ಟೀಂ ಇಂಡಿಯಾ ಸಂಘಟಿತ ಪ್ರದರ್ಶನದ ನೆರವಿನಿಂದ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಇನಿಂಗ್ಸ್ ಗೆಲುವು ದಾಖಲಿಸಿದೆ. ಈ ಮೂಲಕ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ವಿರಾಟ್ ಪಡೆ ಯಶಸ್ವಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಕೋಲ್ಕತಾ[ನ.24]: ಟೀಂ ಇಂಡಿಯಾ ವೇಗಿಗಳಾದ ಉಮೇಶ್ ಯಾದವ್[5] ಹಾಗೂ ಇಶಾಂತ್ ಶರ್ಮಾ[4] ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಎರಡನೇ ಇನಿಂಗ್ಸ್’ನಲ್ಲಿ ಕೇವಲ 195 ರನ್’ಗಳಿಗೆ ಹೋರಾಟ ಅಂತ್ಯಗೊಂಡಿದೆ. ಈ ಮೂಲಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 46 ರನ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡುವುದರೊಂದಿಗೆ ತವರಿನಲ್ಲಿ ಟೀಂ ಇಂಡಿಯಾ 12ನೇ ಸರಣಿ ಗೆಲುವು ದಾಖಲಿಸಿದೆ.

Scroll to load tweet…
Scroll to load tweet…

ಇಶಾಂತ್ ದಾಳಿಗೆ ಬಾಂಗ್ಲಾ ತತ್ತರ, ಇತಿಹಾಸ ರಚಿಸಲು ಭಾರತ ಕಾತರ!

ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಮೊದಲ ಇನಿಂಗ್ಸ್’ನಲ್ಲಿ ಕೇವಲ 106 ರನ್’ಗಳಿಗೆ ಆಲೌಟ್ ಮಾಡಿತ್ತು. ಇದಕ್ಕುತ್ತರವಾಗಿ ಭಾರತ 9 ವಿಕೆಟ್ ಕಳೆದುಕೊಂಡು 347 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ವಿರಾಟ್ ಪಡೆ 241 ರನ್’ಗಳ ಮುನ್ನಡೆ ಕಾಯ್ದುಕೊಂಡಿತ್ತು. ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾ 195 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ವಿರಾಟ್ ಪಡೆಯ ಗೆಲುವಿನ ನಾಗಾಲೋಟ ಮತ್ತೆ ಮುಂದುವರೆದ್ದು, 360 ಅಂಕಗಳೊಂದಿಗೆ ನಂ.1 ಸ್ಥಾನದಲ್ಲೇ ಮುಂದುವರೆದಿದೆ. 

ಇನ್ನಿಂಗ್ಸ್‌ ಡಿಕ್ಲೇರ್‌ನಲ್ಲೂ ಟೀಂ ಇಂಡಿಯಾ ವಿಶ್ವ​ದಾ​ಖಲೆ!

ಟೀಂ ಇಂಡಿಯಾ ಗೆಲುವಿನ ರೂವಾರಿಗಳು: ಟಾಸ್ ಸೋತರೂ ಬೌಲಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರಿತು. ಇಶಾಂತ್ ಶರ್ಮಾ 22 ರನ್ ನೀಡಿ 5 ವಿಕೆಟ್ ಪಡೆದರೆ, ಉಮೇಶ್ 3 ಹಾಗೂ ಶಮಿ 2 ವಿಕೆಟ್ ಪಡೆದರು. ಇನ್ನು ಬ್ಯಾಟಿಂಗ್’ನಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ[36] ಬಾರಿಸಿದರೆ, ಪೂಜಾರ[55] ಹಾಗೂ ರಹಾನೆ[51] ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಇನ್ನು ಎರಡನೇ ಇನಿಂಗ್ಸ್’ನಲ್ಲಿ ಉಮೇಶ್ ಯಾದವ್ 5 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ 4 ವಿಕೆಟ್ ಕಬಳಿಸಿದರು. ಮೊಹಮದುಲ್ಲಾ ರಿಟೈರ್ಡ್ ಹರ್ಟ್ ಆಗಿ ಹೊರ ನಡೆದಿದ್ದರಿಂದ ಬ್ಯಾಟಿಂಗ್ ನಡೆಸಲು ಬರಲಿಲ್ಲ.

ಬಾಂಗ್ಲಾ ಬ್ಯಾಟಿಂಗ್’ನಲ್ಲಿ ಮತ್ತೆ ಫೇಲ್: ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಬೌಲರ್’ಗಳು ಟೀಂ ಇಂಡಿಯಾ ಬ್ಯಾಟ್ಸ್’ಮನ್’ಗಳಿಗೆ ಸವಾಲೊಡ್ಡಿದರೂ, ಬ್ಯಾಟಿಂಗ್’ನಲ್ಲಿ ಮುಷ್ಫೀಕುರ್ ರಹೀಮ್[74], ಮೊಹಮದುಲ್ಲಾ[39*] ಹೊರತುಪಡಿಸಿ ಉಳಿದ್ಯಾವ ಆಟಗಾರರು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ಅಗ್ರಕ್ರಮಾಂಕದ ನಾಲ್ವರು ಬ್ಯಾಟ್ಸ್’ಮನ್’ಗಳ ಪೈಕಿ ಇಬ್ಬರು ಶೂನ್ಯ ಸುತ್ತಿದರೆ, ಮತ್ತಿಬ್ಬರು ಕೇವಲ ಒಂದಂಕಿ ಮೊತ್ತ ದಾಖಲಿಸಿದರು.

ಅಂಕಿ-ಅಂಶ:

* ಸತತ 4 ಬಾರಿ ಇನಿಂಗ್ಸ್ ಜಯ ದಾಖಲಿಸಿದ ವಿಶ್ವದ ಮೊದಲ ತಂಡ ಟೀಂ ಇಂಡಿಯಾ.

* ಈ ಗೆಲುವಿನೊಂದಿಗೆ ಅಲನ್ ಬಾರ್ಡರ್[32] ಹಿಂದಿಕ್ಕಿ ವಿರಾಟ್ ಕೊಹ್ಲಿ[33] ಅತಿಹೆಚ್ಚು ಟೆಸ್ಟ್ ಗೆಲುವು ಸಾಧಿಸಿದ 5ನೇ ಕ್ರಿಕೆಟಿಗ ಎನಿಸಿದರು. ಅತಿಹೆಚ್ಚು ಟೆಸ್ಟ್ ಗೆಲುವು ತಂದುಕೊಟ್ಟ ನಾಯಕ ಎನ್ನುವ ದಾಖಲೆ ದಕ್ಷಿಣ ಆಫ್ರಿಕಾ ನಾಯಕ ಸ್ಟೀವ್ ಸ್ಮಿತ್[53] ಹೆಸರಿನಲ್ಲಿದೆ.

ನವೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: