Asianet Suvarna News Asianet Suvarna News

ಪಿಂಕ್ ಬಾಲ್ ಟೆಸ್ಟ್; ಮೊದಲ ಶತಕ ಸಿಡಿಸಿದ್ದು ಕೊಹ್ಲಿ ಅಲ್ಲ, ರಾಹುಲ್ ದ್ರಾವಿಡ್!

ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿದ ಭಾರತೀಯ ವಿರಾಟ್ ಕೊಹ್ಲಿ ಅಲ್ಲ, ಬದಲಾಗಿ ರಾಹುಲ್ ದ್ರಾವಿಡ್. ಕೊಹ್ಲಿಗಿಂತ ಮೊದಲೇ ರಾಹುಲ್ ದ್ರಾವಿಡ್ ಪಿಂಕ್ ಬಾಲ್ ಸೆಂಚುರಿ ದಾಖಲಿಸಿ ಇತಿಹಾಸ ರಚಿಸಿದ್ದಾರೆ. 

Rahul dravid become fist indian to hit century in pink ball test not virat kohli
Author
Bengaluru, First Published Nov 24, 2019, 5:55 PM IST

ಕೋಲ್ಕತಾ(ನ.24): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವಿನ ಮೂಲಕ ಇತಿಹಾಸ ರಚಿಸಿದೆ. ಆದರೆ ಪಂದ್ಯ ಕೇವಲ ಎರಡೂವರೆ ದಿನಕ್ಕೆ ಮುಗಿದು ಹೋಗಿದೆ ಅನ್ನೋದೇ ಬೇಸರ. ಭಾರತ ಇದೇ  ಮೊದಲ ಬಾರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆಯೋಜಿಸಿತ್ತು. ಈ ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸೋ ಮೂಲಕ, ಪಿಂಕ್ ಬಾಲ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎನಿಸಿಕೊಂಡರು. ಆದರೆ ಕೊಹ್ಲಿಗಿಂತ ಮೊದಲು ಟೆಸ್ಟ್ ಸ್ಪೆಷಲಿಸ್ಟ್ ರಾಹುಲ್ ದ್ರಾವಿಡ್ ಸೆಂಚುರಿ ಸಿಡಿಸಿದ್ದಾರೆ.

ಇದನ್ನೂ ಓದಿ: ಪಿಂಕ್ ಬಾಲ್ ಟೆಸ್ಟ್; ಶತಕ ಸಿಡಿಸಿ ದಾಖಲೆ ಬರೆದ ವಿರಾಟ್ ಕೊಹ್ಲಿ!

ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿದ ಭಾರತೀಯ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್‌ಗೆ ಸಲ್ಲಬೇಕು. MCC ಪರ 2011ರಲ್ಲೇ ರಾಹುಲ್ ದ್ರಾವಿಡ್ ಪಿಂಕ್ ಬಾಲ್ ಸೆಂಚುರಿ ದಾಖಲಿಸಿದ್ದಾರೆ. ಹೌದು, 2011ರಲ್ಲಿ ರಾಹುಲ್ ದ್ರಾವಿಡ್ ಇಂಗ್ಲೀಷ್ ಕೌಂಟಿ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಎಂಸಿಸಿ ತಂಡದ ಪರವಾಗಿ ಆಡಿದ್ದರು. ಪಿಂಕ್ ಟೆಸ್ಟ್ ಪಂದ್ಯದಲ್ಲಿ ರಾಹುಲ್ ದ್ರಾವಿಡ್, ನಾಟಿಂಗ್‌ಹ್ಯಾಮ್‌ಶೈರ್ ವಿರುದ್ಧ ಸೆಂಚುರಿ ಸಿಡಿಸಿದ್ದರು.

ಇದನ್ನೂ ಓದಿ: ಇಶಾಂತ್-ಉಮೇಶ್ ಬಿರುಗಾಳಿ, ಪಿಂಕ್ ಬಾಲ್ ಟೆಸ್ಟ್ ಟೀಂ ಇಂಡಿಯಾ ಕೈವಶ

ಅಬುಧಾಬಿಯಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಮೊದಲ ಇನಿಂಗ್ಸ್‌ನಲ್ಲಿ ಡಕೌಟ್ ಆಗಿದ್ದರು. ಆದರೆ 2ನೇ ಇನಿಂಗ್ಸ್‌ನಲ್ಲಿ ದ್ರಾವಿಡ್ ಶತಕ ದಾಖಲಿಸಿದ್ದರು. 106 ರನ್ ಸಿಡಿಸಿದ ದ್ರಾವಿಡ್, ಎಂಸಿಸಿ ತಂಡಕ್ಕೆ 174 ರನ್ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿದ ಭಾರತೀಯ ರಾಹುಲ್ ದ್ರಾವಿಡ್ ಹೊರತು, ವಿರಾಟ್ ಕೊಹ್ಲಿ ಅಲ್ಲ.
 

Follow Us:
Download App:
  • android
  • ios