Asianet Suvarna News Asianet Suvarna News

ಟೀಂ ಇಂಡಿಯಾದಲ್ಲಿದ್ದಾರೆ ರಾಮ-ಲಕ್ಷ್ಮಣರು..! ಒಬ್ಬ ಕನ್ನಡದ ಮನೆ ಮಗ.. ಮತ್ತೊಬ್ಬ ಕರ್ನಾಟಕದ ದತ್ತು ಮಗ..!

ಒಬ್ಬ ಖಡ್ಗವಾದ್ರೆ, ಮತ್ತೊಬ್ಬ ಕಡುಕೋಪದ ಸರದಾರ. ಒಬ್ಬ ಶಕ್ತಿಯಾದ್ರೆ ಇನ್ನೊಬ್ಬ ಸೈನ್ಯ. ಇಬ್ಬರೂ ಒಂದಾಗಿ ನಿಂತ್ರು ಅಂದ್ರೆ ಶತ್ರು ಸೈನ್ಯ ಧೂಳೀಪಟ. ಟೀಂ ಇಂಡಿಯಾ ಈ ರಾಮ-ಲಕ್ಷ್ಮಣರು ತಂಡದ ಅಸಲಿ ಶಕ್ತಿ. ಅದ್ರಲ್ಲೂ ಕನ್ನಡಿಗ ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಶಿಫ್ಟ್ ಆದ್ಮೇಲೆ ತಂಡದ ಆಧಾರಸ್ಥಂಭವಾಗಿ ನಿಂತಿರೋ ರಾಮ-ಲಕ್ಷ್ಮಣರಿವರು.

KL Rahul and Virat Kohli Indian Team model brothers kvn
Author
First Published Jan 18, 2024, 2:21 PM IST

ಬೆಂಗಳೂರು(ಜ.18) ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ರಾಮನ ಜೊತೆ ಪ್ರಿಯ ತಮ್ಮ ಲಕ್ಷ್ಮಣನೂ ಮಂದಿರದಲ್ಲಿ ವಿರಾಜಮಾನನಾಗುವ ದಿನ ಹತ್ತಿರ ಬರ್ತಾ ಇದೆ.ಇದಕ್ಕೂ ಟೀಂ ಇಂಡಿಯಾಗೂ ಏನು ಲಿಂಕ್ ಅಂತೀರಾ? ಈ ಸ್ಟೋರಿ ನೋಡಿ ನಿಮ್ಗೇ ಗೊತ್ತಾಗತ್ತೆ.

ಇವರು ಕ್ರಿಕೆಟ್ ಮೈದಾನದ ಅಣ್ಣ-ತಮ್ಮಂದಿರು..!

ಅಣ್ಣ-ತಮ್ಮಂದಿರು ಹೇಗಿರ್ಬೇಕು ಅಂದ್ರೆ ರಾಮ-ಲಕ್ಷ್ಮಣರಂತೆ ಇರ್ಬೇಕು ಅಂತಾರೆ. ಯೆಸ್, ರಾಮ-ಲಕ್ಷ್ಮಣರದ್ದು ಸ್ವಾರ್ಥವಿಲ್ಲದ ಸಂಬಂಧ. ಈ ಜಗತ್ತಿನಲ್ಲಿ ಸೂರ್ಯ ಚಂದ್ರರಿರೋವರೆಗೂ ಅಣ್ಣ-ತಮ್ಮಂದಿರ ಸಂಬಂಧಕ್ಕೆ ಉದಾಹರಣೆಯಾಗಿ ನಿಲ್ಲೋರೇ ರಾಮ ಮತ್ತು ಲಕ್ಷ್ಮಣ. ಭಾರತ ಕ್ರಿಕೆಟ್ ತಂಡದ ರಾಮ-ಲಕ್ಷ್ಮಣ ಜೋಡಿಯೇ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್.

ಕೊನೆಗೂ ನೋವು ಹೊರಹಾಕಿದ ಚಹಲ್ ಪತ್ನಿ ಧನಶ್ರೀ ವರ್ಮಾ..! ಡಿಸೆಂಬರ್‌ನಿಂದ ಸರಿಯಾಗಿ ನಿದ್ರೆ ಮಾಡಿಲ್ವಂತೆ..!

ಯೆಸ್, ಒಬ್ಬ ಖಡ್ಗವಾದ್ರೆ, ಮತ್ತೊಬ್ಬ ಕಡುಕೋಪದ ಸರದಾರ. ಒಬ್ಬ ಶಕ್ತಿಯಾದ್ರೆ ಇನ್ನೊಬ್ಬ ಸೈನ್ಯ. ಇಬ್ಬರೂ ಒಂದಾಗಿ ನಿಂತ್ರು ಅಂದ್ರೆ ಶತ್ರು ಸೈನ್ಯ ಧೂಳೀಪಟ. ಟೀಂ ಇಂಡಿಯಾ ಈ ರಾಮ-ಲಕ್ಷ್ಮಣರು ತಂಡದ ಅಸಲಿ ಶಕ್ತಿ. ಅದ್ರಲ್ಲೂ ಕನ್ನಡಿಗ ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಶಿಫ್ಟ್ ಆದ್ಮೇಲೆ ತಂಡದ ಆಧಾರಸ್ಥಂಭವಾಗಿ ನಿಂತಿರೋ ರಾಮ-ಲಕ್ಷ್ಮಣರಿವರು.

ರಾಹುಲ್ ಪಾಲಿಗೆ ಅಣ್ಣನಾಗಿ ನಿಂತಿದ್ದಾನೆ ವಿರಾಟ್ ಕೊಹ್ಲಿ..!

ಕೆ.ಎಲ್ ರಾಹುಲ್ ಕನ್ನಡದ ಮನೆ ಮಗನಾದ್ರೆ, ವಿರಾಟ್ ಕೊಹ್ಲಿ ಕರ್ನಾಟಕದ ದತ್ತು ಪುತ್ರ. ರಾಹುಲ್ ಟೀಂ ಇಂಡಿಯಾ ಆಪತ್ಬಾಂಧವ, ಮಿಸ್ಟರ್ ಡಿಪೆಂಡೆಬಲ್ ಅಂತ ಕರೆಸಿಕೊಳ್ತಾನೆ. ರಾಹುಲ್‌ಗೆ ಇಂಥದ್ದೊಂದು ಸ್ಥಾನ ಸಿಗುವಂತಾಗಲು ಕಾರಣ ವಿರಾಟ್ ಕೊಹ್ಲಿ. ಹೌದು. ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಅಣ್ಣನ ಸ್ಥಾನದಲ್ಲಿ ನಿಂತು ಸಪೋರ್ಟ್ ಮಾಡಿದ್ರಿಂದ್ಲೇ ಕೆ.ಎಲ್ ರಾಹುಲ್ ಇವತ್ತು ಸೂಪರ್ ಸ್ಟಾರ್ ಆಗಿ ಬೆಳೆದು ನಿಂತಿರೋದು. 

ರಾಹುಲ್ "ಜಲ" ವಿರಾಟ್ "ಜ್ವಾಲೆ"..!

ಕಿಂಗ್ ಕೊಹ್ಲಿ ಯಾವಾಗ್ಲೂ ಉರಿಯೋ ಜ್ವಾಲಾಮುಖಿ. ರಾಹುಲ್ ನೀರಿನಂತೆ ಕೂಲ್ ಕೂಲ್. ಇಬ್ಬರದ್ದು ಡೆಡ್ಲಿ ಕಾಂಬಿನೇಷನ್. ಇಬ್ಬರೂ ಒಂದಾಗಿ ಅಮೋಘ ಜತೆಯಾಟಗಳ ಮೂಲಕ ಭಾರತ ತಂಡಕ್ಕೆ ಹತ್ತಾರು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ, 2014ರಲ್ಲಿ ರಾಹುಲ್ ತಮ್ಮ ಕರಿಯರ್’ನ ಮೊದಲ ಟೆಸ್ಟ್ ಶತಕ ಬಾರಿಸಿದಾಗ ಜೊತೆಯಲ್ಲಿ ಕ್ರೀಸ್’ನಲ್ಲಿದ್ದದ್ದು ವಿರಾಟ್ ಕೊಹ್ಲಿ. ಅವತ್ತಿಂದ ಶುರುವಾದ ಈ ರಾಮ-ಲಕ್ಷ್ಮಣರ ಜುಗಲ್ಬಂದಿ  10 ವರ್ಷಗಳಿಂದ ನಿರಂತರ.

ಮುದ್ದೇನಹಳ್ಳಿ ಹೊಸ ಕ್ರಿಕೆಟ್‌ ಸ್ಟೇಡಿಯಂ ಉದ್ಘಾಟನೆ ಇಂದು; ಉದ್ಘಾಟನಾ ಪಂದ್ಯ ಆಡಲಿರುವ ಸನ್ನಿ, ಯುವಿ, ತೆಂಡುಲ್ಕರ್

ಈ ಹಿಂದೆಯೂ ಟೀಂ ಇಂಡಿಯಾ ರಾಮ ಲಕ್ಷ್ಮಣರನ್ನ ನೋಡಿದೆ. ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ರಾಮ ಲಕ್ಷ್ಮಣರಂತೆ ಇದ್ದರು. ಇಬ್ಬರದ್ದು ನಿಶ್ವಾರ್ಥ ಸೇವೆ. ಈಗ ಆ ಸಾಲಿಗೆ ಕೊಹ್ಲಿ-ರಾಹುಲ್ ಸೇರ್ತಿದ್ದಾರೆ. ಏಷ್ಯಾಕಪ್​-ಒನ್​ಡೇ ವರ್ಲ್ಡ್​​ಕಪ್​​ನಂತೆ ಟಿ20 ವಿಶ್ವಕಪ್​ನಲ್ಲೂ ವಿರಾಟ್​-ರಾಹುಲ್ ಜೋಡಿಯ ಜುಗಲ್​​ಬಂದಿ ಮುಂದುವರೆಯಲಿ ಅನ್ನೋದೇ ಅಭಿಮಾನಿಗಳ ಆಶಯ.
 
ಸ್ಪೋರ್ಟ್ಸ್​ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Follow Us:
Download App:
  • android
  • ios