ಮ್ಯಾಚ್ ಫಿಕ್ಸಿಂಗ್ ಆರೋಪ, ಶೋಯೆಬ್ ಮಲೀಕ್ ಬಿಪಿಎಲ್ ಒಪ್ಪಂದ ರದ್ದು; ದೇಶಭಕ್ತಿಯ ಪೋಸ್ಟ್ ಹಾಕಿದ ಸಾನಿಯಾ!
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇತ್ತೀಚೆಗೆ ಪತಿ ಶೋಯೆಬ್ ಮಲೀಕ್‌ರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಶೋಯೆಬ್ ಮಲೀಕ್ ಅವರಿಗೆ ದುರಾದೃಷ್ಟ ಬೆನ್ನುಬಿದ್ದಿರುವ ಲಕ್ಷಣ ಕಂಡಿದೆ.
ನವದೆಹಲಿ (ಜ.26): ಭಾರತ ತಂಡದ ಪ್ರಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಇತ್ತೀಚೆಗೆ ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲೀಕ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಪಾಕಿಸ್ತಾನ ಮೂಲದ ನಟಿ ಸನಾ ಜಾವೇದ್ ಅವರನ್ನು ವಿವಾಹವಾದ ಚಿತ್ರಗಳನ್ನು ಶೋಯೆಬ್ ಮಲಿಕ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲಿಯೇ ಸಾನಿಯಾ ಮಿರ್ಜಾ ಅವರು ಮಲಿಕ್‌ರಿಂದ ಖುಲಾ ಪಡೆದುಕೊಂಡಿದ್ದಾರೆ ಎಂದು ಸಾನಿಯಾ ಅವರ ತಂದೆ ಇಮ್ರಾನ್ ಮಿರ್ಜಾ ತಿಳಿಸಿದ್ದರು. ಶುಕ್ರವಾರ ಸಾನಿಯಾ ಮಿರ್ಜಾ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶದ ಧ್ವಜದೊಂದಿಗೆ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲಿಯೇ ಬಂದ ಸುದ್ದಿಯಲ್ಲಿ ಸಾನಿಯಾ ಅವರ ಮಾಜಿ ಪತಿ ಶೋಯೆಬ್ ಮಲೀಕ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಲುಕಿಕೊಂಡಿದ್ದರು. ಭಾರತದ ಧ್ವಜ ಹಿಡಿದುಕೊಂಡ ಚಿತ್ರ ಪೋಸ್ಟ್ ಮಾಡಿದಿದ್ದ ಸಾನಿಯಾ ಮಿರ್ಜಾ, 'ದೇಶವನ್ನು ಪ್ರತಿನಿಧಿಸುವುದು ಯಾವಾಗಲೂ ಹೆಮ್ಮೆಯ ವಿಚಾರ' ಎಂದು ಬರೆದುಕೊಂಡಿದ್ದರು.
ಸಾನಿಯಾ ಈ ಪೋಸ್ಟ್ ಮಾಡಿದ ಕೆಲವೇ ಹೊತ್ತಿನಲ್ಲಿ, ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಶೋಯೆಬ್ ಮಲೀಕ್ ಅವರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಟಿ20ಯ ಒಪ್ಪಂದ ರದ್ದು ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡಿತು. ಬಿಪಿಎಲ್ ಫ್ರಾಂಚೈಸಿ ಫಾರ್ಚೂನ್ ಬರಿಶಾಲ್, ಶೋಯೆಬ್ ಮಲಿಕ್ ಅವರ ಮೇಲೆ ಮ್ಯಾಚ್ ಫಿಕ್ಸಿಂಗ್‌ನ ಶಂಕೆ ವ್ಯಕ್ತಪಡಿಸಿದ ಕಾರಣ ಅವರ ಒಪ್ಪಂದವನ್ನು ತಂಡ ರದ್ದು ಮಾಡಿದೆ ಎಂದು ಘೋಷಣೆ ಮಾಡಿತ್ತು.
'ಕರ್ಮ ಎನ್ನುವುದು ನಿಜ. ಖುಲ್ನಾ ಟೈಗರ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಒಂದು ಓವರ್‌ನಲ್ಲಿ ಮೂರು ನೋ-ಬಾಲ್‌ಗಳನ್ನು ಎಸೆದ ನಂತರ ಫಾರ್ಚೂನ್ ಬರಿಶಾಲ್ ತಂಡ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಶೋಯೆಬ್ ಮಲಿಕ್ ಅವರ ಒಪ್ಪಂದವನ್ನು ರದ್ದುಗೊಳಿಸಿದೆ' ಎಂದು ವ್ಯಕ್ತಿಯೊಬ್ಬರು ಸಾನಿಯಾ ಪೋಸ್ಟ್‌ಗೆ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಟ್ವಿಟರ್ ಪೇಜ್‌ಗಳಲ್ಲಿಯೂ ಸಾನಿಯಾ ಮಿರ್ಜಾ ಅವರ ದೇಶಭಕ್ತಿಯ ಪೋಸ್ಟ್ ಕೆಳಗಡೆಯೇ ಶೋಯೆಬ್ ಮಲಿಕ್ ಅವರ ಬಿಪಿಎಲ್ ಒಪ್ಪಂದ ರದ್ದಾಗಿರುವ ಸುದ್ದಿಗಳು ಪ್ರಕಟವಾಗುತ್ತಿದೆ.
ಬಿಪಿಎಲ್ ಟೂರ್ನಿಯಲ್ಲಿ ಜನವರಿ 22 ರಂದು ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಸ್ಟ್ರೇಡಿಯಲ್ಲಿ ನಡೆದ ಪಂದ್ಯದಲ್ಲಿ ಖುಲ್ನಾ ಟೈಗರ್ಸ್ ವಿರುದ್ಧ ಆಡುವ ವೇಳೆ ಶೋಯೆಬ್ ಮಲೀಕ್ ಒಂದೇ ಓವರ್‌ನಲ್ಲಿ ಮೂರು ನೋಬಾಲ್ ಎಸೆದಿದ್ದರು. ಅದಲ್ಲದೆ, ಡೆತ್ ಓವರ್ ಬ್ಯಾಟಿಂಗ್‌ನಲ್ಲಿ 6 ಎಸೆತಗಳನ್ನು ಆಡಿ ಬರೀ 5 ರನ್ ಮಾಡಿದ್ದರು.
ಸಾರಾ ಸುದ್ದಿ ನಡುವೆ ಭಾರತೀಯರಿಗೆ ಶಾಕ್ ಕೊಟ್ಟ ಸನಾ, ಯಾರೀಕೆ ಸಾನಿಯಾ ಮಿರ್ಜಾ ಸವತಿ?
ಫ್ರಾಂಚೈಸಿಯ ಮಾಲೀಕ ಮಿಜಾನುರ್ ರೆಹಮಾನ್ ಖಾಸಗಿ ಟಿವಿ ವಾಹಿನಿಯಲ್ಲಿ ಮಾತನಾಡುವ ವೇಲೆ, ಶೋಯೆಬ್ ಮಲಿಕ್ ಅವರು ತಮ್ಮ ಕೊನೇ ಹಾಗೂ ನಾಲ್ಕನೇ ಓವರ್‌ನಲ್ಲಿ ಮೂರು ನೋಬಾಲ್‌ಗಳನ್ನು ಎಸೆದು 18 ರನ್ ನೀಡಿರುವ ಬಗ್ಗೆ ಭ್ರಷ್ಟಚಾರ ವಿರೋಧಿ ಘಟಕ ಗಮನಿಸಬೇಕು ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ಅವರ ಒಪ್ಪಂದ ರದ್ದಾಗಿರುವ ಬಗ್ಗೆ ತಂಡ ಮಾಹಿತಿ ನೀಡಿದೆ. ಮಲಿಕ್ ಅವರ ಮೇಲೆ ಎಸಿಯು ತನಿಖೆ ಆಗಬೇಕು ಎಂದು ಮಿಜಾನುರ್ ಹೇಳಿದ್ದಾರೆ. ಅದಲ್ಲದೆ, ಸ್ವತಃ ತಾವೂ ಕೂಡ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಎಸಿಯುಗೆ ಜನವರಿ 25 ರಂದು ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಆಫ್ ಸ್ಪಿನ್ನರ್ ಒಬ್ಬ ಒಂದೇ ಓವರ್‌ನಲ್ಲಿ ಮೂರು ನೋಬಾಲ್‌ಗಳನ್ನು ಎಸೆಯುವುದು ಎಂದರೆ ಅದು ಅಸಾಧ್ಯವಾದ ಮಾತು. ಇದರಿಂದಾಗಿಯೇ ನಾವು ಪಂದ್ಯ ಸೋಲು ಕಂಡೆವು ಎಂದು ಹೇಳಿದ್ದಾರೆ.
ವಿವಾದದ ನಡುವೆ ಶೋಯೆಬ್ ಮಲೀಕ್ ವಿವಾಹವಾಗಿದ್ದ ಸಾನಿಯಾ, 14 ವರ್ಷದ ದಾಂಪತ್ಯದಲ್ಲಿ ಆಗಿದ್ದೇನು?
ಆದರೆ, ಇದೇ ಮಿಜಾನುರ್, ಶುಕ್ರವಾರ ಟೀಮ್‌ನ ಫೇಸ್‌ಬುಕ್ ಪೇಜ್‌ನಲ್ಲಿ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಫಿಕ್ಸಿಂಗ್ ಬಗ್ಗೆ ತಮ್ಮ ಅನುಮಾನವಷ್ಟೇ ಎಂದು ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ನಾವು ಶೋಯೆಬ್ ಮಲಿಕ್ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿದ್ದೇವೆ. ಆತ ಉತ್ತಮ ಆಟಗಾರ. ನಮ್ಮ ತಂಡಕ್ಕಾಗಿ ತಮ್ಮ ಶ್ರೇಷ್ಠ ಆಟವನ್ನು ಆಡಿದ್ದಾನೆ. ಈ ಬಗ್ಗೆ ನಾವು ಹೆಚ್ಚು ಚರ್ಚೆ ಮಾಡುವುದು ಬೇಡ ಎಂದಿದ್ದಾರೆ. ಅದಲ್ಲದೆ, ಟಿವಿ ಚಾನೆಲ್ ಚರ್ಚೆಯಲ್ಲಿ ನಾನು ಆಯ್ಕೆ ಮಾಡಿದ ಶಬ್ದಗಳು ಸೂಕ್ತವಾಗಿರಲಿಲ್ಲ ಎಂದಿದ್ದಾರೆ.