Asianet Suvarna News Asianet Suvarna News

ರಾಂಚಿ ಟೆಸ್ಟ್‌ಗೂ ಮುನ್ನ ರಾಹುಲ್ ದ್ರಾವಿಡ್ ಆಡಿದ ಸ್ಪೂರ್ತಿಯ ಮಾತು ಸ್ಮರಿಸಿಕೊಂಡ ಶುಭ್‌ಮನ್ ಗಿಲ್‌..!

ಇಂಗ್ಲೆಂಡ್ ನೀಡಿದ್ದ 192 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾ ಮೊದಲ 18 ಓವರ್‌ಗಳಲ್ಲೇ 84 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟಿದ್ದರು.

Rahul Dravid motivational punch as Shubman Gill bounces back from the verge of getting dropped kvn
Author
First Published Feb 28, 2024, 12:41 PM IST

ರಾಂಚಿ(ಫೆ.28): ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಶುಭ್‌ಮನ್ ಗಿಲ್ ಹಾಗೂ ಧೃವ್ ಜುರೆಲ್ ಅದ್ಭುತ ಜತೆಯಾಟದ ಮೂಲಕ ಟೀಂ ಇಂಡಿಯಾ 5 ವಿಕೆಟ್ ಭರ್ಜರಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಮೂಲಕ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 3-1 ಅಂತರದಲ್ಲಿ ಗೆಲುವಿನ ನಗೆ ಬೀರಿತು. 

ಇಂಗ್ಲೆಂಡ್ ನೀಡಿದ್ದ 192 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾ ಮೊದಲ 18 ಓವರ್‌ಗಳಲ್ಲೇ 84 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟಿದ್ದರು. ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾ ದಿಢೀರ್ ವಿಕೆಟ್ ಕಳೆದುಕೊಂಡಿತಾದರೂ, ಕೊನೆಯಲ್ಲಿ ಗಿಲ್-ಜುರೆಲ್ ಜೋಡಿ ಜವಾಬ್ದಾರಿಯುತ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕೊನೆಗೂ ರಣಜಿಗೆ ಶ್ರೇಯಸ್‌ ಅಯ್ಯರ್: ಮುಂಬೈ ತಂಡಕ್ಕೆ ಸೇರ್ಪಡೆ..!

120 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಟೀಂ ಇಂಡಿಯಾಗೆ ಆರನೇ ವಿಕೆಟ್‌ಗೆ ಜುರೆಲ್ ಹಾಗೂ ಗಿಲ್ ಜೋಡಿ ಆಸರೆಯಾಯಿತು. ಸುಮಾರು 30 ಓವರ್‌ಗಳ ಕಾಲ ಈ ಜೋಡಿ ಒಂದೇ ಒಂದು ಬೌಂಡರಿ ಬಾರಿಸಿದೇ ಸ್ಟ್ರೈಕ್ ರೊಟೇಟ್ ಮಾಡುತ್ತಾ ಮುನ್ನುಗ್ಗಿತ್ತು. ಅಂತಿಮವಾಗಿ ಈ ಜೋಡಿ 136 ಎಸೆತಗಳನ್ನು ಎದುರಿಸಿ ಮುರಿಯದ 72 ರನ್‌ಗಳ ಜತೆಯಾಟವಾಡಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿತ್ತು.

ಶುಭ್‌ಮನ್ ಗಿಲ್ ಅವರ ಈ ಇನಿಂಗ್ಸ್, ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅವರ ಇನಿಂಗ್ಸ್ ನೆನಪು ಮಾಡುವಂತಿತ್ತು. ಸದ್ಯ ಚೇತೇಶ್ವರ್ ಪೂಜಾರ ಅವರ ಮೂರನೇ ಕ್ರಮಾಂಕದಲ್ಲಿ ಶುಭ್‌ಮನ್ ಗಿಲ್ ಬ್ಯಾಟ್ ಬೀಸುತ್ತಿದ್ದಾರೆ. ಇನ್ನು ಇದೀಗ 24 ವರ್ಷದ ಶುಭ್‌ಮನ್ ಗಿಲ್, ದ್ರಾವಿಡ್ ತಮ್ಮನ್ನು ಉದ್ದೇಶಿಸಿ ಹೇಳಿದ್ದ ಕೋಟ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. "ಒಂದು ವೇಳೆ ನೀನಲ್ಲ ಅಂದ್ರೆ ಮತ್ತ್ಯಾರು..? ಒಂದು ವೇಳೆ ಈಗಲ್ಲ ಅಂದ್ರೆ ಮತ್ತೆ ಯಾವಾಗ?" ಎನ್ನುವ ಸಾಲನ್ನು ಸ್ಮರಿಸಿಕೊಂಡಿದ್ದಾರೆ.

IPL 2024 ಮುಂಬೈ ಇಂಡಿಯನ್ಸ್ ಪರ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಆಟಗಾರರಿವರು..!

ಈ ಪಂದ್ಯದಲ್ಲಿ ಭಾರತ ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ತಾರಾ ಸ್ಪಿನ್ನರ್‌ಗಳ ಅಭೂತಪೂರ್ವ ಪ್ರದರ್ಶನ, ಯುವ ಆಟಗಾರರ ಕೆಚ್ಚೆದೆಯ ಹೋರಾಟದಿಂದಾಗಿ ಭಾರತ ವಿಜಯಲಕ್ಷ್ಮಿಯನ್ನು ತನ್ನತ್ತ ಒಲಿಸಿಕೊಂಡಿತು. 192 ರನ್‌ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಸುಲಭದಲ್ಲೇನೂ ಜಯ ಸಿಗಲಿಲ್ಲ. ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್‌ರ ವೇಗದ ಆಟದ ಹೊರತಾಗಿಯೂ ತಂಡ ಸೋಲಿನತ್ತ ಮುಖ ಮಾಡಿತ್ತು. ಆದರೆ ಶುಭ್‌ಮನ್‌ ಗಿಲ್‌ ಹಾಗೂ ಧ್ರುವ್‌ ಜುರೆಲ್‌ರ ಜವಾಬ್ದಾರಿಯುತ ಆಟ ಭಾರತವನ್ನು ಗೆಲ್ಲಿಸಿತು.

ಇಂಗ್ಲೆಂಡ್ ವಿರುದ್ಧ 12ನೇ ಬಾರಿ ಟೆಸ್ಟ್ ಸರಣಿ ಜಯ

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಇದು 12ನೇ ಸರಣಿ ಗೆಲುವು. ಉಭಯ ತಂಡಗಳ ನಡುವೆ ಇದು 36ನೇ ಸರಣಿ. 19 ಸರಣಿಗಳಲ್ಲಿ ಇಂಗ್ಲೆಂಡ್‌ ಗೆದ್ದಿದ್ದರೆ, ಉಳಿದ 5 ಸರಣಿಗಳು ಡ್ರಾಗೊಂಡಿವೆ.
 

Follow Us:
Download App:
  • android
  • ios