಂ ಇಂಡಿಯಾ ಕಂಡ ಅತ್ಯುತ್ತಮ ಫೀಲ್ಡರ್ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ: ಅಶ್ವಿನ್, ಜಡೇಜಾಗೆ ಮೊದಲ ಆದ್ಯತೆ; ವರಸೆ ಬದಲಿಸಿದ ಕೊಹ್ಲಿ!

ಈ ದಶಕದಲ್ಲಿ ಭಾರತ ಕಂಡ ಅತ್ಯುತ್ತಮ ಫೀಲ್ಡರ್ ರವೀಂದ್ರ ಜಡೇಜಾ. ಫೀಲ್ಡಿಂಗ್‌ನಲ್ಲಿ ಜಡೇಜಾಗಿಂತ ಉತ್ತಮ ಫೀಲ್ಡರ್ ಮತ್ತೊಬ್ಬರಿಲ್ಲ ಎಂದು ಶ್ರೀಧರ್ ಹೇಳಿದ್ದಾರೆ. ಜಡೇಜಾ ಮೈದಾನದಲ್ಲಿದ್ದರೆ, ಎದುರಾಳಿಗಳ ರನ್‌ಗೆ ಬ್ರೇಕ್ ಬೀಳಲಿದೆ. ರಿಸ್ಕ್ ತೆಗೆದುಕೊಂಡರೆ ಜಡ್ಡು ರನೌಟ್‌ಗೆ ಬಲಿಯಾಗುತ್ತಾರೆ. ಜಡೇಜಾ ಮೈದಾನದಲ್ಲಿದ್ದರೆ ಫೀಲ್ಡರ್ಸ್‌ಗಳಿಗೆ ಹೊಸ ಚೈತನ್ಯ ಸಿಗಲಿದೆ ಎಂದು ಶ್ರೀಧರ್ ಹೇಳಿದ್ದಾರೆ.

ಇದನ್ನೂ ಓದಿ: ವಾಸೀಂ ಅಕ್ರಂ, ರಂಗನಾ ಹೆರಾತ್ ದಾಖಲೆ ಮುರಿದ ಜಡೇಜಾ!

ಭಾರತದ ಫೀಲ್ಡಿಂಗ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ದಶಕಗಳ ಹಿಂದೆ ಬ್ಯಾಟಿಂಗ್ ಮಾತ್ರ ಭಾರತದ ಪ್ರಮುಖ ಅಸ್ತ್ರವಾಗಿತ್ತು. ಫೀಲ್ಡಿಂಗ್, ಬೌಲಿಂಗ್ ಕುರಿತು ಹೆಚ್ಚಿನ ಗಮನ ಇರಲಿಲ್ಲ. ಇದೀಗ  ಮೂರು ವಿಭಾಗದಲ್ಲಿ ಭಾರತ ಬಲಿಷ್ಠವಾಗಿದೆ. ಫಿಟ್ನೆಸ್ ಕೂಡ ಭಾರತದ ಫೀಲ್ಡಿಂಗ್‌ನಲ್ಲಿ ಸುಧಾರಣೆ ತಂದಿದೆ ಎಂದು ಶ್ರೀಧರ್ ಹೇಳಿದ್ದಾರೆ.

ಕಳೆದೆರಡು ವರ್ಷದಲ್ಲಿ ಭಾರತೀಯ ಫೀಲ್ಡಿಂಗ್‌ನಲ್ಲಿ ಅತೀ ದೊಡ್ಡ ಬದಲಾವಣೆಯಾಗಿದೆ. ಎಲ್ಲೂ ಯೋಯೋ ಟೆಸ್ಟ್ ಪಾಸಾಗಿರುವ ಕಾರಣ, ಯಾರಿಗೂ ಯಾವುದೂ ಅಸಾಧ್ಯವಲ್ಲ. ಆದರೆ ವಿದೇಶಿ ಪ್ರವಾಸದಲ್ಲಿ ಕೆಲ ಫೀಲ್ಡಿಂಗ್ ಸುಧಾರಣೆಗಳು ಆಗಬೇಕಿದೆ. ಬೌನ್ಸಿ ಪಿಚ್‌ನಲ್ಲಿ ಆಡುವಾಗ ಸ್ಲಿಪ್ ಫೀಲ್ಡರ್ ಪಾತ್ರ ಪ್ರಮುಖವಾಗಿದೆ. ಇದು ಸುಧಾರಣೆಯಾಗಬೇಕು ಎಂದು ಶ್ರೀಧರ್ ಹೇಳಿದ್ದಾರೆ.