Asianet Suvarna News Asianet Suvarna News

ಇಂಗ್ಲೆಂಡ್ ವಿರುದ್ಧ 175 ರನ್‌ ಮುನ್ನಡೆಗೇರಿದ ಭಾರತ!

ಪ್ರವಾಸಿ ಇಂಗ್ಲೆಂಡ್‌ ತಂಡದ ವಿರುದ್ಧ ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 175 ರನ್‌ಗಳ ಮುನ್ನಡೆ ಸಂಪಾದಿಸಿದೆ. ಯಶಸ್ವಿ ಜೈಸ್ವಾಲ್‌ ಅರ್ಧಶತಕದ ಬಳಿಕ ಕೆಎಲ್‌ ರಾಹುಲ್‌ ಹಾಗೂ ರವೀಂದ್ರ ಜಡೇಜಾ ಟೀಮ್‌ ಇಂಡಿಯಾ ಪರವಾಗಿ ಅರ್ಧಶತಕ ಬಾರಿಸಿದರು.
 

India lead by 175 runs in Hyderabad Test Rahul Jadeja scores half centuries san
Author
First Published Jan 26, 2024, 7:59 PM IST | Last Updated Jan 26, 2024, 8:07 PM IST

ಹೈದರಬಾದ್‌ (ಜ.26): ಪ್ರವಾಸಿ ಇಂಗ್ಲೆಂಡ್‌ ತಂಡದ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 175 ರನ್‌ಗಳ ಮುನ್ನಡೆ ಸಂಪಾದಿಸಿದೆ. ಶುಕ್ರವಾರ 2ನೇ ದಿನದಾಟದ ಅಂತ್ಯಕ್ಕೆ ಟೀಮ್‌ ಇಂಡಿಯಾ 7 ವಿಕೆಟ್‌ಗೆ 421 ರನ್‌ ಪೇರಿಸಿದೆ. ಸ್ಪಿನ್‌ ಬೌಲಿಂಗ್‌ ಆಲ್ರೌಂಡರ್‌ ರವೀಂದ್ರ ಜಡೇಜಾ 81 ರನ್‌ ಬಾರಿಸಿದೆ, ಅಕ್ಸರ್‌ ಪಟೇಲ್‌ 35 ರನ್‌ ಸಿಡಿಸಿದ್ದಾರೆ. ಇಬ್ಬರೂ ಕೂಡ ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 1 ವಿಕೆಟ್‌ಗೆ 119 ರನ್‌ಗಿಂದ ದಿನದಾಟ ಆರಂಭಿಸಿದ ಭಾರತ ತಂಡಕ್ಕೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ 80 ರನ್‌ ಸಿಡಿಸಿ ನೆರವಿ ನೀಡಿದರು. ಬಳಿಕ ವಿಕೆಟ್‌ ಕೀಪರ್‌ ಕೆಎಸ್‌ ಭರತ್‌ 81 ಎಸೆತಗಳಲ್ಲಿ ಆಕರ್ಷಕ 41 ರನ್‌ ಬಾರಿಸಿದರೆ, ಕೆಎಲ್ ರಾಹುಲ್‌ 86 ರನ್‌ ಸಿಡಿಸಿದರು. ಇನ್ನು ಇಂಗ್ಲೆಂಡ್‌ ಪರವಾಗಿ ಟಾಮ್‌ ಹಾರ್ಟ್ಲಿ ಹಾಗೂ ಜೋ ರೂಟ್‌ ತಲಾ 2 ವಿಕೆಟ್‌ ಪಡೆದರೆ, ರೆಹಾನ್‌ ಅಹ್ಮದ್‌ ಹಾಗೂ ಜಾಕ್‌ ಲೀಚ್‌ ತಲಾ ಒಂದೊಂದು ವಿಕೆಟ್‌ ಉರುಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡ 246 ರನ್‌ಗೆ ಆಲೌಟ್‌ ಆಗಿತ್ತು. ದಿನದಾಟ ಕೊನೆಗೊಳ್ಳುವ ಮುನ್ನ ಟಾಮ್‌ ಹಾರ್ಟ್ಲಿ ಅವರ ಕೊನೇ ಮೂರು ಎಸೆತಗಳಲ್ಲಿ ಅಕ್ಸರ್‌ ಪಟೇಲ್‌ ಸತತ ಮೂರು ಬೌಂಡರಿ ಸಿಡಿಸಿದರು.

ದಿನದ ಅಂತಿಮ ಅವಧಿಯ ಆಟದಲ್ಲಿ ರವೀಂದ್ರ ಜಡೇಜಾ ಟೆಸ್ಟ್‌ ಕ್ರಿಕೆಟ್‌ನ ತಮ್ಮ 20ನೇ ಅರ್ಧಶತಕ ಪೂರೈಸಿದರು. ಶತಕದಿಂದ ಅವರು 19 ರನ್‌ಗಳಿಂದ ದೂರವಿದ್ದಾರೆ. ಕೆಎಸ್‌ ಭರತ್‌ ಅವರೊಂದಿಗೆ ಜಡೇಜಾ 141 ಎಸೆತಗಳಲ್ಲಿ 68 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ಅರ್ಧಶತಕದ ಹಾದಿಯಲ್ಲಿದ್ದ ಕೆಎಸ್‌ ಭರತ್‌ ಅವರನ್ನು ಜೋ ರೂಟ್‌ ಎಲ್‌ಬಿ ಬಲೆಗೆ ಕೆಡವಿದರು. ಬಳಿಕ ಬಂದ ರವಿಚಂದ್ರನ್‌ ಅಶ್ವಿನ್‌ ಕೇವಲ 1 ರನ್‌ ಬಾರಿಸಿ ರನ್‌ಔಟ್‌ ಆದರು.

ಇದಕ್ಕೂ ಮುನ್ನ ಆಕರ್ಷಕ ಆಟವಾಡಿದ ಕೆಎಲ್‌ ರಾಹುಲ್‌ ತಮ್ಮ14ನೇ ಟೆಸ್ಟ್‌ ಅರ್ಧಶತಕ ಸಿಡಿಸಿದರು. ಶ್ರೇಯಸ್‌ ಅವರೊಂದಿಗೆ ರಾಹುಲ್‌ 64 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ಶ್ರೇಯಸ್‌ ಅಯ್ಯರ್‌ 35 ರನ್‌ ಬಾರಿಸಿ ಟಾಮ್‌ ಹಾರ್ಟ್ಲಿಗೆ ವಿಕೆಟ್‌ ನೀಡಿದರು. ಬಳಿಕ ರಾಹುಲ್‌ ಕೂಡ ಹಾರ್ಟ್ಲಿಗೆ ಬಲಿಯಾದರು. ರೆಹಾನ್‌ ಅಹ್ಮದ್‌ ಎಸೆತದಲ್ಲಿ ಆಕರ್ಷಕ ಸಿಕ್ಸರ್‌ ಸಿಡಿಸುವ ಮೂಲಕ ಕೆಎಲ್‌ ರಾಹುಲ್‌ ಭಾರತದಲ್ಲಿ 1 ಸಾವಿರ ಟೆಸ್ಟ್‌ ರನ್‌ ಬಾರಿಸಿದ ಸಾಧನೆ ಮಾಡಿದರು.

ಮೊದಲ ದಿನವೇ ಆಂಗ್ಲರು ಆಲೌಟ್; ಬಜ್‌ಬಾಲ್‌ಗೆ ಯಶಸ್ವಿ ಜೈಸ್ವಾಲ್ ತಿರುಗೇಟು..!

ದಿನದಾಟ ಆರಂಭಿಸಿದ ಯಶಸ್ವಿ ಜೈಸ್ವಾಲ್‌ ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರು. ಆದರೆ, ಅದೇ ಓವರ್‌ನಲ್ಲಿ ಜೋ ರೂಟ್‌ಗೆ ಔಟಾದರು. ಬಳಿಕ ಕ್ರೀಸ್‌ಗಿಳಿದ ಕೆಎಲ್‌ ರಾಹುಲ್‌ ಶುಭ್‌ಮನ್‌ ಗಿಲ್‌ ಜೊತೆ ಮೂರನೇ ವಿಕೆಟ್‌ಗೆ 36 ರನ್‌ ಜೊತೆಯಾಟವಾಡಿದರು. 159 ರನ್‌ಗೆ 3ನೇ ವಿಕೆಟ್‌ ರೂಪದಲ್ಲಿ ಗಿಲ್‌ ಔಟಾದಾಗ ಶ್ರೇಯಸ್‌ ಅಯ್ಯರ್‌ ಹಾಗೂ ಕೆಎಲ್ ರಾಹುಲ್‌ ಭಾರತದ ಇನ್ನಿಂಗ್ಸ್‌ಅನ್ನು ಆಧರಿಸಿದರು.

ಮ್ಯಾಚ್‌ ಫಿಕ್ಸಿಂಗ್‌ ಆರೋಪ, ಶೋಯೆಬ್‌ ಮಲೀಕ್‌ ಬಿಪಿಎಲ್‌ ಒಪ್ಪಂದ ರದ್ದು; ದೇಶಭಕ್ತಿಯ ಪೋಸ್ಟ್‌ ಹಾಕಿದ ಸಾನಿಯಾ!


 

Latest Videos
Follow Us:
Download App:
  • android
  • ios