ನಾಗ್ಪುರದಲ್ಲಿ 2024-25ರ ರಣಜಿ ಟ್ರೋಫಿ ಫೈನಲ್ ನಡೆಯುತ್ತಿದ್ದು, ಕೇರಳ ಮತ್ತು ವಿದರ್ಭ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಟಾಸ್ ಗೆದ್ದ ಕೇರಳ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೇರಳ ಮೊದಲ ಬಾರಿಗೆ ಫೈನಲ್ ತಲುಪಿದ್ದು, ವಿದರ್ಭ ನಾಲ್ಕನೇ ಬಾರಿ ಫೈನಲ್ ಆಡುತ್ತಿದೆ. ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿ ಸೋತ ವಿದರ್ಭ ರಣಜಿ ಗೆಲ್ಲಲು ಪ್ರಯತ್ನಿಸಲಿದೆ. ಪಂದ್ಯವು ಐದು ದಿನಗಳ ಕಾಲ ನಡೆಯಲಿದೆ.

ನಾಗ್ಪುರ: 2024-25ರ ರಣಜಿ ಟ್ರೋಫಿ ಪ್ರಥಮ ದರ್ಜೆ ದೇಸಿ ಕ್ರಿಕೆಟ್ ಟೂರ್ನಿಯ ಫೈನಲ್ ಹಣಾಹಣಿಗೆ ನಾಗ್ಪುರದಲ್ಲಿ ವೇದಿಕೆ ಸಜ್ಜಾಗಿದೆ. ಪ್ರಶಸ್ತಿಗಾಗಿ ಕೇರಳ ಹಾಗೂ ವಿದರ್ಭ ತಂಡಗಳು ಮುಖಾಮುಖಿಯಾಗಿದ್ದು ಟಾಸ್ ಗೆದ್ದ ಕೇರಳ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಪಂದ್ಯ 5 ದಿನಗಳ ಕಾಲ ನಡೆಯಲಿದೆ.

'ಸಿ' ಗುಂಪಿನಲ್ಲಿದ್ದ ಕೇರಳ ಆಡಿರುವ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 4 ಡ್ರಾ ಮಾಡಿ ಕೊಂಡರೂ ನಾಕೌಟ್ ಪ್ರವೇಶಿಸಿದೆ. ಬಳಿಕ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಕ್ವಾರ್ಟರ್ ಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 1 ರನ್ ಮುನ್ನಡೆ ಪಡೆದು ಸೆಮಿಫೈನಲ್‌ಗೇರಿತ್ತು. ನಾಟಕೀಯವಾಗಿ ಅಂತ್ಯಗೊಂಡಿದ್ದ ಸೆಮಿಫೈನಲ್‌ನಲ್ಲಿ ಗುಜರಾತ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 2 ರನ್‌ಗಳ ಲೀಡ್ ಸಾಧಿಸಿ ಫೈನಲ್‌ಗೇರಿದೆ. 67 ವರ್ಷಗಳಿಂದ ರಣಜಿ ಆಡುತ್ತಿರುವ ಕೇರಳ ಮೊದಲ ಬಾರಿ ಫೈನಲ್‌ಗೇರಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲುವ ಕಾತರದಲ್ಲಿದೆ. 

ಮತ್ತೊಂದೆಡೆ ವಿದರ್ಭಕ್ಕಿದು 4ನೇ ಫೈನಲ್. 2017-18, 2018-29ರಲ್ಲಿ ಸತತ ವಾಗಿ ಟ್ರೋಫಿ ಗೆದ್ದಿದ್ದ ತಂಡ ಕಳೆದ ಬಾರಿ ಫೈನಲ್‌ನಲ್ಲಿ ಮುಂಬೈ ವಿರುದ್ಧ ಸೋತಿತ್ತು. ಇತ್ತೀಚೆಗಷ್ಟೇ ವಿಜಯ್ ಹಜಾರೆ ಏಕದಿನ ಟೂರ್ನಿಯ ಫೈನಲ್‌ನಲ್ಲೂ ಸೋತಿದ್ದ ತಂಡ ರಣಜಿ ಟ್ರೋಫಿ ಗೆಲ್ಲಲು ಪಣ ತೊಟ್ಟಿದೆ. ತಂಡದಲ್ಲಿ ಕರುಣ್ ನಾಯರ್ ಸೇರಿ ಹಲವು ತಾರಾ ಆಟಗಾರರಿದ್ದಾರೆ. 

ಇಂದು ಇಂಗ್ಲೆಂಡ್-ಆಫ್ಘಾನ್ ಬಿಗ್ ಫೈಟ್‌: ಸೋತ ತಂಡಕ್ಕೆ ಚಾಂಪಿಯನ್ಸ್ ಟ್ರೋಫಿಯಿಂದ ಗೇಟ್‌ ಪಾಸ್!

ಉಭಯ ತಂಡಗಳು ಹೀಗಿವೆ ನೋಡಿ

ವಿದರ್ಭ: ದ್ರುವ್ ಶೋರೆ, ಪಾರ್ಥ್ ರೇಖಡೆ, ದಾನೀಶ್ ಮಲೆವಾರ್, ಕರುಣ್ ನಾಯರ್, ಯಶ್ ರಾಥೋಡ್, ಅಕ್ಷಯ್ ವಾಡ್ಕರ್(ಕೀಪರ್&ಕ್ಯಾಪ್ಟನ್), ಅಕ್ಷಯ್ ಕರ್ನೇವಾರ್, ಹರ್ಷ್ ದುಬೈ, ನಚಿಕೇತ್ ಬೂತೆ, ದರ್ಶನ್‌ ನಾಲ್ಕಂಡೆ, ಯಶ್ ಠಾಕೂರ್.

ಕೇರಳ: ಅಕ್ಷಯ್ ಚಂದ್ರನ್, ರೋಹನ್ ಕುನ್ನುಮಲ್, ಸಚಿನ್ ಬೇಬಿ(ನಾಯಕ), ಜಲಜಾ ಸಕ್ಸೇನಾ, ಮೊಹಮ್ಮದ್ ಅಜರುದ್ದೀನ್(ವಿಕೆಟ್ ಕೀಪರ್), ಸಲ್ಮಾನ್ ನಿಜಾರ್, ಅಹಮದ್ ಇಮ್ರಾನ್, ಈಡನ್ ಆಪಲ್ ಟಾಮ್, ಆದಿತ್ಯ ಸರ್ವಾಟೆ, ನಿದೇಶ್, ಎನ್ ಬಾಸಿಲ್.

ಪಂದ್ಯ ಆರಂಭ: ಬೆಳಗ್ಗೆ 9.30 
ನೇರಪ್ರಸಾರ: ಜಿಯೋ ಹಾಟ್‌ಸ್ಟಾರ್

ಭಾರತ ಬಿ, ಸಿ ತಂಡವನ್ನು ಸೋಲಿಸುವುದೂ ಪಾಕ್‌ಗೆ ಕಷ್ಟ: ಸುನಿಲ್ ಗವಾಸ್ಕರ್

ನವದೆಹಲಿ: ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ ಹೊರಬಿದ್ದ ಬಳಿಕ ತಂಡದ ಆಟದ ಶೈಲಿ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್‌ ಗವಾಸ್ಕರ್‌ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ಭಾರತದ ಬಿ ತಂಡವನ್ನು ಸೋಲಿಸುವುದೂ ಪಾಕಿಸ್ತಾನ ತಂಡಕ್ಕೆ ಕಷ್ಟ' ಎಂದಿದ್ದಾರೆ. 

ಇದನ್ನೂ ಓದಿ: ಭಾರತ ಎದುರು ಪಾಕ್ ಆಟಗಾರರ 'ಹುಮ್ಮಸ್ಸು' ಪ್ರಶ್ನಿಸಿದ ಜಾವೇದ್ ಮಿಯಾಂದಾದ್!

ಈ ಬಗ್ಗೆ ಮಾತನಾಡಿರುವ ಗವಾಸ್ಕರ್, 'ಭಾರತ ಬಿ ತಂಡ ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡ ಬಲ್ಲದು. ಸಿ ತಂಡದ ಬಗ್ಗೆ ನನಗೆ ಹೆಚ್ಚು ಖಚಿತತೆ ಇಲ್ಲ. ಆದರೆ ಬಿ ತಂಡವು ಪ್ರಸ್ತುತ ಒಳ್ಳೆಯ ಫಾರ್ಮ್‌ನಲ್ಲಿದೆ. ಈ ತಂಡವನ್ನೂ ಪಾಕಿಸ್ತಾನ ಸೋಲಿಸುವುದು ತುಂಬಾ ಕಷ್ಟ' ಎಂದಿದ್ದಾರೆ.