ದಿಂಡುಗಲ್(ಡಿ.12): ವಿಜಯ್ ಹಜಾರೆ, ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿ ಗೆದ್ದ ದೇಸಿ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಕರ್ನಾಟಕ ಇದೀಗ ರಣಜಿ ಟ್ರೋಫಿಯಲ್ಲಿ ಶುಭಾರಂಭ ಮಾಡಿದೆ. ಸಾಂಪ್ರಾದಾಯಿಕ ಎದುರಾಳಿ ತಮಿಳುನಾಡು ವಿರುದ್ಧದ ಮೊದಲ ರಣಜಿ ಪಂದ್ಯದಲ್ಲಿ ಕರ್ನಾಟಕ 26 ರನ್ ಗೆಲುವು ಸಾಧಿಸಿದೆ.

ಇದನ್ನೂ ಓದಿ: ಸತತ 2 ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮೊದಲ ತಂಡ ಕರ್ನಾಟಕ!

ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ ದೇವದತ್ ಪಡಿಕ್ಕಲ್ 78, ಪವನ್ ದೇಶಪಾಂಡೆ 65 ಹಾಗೂ ಕೆ ಗೌತಮ್ ಸಿಡಿಸಿದ 51 ರನ್‌ಗಳ ನೆರವಿನಿಂದ ಕರ್ನಾಟಕ 336 ರನ್‌ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ತಮಿಳುನಾಡು, ಕೆ ಗೌತಮ್ ಶಾಕ್ ನೀಡಿದರು. 6 ವಿಕೆಟ್ ಕಬಳಿಸಿ ತಮಿಳುನಾಡು ತಂಡವನ್ನು 307 ರನ್‌ಗಳಿಗ ಆಲೌಟ್ ಮಾಡಿದರು.

ಇದನ್ನೂ ಓದಿ: ವಿಜಯ್ ಹಜಾರೆ ಟ್ರೋಫಿ; ತಮಿಳುನಾಡು ಮಣಿಸಿ ಕಪ್ ಗೆದ್ದ ಕರ್ನಾಟಕ!

2ನೇ ಇನಿಂಗ್ಸ್‌ನಲ್ಲಿ ಕರ್ನಾಟಕ 151 ರನ್‌ಗಳಿಗೆ ಆಲೌಟ್ ಆಯಿತು. ದೇವದತ್ ಪಡಿಕ್ಕಲ್ 31, ಶರತ್ ಬಿಎರ್ 28 , ಕೆ ಗೌತಮ್ ಹಾಗೂ ಡಿವೇಡಿ ಮಥಾಯಿಸ್ ತಲಾ 22 ರನ್ ಸಿಡಿಸಿದರು. ಈ ಮೂಲಕ ತಮಿಳುನಾಡು ಗೆಲುವಿಗೆ 181 ರನ್ ಟಾರ್ಗೆಟ್ ನೀಡಲಾಯಿತು. ಈ ಗುರಿ ಬೆನ್ನಟ್ಟಿದ್ದ ತಮಿಳು ನಾಡು ಮತ್ತೆ ಕೆ ಗೌತಮ್ ದಾಳಿಗೆ ತತ್ತರಿಸಿತು. 8 ವಿಕೆಟ್ ಕಬಳಿಸಿದ ಗೌತಮ್ ತಮಿಳುನಾಡು ತಂಡವನ್ನು 154 ರನ್‌ಗಳಿಗ ಕಟ್ಟಿಹಾಕಿತು. ಇದರೊಂದಿಗೆ 26 ರನ್ ಗೆಲುವು ಸಾಧಿಸಿತು.