ವಾಸೀಂ ಅಕ್ರಂ, ರಂಗನಾ ಹೆರಾತ್ ದಾಖಲೆ ಮುರಿದ ಜಡೇಜಾ!

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ 3ನೇ ದಿನ ಆಲ್ರೌಂಡರ್ ರವೀಂದ್ರ ಜಡೇಜಾ ದಿಗ್ಗಜ ಕ್ರಿಕೆಟಿಗರ ದಾಖಲೆ ಮುರಿದಿದ್ದಾರೆ. ಜಡ್ಡು ಮೋಡಿಗೆ ವಾಸೀಂ ಅಕ್ರಂ, ರಂಗನಾ ಹೆರಾಥ್ ದಾಖಲೆ ಪುಡಿ ಪುಡಿಯಾಗಿದೆ.

Ravindra jadeja breaks wasim akram rangana herath records in test cricket

ವಿಶಾಖಪಟ್ಟಣಂ(ಅ.04): ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸುತ್ತಿರುವ ಟೀಂ ಇಂಡಿಯಾ ಭರ್ಜರಿ ಮೇಲುಗೈ ಸಾಧಿಸಿದೆ. ಸೌತ್ ಆಫ್ರಿಕಾ ತಂಡವನ್ನು ಆಲೌಟ್ ಮಾಡಲು ತುದಿಗಾಲಲ್ಲಿ ನಿಂತಿರುವ ಭಾರತ ತಂಡ ಕೆಲ ದಾಖಲೆ ಬರೆದಿದೆ.  ದ್ವಿಶತಕದತ್ತ ಮುನ್ನಗ್ಗುತ್ತಿದ್ದ ಡೀನ್ ಎಲ್ಗರ್ ವಿಕೆಟ್ ಕಬಳಿಸೋ ಮೂಲಕ ರವೀಂದ್ರ ಜಡೇಜಾ ದಿಗ್ಗಜ ಕ್ರಿಕೆಟಿಗರ ದಾಖಲೆ ಪುಡಿ ಮಾಡಿದ್ದಾರೆ. 

ಇದನ್ನೂ ಓದಿ: ವೈಜಾಗ್ ಟೆಸ್ಟ್: ಮಿಂಚಿದ ಅಶ್ವಿನ್, ಆಲೌಟ್ ಹೊಸ್ತಿಲಲ್ಲಿ ಆಫ್ರಿಕಾ

ಎಲ್ಗರ್ ವಿಕೆಟ್ ಕಬಳಿಸೋ ಮೂಲಕ ರವೀಂದ್ರ ಜಡೇಜಾ ಅತೀ ವೇಗದಲ್ಲಿ 200 ವಿಕೆಟ್ ಕಬಳಿಸಿದ ಎಡಗೈ ಬೌಲರ್ ಅನ್ನೋ ದಾಖಲೆ ಬರೆದಿದ್ದಾರೆ. ರವೀಂದ್ರ ಜಡೇಜಾ 44 ಟೆಸ್ಟ್ ಪಂದ್ಯದಲ್ಲಿ 200 ವಿಕೆಟ್ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಶ್ರೀಲಂಕಾದ ಸ್ಪಿನ್ನರ್ ರಂಗನಾ ಹೆರಾಥ್ 47 ಪಂದ್ಯದಲ್ಲಿ 200 ವಿಕೆಟ್ ಕಬಳಿಸಿದ್ದರು.

ಇದನ್ನೂ ಓದಿ: ರೋಹಿತ್‌ಗೆ ಡ್ರೆಸ್ಸಿಂಗ್ ರೂಂ ಬಾಗಿಲು ತೆರೆದ ನಾಯಕ ಕೊಹ್ಲಿ..!

ಪಾಕಿಸ್ತಾನ ದಿಗ್ಗಜ ವಾಸೀಂ ಅಕ್ರಂ ಸಾಧನೆಯನ್ನು ಜಡೇಜಾ ಹಿಂದಿಕ್ಕಿದ್ದಾರೆ. ಅಕ್ರಂ 51 ಪಂದ್ಯಗಳಲ್ಲಿ ಅತೀ ವೇಗದಲ್ಲಿ 200 ವಿಕೆಟ್ ಸಾಧನೆ ಮಾಡಿದ್ದಾರೆ. 

ಅತೀ ವೇಗದಲ್ಲಿ 200 ವಿಕೆಟ್ ಕಬಳಿಸಿದ ಎಡಗೈ ಬೌಲರ್:
ರವೀಂದ್ರ ಜಡೇಜಾ - 44(ಪಂದ್ಯ)
ರಂಗನಾ ಹೆರಾಥ್ - 47(ಪಂದ್ಯ)
ವಾಸೀಂ ಅಕ್ರಂ - 51(ಪಂದ್ಯ)

ಮೊದಲ ಇನ್ನಿಂಗ್ಸ್‌ನಲ್ಲಿ ಸೌತ್ ಆಫ್ರಿಕಾ ತಂಡದ 8 ವಿಕೆಟ್ ಕಬಳಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ರವೀಂದ್ರ ಜಡೇಜಾ 2, ಆರ್ ಅಶ್ವಿನ್ 5 ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಕಬಳಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಸೌತ್ ಆಫ್ರಿಕಾ 117 ರನ್ ಹಿನ್ನಡೆಯಲ್ಲಿದೆ.
 

Latest Videos
Follow Us:
Download App:
  • android
  • ios