ಸಚಿನ್, ಕೊಹ್ಲಿ, ಅಲ್ಲ, ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ಹುಲಿ, ರಣಥಂಬೋರ್ ಘಟನೆ ಬಿಚ್ಚಿಟ್ಟ ಟೇಲರ್!
ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ರಾಸ್ ಟೇಲರ್ ಆಟೋಬಯೋಗ್ರಫಿ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಟೇಲರ್ ಆತ್ಮಚರಿತ್ರೆಯಲ್ಲಿ ಭಾರತೀಯ ಕ್ರಿಕೆಟ್, ಐಪಿಎಲ್ ಸೇರಿದಂತೆ ಹಲವು ಘಟನೆಗಳ ಕುರಿತು ಉಲ್ಲೇಖವಿದೆ. ಇದರಲ್ಲಿ ಅರಣ್ಯದಲ್ಲಿ ಸರಿಸುಮಾರು 4,000 ಹುಲಿಗಳಿದ್ದರೂ, ಭಾರತೀಯ ಕ್ರಿಕೆಟ್‌ನಲ್ಲಿ ರಾಹುಲ್ ದ್ರಾವಿಡ್ ಹುಲಿ ಎಂದು ಬಣ್ಣಿಸಿದ ಪ್ರಸಂಗವೊಂದಿದೆ. ರಣಥಂಬೋರ್ ಘಟನೆ ಕುರಿತು ರಾಸ್ ಟೇಲರ್ ವಿವರಿಸಿದ್ದಾರೆ.
ವೆಲ್ಲಿಂಗ್ಟನ್(ಆ.14): ಬ್ಲಾಕ್ ಅಂಡ್ ವೈಟ್ ಆಟೋಬಯೋಗ್ರಫಿ ಇದೀಗ ಭಾರತದಲ್ಲಿ ಭಾರಿ ಚರ್ಚೆಯಾಗುತ್ತಿದೆ. ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ರಾಸ್ ಟೇಲರ್ ತಮ್ಮ ಕ್ರಿಕೆಟ್ ಬದುಕಿನ ಕುರಿತು ಬರೆದಿರುವ ಆತ್ಮಚರಿತ್ರೆ ಇದಾಗಿದೆ. ಐಪಿಎಲ್ ಕಪಾಳಮೋಕ್ಷ ಘಟನೆ ಬಿಚ್ಚಿಟ್ಟ ಬೆನ್ನಲ್ಲೇ ಇದೀಗ ಟೇಲರ್ ಆಟೋಬಯೋಗ್ರಫಿಯಲ್ಲಿನ ರಾಹುಲ್ ದ್ರಾವಿಡ್ ಕುರಿತು ಬರೆದಿರುವ ಘಟನೆ ಭಾರಿ ಸದ್ದು ಮಾಡುತ್ತಿದೆ. ಅರಣ್ಯದಲ್ಲಿ 4,000 ಹುಲಿಗಳಿರಬಹುದು. ಆದರೆ ಭಾರತೀಯ ಕ್ರಿಕೆಟ್‌ನಲ್ಲಿ ಒಂದೇ ಹುಲಿ. ಅದು ರಾಹುಲ್ ದ್ರಾವಿಡ್ ಎಂದು ರಾಸ್ ಟೇಲರ್ ತಮ್ಮ ಅಟೋಬಯೋಗ್ರಫಿಯಲ್ಲಿ ಬರೆದುಕೊಂಡಿದ್ದಾರೆ. ದ್ರಾವಿಡ್ ಸೌಮ್ಯ ಸ್ವಭಾವವಿದ್ದರೂ, ಕ್ರೀಸ್‌ನಲ್ಲಿ ನಿಂತರೆ ಹುಲಿ, ಎಂದು ದ್ರಾವಿಡ್ ಗುಣಗಾನ ಮಾಡಿದ್ದಾರೆ. ಇದಕ್ಕೆ ಪೂರಕವಾದ ರಣಥಂಬೋರ್ ಘಟನೆಯನ್ನು ರಾಸ್ ಟೇಲರ್ ವಿವರಿಸಿದ್ದಾರೆ.
2011ರ ಐಪಿಎಲ್ ಟೂರ್ನಿಯಲ್ಲಿ ರಾಸ್ ಟೇಲರ್ ಟೀಂ ಇಂಡಿಯಾ ದಿಗ್ಗಜ ರಾಹುಲ್ ದ್ರಾವಿಡ್ ಜೊತೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದರು. ಭಾರತದಲ್ಲಿ ಕ್ರಿಕೆಟ್ ಈ ಮಟ್ಟಿಗೆ ಬೆಳೆಯಲು, ಕ್ರಿಕೆಟಿಗರನ್ನು ಆರಾಧಿಸಲು ಕಾರಣವೇನು ಅನ್ನೋದು ರಾಹುಲ್ ದ್ರಾವಿಡ್ ಅವರನ್ನು ನೋಡಿದ ಮೇಲೆ ಅರ್ಥವಾಯಿತು ಎಂದು ರಾಸ್ ಟೇಲರ್ ಬರೆದುಕೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದ ವೇಳೆ ರಾಸ್ ಟೇಲರ್ ತಂಡದ ಜೊತೆ ರಾಜಸ್ಥಾನದ ರಣಥಂಬೋರ್‌ನಲ್ಲಿರುವ ವನ್ಯ ಜೀವಿ ಸಂರಕ್ಷಿತ ಅರಣ್ಯಕ್ಕೆ ತೆರಳಿದ್ದರು.
ಐಪಿಎಲ್‌ನಲ್ಲಿ ನಡೆದಿತ್ತು ಮತ್ತೊಂದು ಕಪಾಳಮೋಕ್ಷ , 4 ಬಾರಿ ಕೆನ್ನಗೆ ಬಾರಿಸಿದ್ದರು ಎಂದ ರಾಸ್ ಟೇಲರ್!
ಸಫಾರಿ ವೇಳೆ ರಾಸ್ ಟೇಲರ್ ನೇರವಾಗಿ ರಾಹುಲ್ ದ್ರಾವಿಡ್ ಬಳಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಇಲ್ಲಿ ನೀವು ಹುಲಿಯನ್ನು ನೋಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ರಾಹುಲ್ ದ್ರಾವಿಡ್ ನಾನು ಇಲ್ಲಿಗೆ 21 ಬಾರಿ ಬಂದಿದ್ದೇನೆ. ಆದರೆ ಹುಲಿ ಮಾತ್ರ ಕಾಣಸಿಕ್ಕಿಲ್ಲ ಎಂದಿದ್ದಾರೆ. ಹೀಗೆ ರಾಸ್ ಟೇಲರ್ ಹಾಗೂ ರಾಹುಲ್ ದ್ರಾವಿಡ್ ಮಾತುಕತೆ ಮುಂದುವರಿದಿತ್ತು. ಸಫಾರಿ ಮುಂದೆ ಸಾಗುತ್ತಿದ್ದಂತೆ ಬಂಡೆಯ ಮೇಲೊಂದು ಹುಲಿ ಪ್ರತ್ಯಕ್ಷವಾಗಿತ್ತು. ನಾವೆಲ್ಲಾ ಹುಲಿಯನ್ನು ನೋಡಿ ಪುಳಕಿತಗೊಂಡೆವು. ಈ ವೇಳೆ ಹುಲಿಯನ್ನು ನೋಡುತ್ತಿದ್ದ ಇತರ ಪ್ರವಾಸಿಗರ ಕ್ಯಾಮರಗಳು ನೇರವಾಗಿ ರಾಹುಲ್ ದ್ರಾವಿಡ್‌ನತ್ತ ತಿರುಗಿತ್ತು. ರಣಥಂಬೋರ್‌ನಲ್ಲಿ ಹುಲಿಗಳು ಕಾಣಸಿಗುವುದು ಅಪರೂಪ. ಹೀಗಿರುವಾಗಿ ಪ್ರವಾಸಿಗರು ಹುಲಿಯ ಬದಲು ರಾಹುಲ್ ದ್ರಾವಿಡ್ ಫೋಟೋ ಕ್ಲಿಕ್ಕಿಸಲು ಕ್ಯಾಮರ ತಿರುಗಿಸಿದ್ದಾರೆ. ಎಲ್ಲರೂ ಅರಣ್ಯದ ಹುಲಿಗಿಂತ ಭಾರತೀಯ ಕ್ರಿಕೆಟ್ ಹುಲಿಯನ್ನು ನೋಡಲು ಹೆಚ್ಚು ಆಸಕ್ತಿ ವಹಿಸಿದ್ದರು ಎಂದು ರಾಸ್ ಟೇಲರ್ ಬ್ಲಾಕ್ ಅಂಡ್ ವೈಟ್ ಆಟೋಬಯೋಗ್ರಫಿಯಲ್ಲಿ ಬರೆದುಕೊಂಡಿದ್ದಾರೆ.
ಸಿಂಪ್ಲಿಸಿಟಿ ಅಂದ್ರೆ ಇದು..GRV ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೊನೇ ಸಾಲಿನಲ್ಲಿ ಕುಳಿತ ಡ್ರಾವಿಡ್ ಚಿತ್ರ ವೈರಲ್!
ಈ ಅಟೋಬಯೋಗ್ರಫಿಯಲ್ಲಿ ರಾಜಸ್ಥಾನ ರಾಯಲ್ಸ್ ಮಾಲೀಕ ತಮ್ಮ ಕಪಾಳಕ್ಕೆ ಭಾರಿಸಿರುವ ಕುರಿತು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ತಾವು ಡಕೌಟ್ ಆಗಿ ಪೆವಿಲಿಯನ್ ಸೇರಿದ್ದರು. ಈ ಕುರಿತು ಹೋಟೆಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಮಾಲೀಕರು, ಶೂನ್ಯ ಸುತ್ತುವವರಿಗೆ ಕೋಟಿ ಕೋಟಿ ರೂಪಾಯಿ ನೀಡಲು ಸಾಧ್ಯವಿಲ್ಲ ಎಂದು 3 ರಿಂದ 4 ಬಾರಿ ಕಪಾಳಮೋಕ್ಷ ಮಾಡಿದ್ದರು ಎಂದು ರಾಸ್ ಟೇಲರ್ ತಮ್ಮ ಆಟೋಬಯೋಗ್ರಫಿಯಲ್ಲಿ ಬರೆದುಕೊಂಡಿದ್ದಾರೆ.