Asianet Suvarna News Asianet Suvarna News

ಕೊನೆಗೂ ರಣಜಿಗೆ ಶ್ರೇಯಸ್‌ ಅಯ್ಯರ್: ಮುಂಬೈ ತಂಡಕ್ಕೆ ಸೇರ್ಪಡೆ..!

ಮಂಗಳವಾರ ತಮಿಳುನಾಡು ವಿರುದ್ಧದ ರಣಜಿ ಸೆಮಿಫೈನಲ್‌ನಗೆ ಮುಂಬೈ ತಂಡ ಪ್ರಕಟಗೊಂಡಿದ್ದು, ಶ್ರೇಯಸ್‌ ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಬೆನ್ನು ನೋವಿನಿಂದಾಗಿ ಶ್ರೇಯಸ್‌ ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯದ ಬಳಿಕ ತಂಡದಿಂದ ಹೊರಬಿದ್ದಿದ್ದರು.

Shreyas Iyer to play Ranji Trophy semis against Tamil Nadu kvn
Author
First Published Feb 28, 2024, 11:24 AM IST

ಮುಂಬೈ(ಫೆ.28): ಭಾರತ ತಂಡದಿಂದ ಹೊರಗಿದ್ದ ಹೊರತಾಗಿಯೂ ದೇಸಿ ಕ್ರಿಕೆಟ್‌ನಲ್ಲಿ ಆಡದೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ತಾರಾ ಆಟಗಾರ ಶ್ರೇಯಸ್‌ ಅಯ್ಯರ್‌ ಕೊನೆಗೂ ರಣಜಿ ಟ್ರೋಫಿ ಆಡಲು ನಿರ್ಧರಿಸಿದ್ದಾರೆ. 

ಮಂಗಳವಾರ ತಮಿಳುನಾಡು ವಿರುದ್ಧದ ರಣಜಿ ಸೆಮಿಫೈನಲ್‌ನಗೆ ಮುಂಬೈ ತಂಡ ಪ್ರಕಟಗೊಂಡಿದ್ದು, ಶ್ರೇಯಸ್‌ ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಬೆನ್ನು ನೋವಿನಿಂದಾಗಿ ಶ್ರೇಯಸ್‌ ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯದ ಬಳಿಕ ತಂಡದಿಂದ ಹೊರಬಿದ್ದಿದ್ದರು. ಬಳಿಕ ಎನ್‌ಸಿಎಗೆ ಆಗಮಿಸಿ ಪುನಶ್ಚೇತನ ಶಿಬಿರಕ್ಕೆ ಹಾಜರಾಗಿದ್ದ ಅವರು ಗುಣಮುಖರಾಗಿ ಮರಳಿದ್ದರು. ಆದರೆ ಮುಂಬೈ ಪರ ರಣಜಿ ಆಡದೆ ವಿಶ್ರಾಂತಿಯಲ್ಲಿದ್ದರು.

ಟೆಸ್ಟ್‌ ಪಂದ್ಯದ ಸಂಭಾವನೆ ಹೆಚ್ಚಿಸಲು ಬಿಸಿಸಿಐ ಚಿಂತನೆ

ನವದೆಹಲಿ: ಆಟಗಾರರನ್ನು ಟೆಸ್ಟ್‌ ಕ್ರಿಕೆಟ್‌ನತ್ತ ಮತ್ತಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಬಿಸಿಸಿಐ, ಆಟಗಾರರಿಗೆ ಟೆಸ್ಟ್‌ ಪಂದ್ಯದ ಸಂಭಾವನೆ ಹೆಚ್ಚಿಸಲು ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸದ್ಯ ಪ್ರತಿ ಟೆಸ್ಟ್‌ಗೆ ಬಿಸಿಸಿಐ ಆಟಗಾರನಿಗೆ 15 ಲಕ್ಷ ರು. ಸಂಭಾವನೆ ನೀಡುತ್ತಿದೆ. ಏಕದಿನದಲ್ಲಿ 6 ಲಕ್ಷ ರು. ಹಾಗೂ ಟಿ20ಗೆ 3 ಲಕ್ಷ ರು. ಲಭಿಸುತ್ತಿದೆ. ಆದರೆ ಯುವ ಆಟಗಾರರು ರಾಷ್ಟ್ರೀಯ ತಂಡದ ಬದಲು ಟಿ20 ಲೀಗ್‌ಗಳಲ್ಲಿ ಹೆಚ್ಚಿನ ಆಕರ್ಷಿತರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಂಭಾವನೆ ಹೆಚ್ಚಿಸಲು ಮಂಡಳಿ ಚಿಂತನೆ ನಡೆಸುತ್ತಿದೆ. ಅಲ್ಲದೆ ಪ್ರತಿ ಸರಣಿಗೂ ಬೋನಸ್‌, ಕ್ಯಾಲೆಂಡರ್ ವರ್ಷದಲ್ಲಿ ಎಲ್ಲಾ ಟೆಸ್ಟ್ ಪಂದ್ಯ ಆಡುವ ಆಟಗಾರನಿಗೆ ಕೇಂದ್ರೀಯ ಗುತ್ತಿಗೆಯ ಆಧಾರದಲ್ಲಿ ಹೆಚ್ಚುವರಿ ಹಣ ನೀಡುವ ಬಗ್ಗೆಯೂ ಬಿಸಿಸಿಐ ಆಲೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.

ದೇಶದ ಮೊದಲ ಮಹಿಳಾ ಪಿಚ್‌ ಕ್ಯುರೇಟರ್‌ ಜೆಸಿಂತಾ ಬಗ್ಗೆ ಜಯ್‌ ಶಾ ಮೆಚ್ಚುಗೆ

ಯಶಸ್ಸಿನ ಹಸಿವು ಇದ್ದವರಿಗಷ್ಟೆ ಅವಕಾಶ ನೀಡ್ತೇವೆ: ರೋಹಿತ್‌ ಶರ್ಮಾ

ನವದೆಹಲಿ: ಏಕದಿನ, ಟಿ20 ಆಡಿದರೂ ಟೆಸ್ಟ್‌ ಕ್ರಿಕೆಟ್‌ ಕಡೆಗಣಿಸುತ್ತಿರುವ ಕೆಲ ಆಟಗಾರರ ಬಗ್ಗೆ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಮವಾರ ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ನ ಬಳಿಕ ಮಾತನಾಡಿರುವ ಅವರು, ‘ಟೆಸ್ಟ್‌ ಕ್ರಿಕೆಟ್‌ ಅತ್ಯಂತ ಕಠಿಣ ಮಾದರಿ. ಸವಾಲುಗಳನ್ನು ಸ್ವೀಕರಿಸಿ ಯಶಸ್ಸು ಸಾಧಿಸಬೇಕು ಎನ್ನುವ ‘ಹಸಿವು’ ಇರುವ ಆಟಗಾರರಿಗೆ ಮಾತ್ರ ಅವಕಾಶ ನೀಡುತ್ತೇವೆ. ‘ಹಸಿವು’ ಇಲ್ಲದವರನ್ನು ಆಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದಿದ್ದಾರೆ.

ಇಶಾನ್‌ ಕಿಶನ್‌ ಸೇರಿದಂತೆ ಹಲವರು ಭಾರತ ತಂಡದಿಂದ ಹೊರಗುಳಿದಿದ್ದರೂ ದೇಸಿ ಕ್ರಿಕೆಟ್‌ನಲ್ಲಿ ಆಡದೆ ಐಪಿಎಲ್‌ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಸಿಸಿಐ ಸೂಕ್ತ ಕ್ರಮದ ಎಚ್ಚರಿಗೆ ನೀಡಿದ ಹೊರತಾಗಿಯೂ ಕೆಲ ಆಟಗಾರರು ಅದನ್ನು ಕಡೆಗಣಿಸಿದ್ದಾರೆ. ಇದರ ನಡುವೆಯೇ ರೋಹಿತ್‌ ಹೇಳಿಕೆ ಬಂದಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ದಶಕದ ಬಳಿಕ ರಣಜಿ ಟ್ರೋಫಿ ಕನಸಲ್ಲಿದ್ದ ಕರ್ನಾಟಕ ನಾಕೌಟಲ್ಲೇ ಔಟ್‌!

ಬೆಂಗ್ಳೂರು, ಚಂಡೀಗಢದಲ್ಲಿ ಇಂಗ್ಲೆಂಡ್‌ ತಂಡ ವಿಶ್ರಾಂತಿ

ರಾಂಚಿ: ಭಾರತದ ವಿರುದ್ಧ ಮಾರ್ಚ್‌ 7ರಂದು ಧರ್ಮಶಾಲಾದಲ್ಲಿ ಆರಂಭವಾಗಲಿರುವ 5ನೇ ಹಾಗೂ ಅಂತಿಮ ಟೆಸ್ಟ್‌ಗೆ 1 ವಾರ ಬಿಡುವು ಇರುವುದರಿಂದ ಇಂಗ್ಲೆಂಡ್‌ ಆಟಗಾರರು ಚಂಡೀಗಢ ಮತ್ತು ಬೆಂಗಳೂರಿನಲ್ಲಿ ಕಾಲ ಕಳೆಯಲಿದ್ದಾರೆ. 2ನೇ ಟೆಸ್ಟ್‌ನ ನಂತರ ಸಿಕ್ಕ ದೀರ್ಘ ವಿರಾಮವನ್ನು ಅಬು ಧಾಬಿಯಲ್ಲಿ ಕಳೆದಿದ್ದ ಬೆನ್‌ ಸ್ಟೋಕ್ಸ್‌ ನೇತೃತ್ವದ ಇಂಗ್ಲೆಂಡ್‌ ಆಟಗಾರರು, ಸದ್ಯ ಭಾರತದಲ್ಲೇ ನೆಲೆಸಲು ನಿರ್ಧರಿಸಿದ್ದಾರೆ. 2 ನಗರಗಳಲ್ಲಿ ವಿಶ್ರಾಂತಿ ಪಡೆಯಲಿರುವ ಆಟಗಾರರು ಮಾ.4ರಂದು ಧರ್ಮಶಾಲಾದಲ್ಲಿ ಒಟ್ಟುಗೂಡಲಿದ್ದಾರೆ.

Follow Us:
Download App:
  • android
  • ios