Asianet Suvarna News Asianet Suvarna News

ಕರ್ನಾಟಕ vs ಗೋವಾ ರಣಜಿ ಫೈಟ್‌ ಇಂದಿನಿಂದ

8 ಬಾರಿ ಚಾಂಪಿಯನ್‌ ಕರ್ನಾಟಕ ತಂಡ ಪಂಜಾಬ್‌ ವಿರುದ್ಧದ ಬೃಹತ್‌ ಗೆಲುವಿನೊಂದಿಗೆ ಈ ಬಾರಿ ಟೂರ್ನಿಗೆ ಕಾಲಿರಿಸಿತ್ತು. ಆದರೆ 2ನೇ ಪಂದ್ಯದಲ್ಲಿ 109 ರನ್‌ ಗುರಿ ಬೆನ್ನತ್ತುವಾಗ 103 ರನ್‌ಗೆ ಆಲೌಟಾಗಿ ಆಘಾತಕಾರಿ ಸೋಲನುಭವಿಸಿತ್ತು. ತಂಡ ಸದ್ಯ ಎಲೈಟ್‌ ‘ಸಿ’ ಗುಂಪಿನಲ್ಲಿ 6 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದು, ಗೋವಾ ವಿರುದ್ಧ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರಲು ಕಾಯುತ್ತಿದೆ.

Ranji Trophy Karnataka take on Goa Challenge in Mysore kvn
Author
First Published Jan 19, 2024, 9:31 AM IST

ಮೈಸೂರು(ಜ.19): ಗುಜರಾತ್‌ ಸುಲಭದಲ್ಲಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಅತಿ ಆತ್ಮವಿಶ್ವಾಸದಿಂದಾಗಿ ಸೋಲನುಭವಿಸಿದ್ದ ಕರ್ನಾಟಕ ಮತ್ತೆ ಗೆಲುವಿನ ಹಳಿಗೆ ಮರಳಲು ಕಾಯುತ್ತಿದ್ದು, ರಣಜಿ ಟ್ರೋಫಿ ಟೂರ್ನಿಯ ತನ್ನ 3ನೇ ಪಂದ್ಯದಲ್ಲಿ ಶುಕ್ರವಾರದಿಂದ ಗೋವಾ ವಿರುದ್ಧ ಕಣಕ್ಕಿಳಿಯಲಿದೆ. ಪಂದ್ಯಕ್ಕೆ ಮೈಸೂರು ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

8 ಬಾರಿ ಚಾಂಪಿಯನ್‌ ರಾಜ್ಯ ತಂಡ ಪಂಜಾಬ್‌ ವಿರುದ್ಧದ ಬೃಹತ್‌ ಗೆಲುವಿನೊಂದಿಗೆ ಈ ಬಾರಿ ಟೂರ್ನಿಗೆ ಕಾಲಿರಿಸಿತ್ತು. ಆದರೆ 2ನೇ ಪಂದ್ಯದಲ್ಲಿ 109 ರನ್‌ ಗುರಿ ಬೆನ್ನತ್ತುವಾಗ 103 ರನ್‌ಗೆ ಆಲೌಟಾಗಿ ಆಘಾತಕಾರಿ ಸೋಲನುಭವಿಸಿತ್ತು. ತಂಡ ಸದ್ಯ ಎಲೈಟ್‌ ‘ಸಿ’ ಗುಂಪಿನಲ್ಲಿ 6 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದು, ಗೋವಾ ವಿರುದ್ಧ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರಲು ಕಾಯುತ್ತಿದೆ.

AB De Villiers: ಎಬಿಡಿ ಕ್ರಿಕೆಟ್ ಜಗತ್ತಿನ ಸೂಪರ್‌ಮ್ಯಾನ್ ಎನ್ನಲು ಈ 4 ದಾಖಲೆಗಳೇ ಸಾಕು..!

ಅತ್ತ ಗೋವಾ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿದ್ದು, ತ್ರಿಪುರಾ ವಿರುದ್ಧ ಸೋತಿದ್ದರೆ ಚಂಡೀಗಢ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ತಂಡ ಗುಂಪಿನಲ್ಲಿ 3 ಅಂಕಗಳೊಂದಿಗೆ 5ನೇ ಸ್ತಾನದಲ್ಲಿದೆ.

ಪಂದ್ಯ: ಬೆಳಗ್ಗೆ 9.30ಕ್ಕೆ ಆರಂಭ

18ರಲ್ಲಿ 13 ಪಂದ್ಯ ಗೆದ್ದಿದೆ ಕರ್ನಾಟಕ

ಕರ್ನಾಟಕ ಹಾಗೂ ಗೋವಾ ತಂಡಗಳು ಈ ವರೆಗೆ 18 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ 13ರಲ್ಲಿ ರಾಜ್ಯ ತಂಡ ಗೆಲುವು ಸಾಧಿಸಿದೆ. ಕರ್ನಾಟಕ ಕೇವಲ 1 ಪಂದ್ಯದಲ್ಲಿ ಮಾತ್ರ ಸೋಲನುಭವಿಸಿದ್ದು, 4 ಪಂದ್ಯಗಳು ಡ್ರಾಗೊಂಡಿವೆ. ಈ ಬಾರಿಯೂ ರಾಜ್ಯ ತಂಡವೇ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದೆ.

ಟೀಂ ಇಂಡಿಯಾದಲ್ಲಿದ್ದಾರೆ ರಾಮ-ಲಕ್ಷ್ಮಣರು..! ಒಬ್ಬ ಕನ್ನಡದ ಮನೆ ಮಗ.. ಮತ್ತೊಬ್ಬ ಕರ್ನಾಟಕದ ದತ್ತು ಮಗ..!

ಟಿ20 ರ್‍ಯಾಂಕಿಂಗ್‌: 6ನೇ ಸ್ಥಾನಕ್ಕೆ ಜಿಗಿದ ಜೈಸ್ವಾಲ್‌

ದುಬೈ: ಭಾರತದ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್ ಐಸಿಸಿ ಟಿ20 ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಜೀವನಶ್ರೇಷ್ಠ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮಂಗಳವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ 22ರ ಜೈಸ್ವಾಲ್‌ 7 ಸ್ಥಾನ ಪ್ರಗತಿ ಸಾಧಿಸಿದರು. ಶಿವಂ ದುಬೆ 265ನೇ ಸ್ಥಾನದಿಂದ 58ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇದೇ ವೇಳೆ ಬೌಲರ್‌ಗಳ ಪಟ್ಟಿಯಲ್ಲಿ ಅಕ್ಷರ್‌ ಪಟೇಲ್‌ 12 ಸ್ಥಾನ ಪ್ರಗತಿ ಸಾಧಿಸಿ 5ನೇ ಸ್ಥಾನಕ್ಕೇರಿದ್ದು, ರವಿ ಬಿಷ್ಣೋಯ್‌ 6ನೇ ಸ್ಥಾನದಲ್ಲಿದ್ದಾರೆ. ಅಕ್ಷರ್‌ ಆಲ್ರೌಂಡರ್‌ಗಳ ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿದ್ದು, ಹಾರ್ದಿಕ್ ಪಾಂಡ್ಯ 4ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.
 

Follow Us:
Download App:
  • android
  • ios