ರಣಜಿ ಟ್ರೋಫಿ: ಮೊದಲ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ
ಈಗಾಗಲೇ ವಿಜಯ್ ಹಜಾರೆ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಜಯಿಸಿರುವ ಕರ್ನಾಟಕ ಇದೀಗ ರಣಜಿ ಟ್ರೋಫಿ ಗೆಲ್ಲುವತ್ತ ಚಿತ್ತ ನೆಟ್ಟಿದೆ. ಡಿಸೆಂಬರ್ 09ರಿಂದ ತಮಿಳುನಾಡು ವಿರುದ್ಧ ಆರಂಭವಾಗಲಿರುವ ಮೊದಲ ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ಕರ್ನಾಟಕ ತಂಡ ಪ್ರಕಟವಾಗಿದೆ. ಯಾರೆಲ್ಲ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ...
ಬೆಂಗಳೂರು(ಡಿ.05): 2019-20ರ ರಣಜಿ ಋುತುವಿಗೆ ದಿನಗಣನೆ ಆರಂಭಗೊಂಡಿದ್ದು, ಡಿ.9ರಿಂದ ದಿಂಡಿಗಲ್ನಲ್ಲಿ ನಡೆಯಲಿರುವ ತಮಿಳುನಾಡು ವಿರುದ್ಧದ ‘ಬಿ’ ಗುಂಪಿನ ಪಂದ್ಯಕ್ಕೆ ಬುಧವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) 15 ಸದಸ್ಯರ ತಂಡವನ್ನು ಪ್ರಕಟಿಸಿತು. ತಂಡಕ್ಕೆ ಕರುಣ್ ನಾಯರ್ ನಾಯಕರಾಗಿದ್ದು, ಮಯಾಂಕ್ ಅಗರ್‌ವಾಲ್, ದೇವದತ್ ಪಡಿಕ್ಕಲ್ ಸ್ಥಾನ ಪಡೆದಿದ್ದಾರೆ.
ರಣಜಿ ಟೂರ್ನಿಗೆ ಸಜ್ಜಾಗ್ತಿದೆ ಕರ್ನಾಟಕ
ವೆಸ್ಟ್‌ಇಂಡೀಸ್ ವಿರುದ್ಧ ಸರಣಿಗೆ ಆಯ್ಕೆಯಾಗಿರುವ ಕಾರಣ, ಕೆ.ಎಲ್.ರಾಹುಲ್ ಹಾಗೂ ಮನೀಶ್ ಪಾಂಡೆಯನ್ನು ಆಯ್ಕೆಗೆ ಪರಿಗಣಿಸಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿರುವ ಕರ್ನಾಟಕ, ಶ್ರೇಯಸ್ ಗೋಪಾಲ್, ಕೆ.ಗೌತಮ್ ಹಾಗೂ ಜೆ.ಸುಚಿತ್ರಂತಹ ಅನುಭವಿ ಸ್ಪಿನ್ನರ್‌ಗಳನ್ನು ಹೊಂದಿದೆ. ಆದರೆ ತಂಡದ ವೇಗದ ಪಡೆ ದುರ್ಬಲವಾಗಿ ಕಾಣುತ್ತಿದೆ. ರೋನಿತ್ ಮೋರೆ ವೇಗದ ಪಡೆಯನ್ನು ಮುನ್ನಡೆಸಲಿದ್ದು, ವಿ.ಕೌಶಿಕ್, ಡೇವಿಡ್ ಮಥಾಯಿಸ್ ಹಾಗೂ ಕೆ.ಎಸ್.ದೇವಯ್ಯ ಸ್ಥಾನ ಪಡೆದಿದ್ದಾರೆ. ಅನುಭವಿ ವೇಗಿ ಅಭಿಮನ್ಯು ಮಿಥುನ್, ಯುವ ವೇಗಿ ಪ್ರಸಿದ್ಧ್ ಕೃಷ್ಣಗೆ ಸ್ಥಾನ ಸಿಕ್ಕಿಲ್ಲ.
ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಸ್ಮಿತ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೊಹ್ಲಿ
ತಂಡ: ಕರುಣ್ ನಾಯರ್ (ನಾಯಕ), ಮಯಾಂಕ್ ಅಗರ್‌ವಾಲ್, ದೇವದತ್ ಪಡಿಕ್ಕಲ್, ನಿಶ್ಚಲ್.ಡಿ, ಆರ್.ಸಮಥ್ರ್, ಪವನ್ ದೇಶಪಾಂಡೆ, ಕೆ.ಗೌತಮ್, ಶ್ರೇಯಸ್ ಗೋಪಾಲ್ (ಉಪನಾಯಕ), ಜೆ.ಸುಚಿತ್, ಶರತ್ ಬಿ.ಆರ್ (ವಿಕೆಟ್ ಕೀಪರ್), ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ರೋನಿತ್ ಮೋರೆ, ವಿ.ಕೌಶಿಕ್, ಡೇವಿಡ್ ಮಥಾಯಿಸ್, ಕೆ.ಎಸ್.ದೇವಯ್ಯ.
ರಣಜಿ: ಸೌರಾಷ್ಟ್ರ ಪರ ಆಡಲಿರುವ ಪೂಜಾರ
ರಾಜ್‌ಕೋಟ್: ಡಿ.9ರಿಂದ ಆರಂಭವಾಗಲಿರುವ 2019-20ರ ರಣಜಿ ಟ್ರೋಫಿಯಲ್ಲಿ ಭಾರತ ತಂಡದ ತಾರಾ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಸೌರಾಷ್ಟ್ರ ಪರ ಆಡಲಿದ್ದಾರೆ. ಮೊದಲೆರಡು ಪಂದ್ಯಗಳಿಗೆ ಬುಧವಾರ ತಂಡ ಪ್ರಕಟಗೊಂಡಿದ್ದು, ಪಟ್ಟಿಯಲ್ಲಿ ಪೂಜಾರ ಹೆಸರಿದೆ.
2020ರ ಫೆಬ್ರವರಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅಜೇಯವಾಗಿ ಉಳಿದಿರುವ ಭಾರತ ತಂಡಕ್ಕೆ ಈ ಸರಣಿ ಅತ್ಯಂತ ಮಹತ್ವದೆನಿಸಿದೆ. ಈ ನಿಟ್ಟಿನಲ್ಲಿ ಉತ್ತಮ ತಯಾರಿ ನಡೆಸಲು ಪೂಜಾರ ರಣಜಿ ಟ್ರೋಫಿಯನ್ನು ಬಳಸಿಕೊಳ್ಳುವುದಾಗಿ ತಿಳಿದುಬಂದಿದೆ. ಮೊದಲ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಹಿಮಾಚಲ ಪ್ರದೇಶವನ್ನು ಎದುರಿಸಲಿದೆ.