ಅಹಮದಾಬಾದ್‌ನ ಬಡವರ ಪಾಲಿಗೆ ದೇವರಾದ ಗುರ್ಬಾಜ್..! ಆಫ್ಘಾನ್ ಕ್ರಿಕೆಟಿಗ ಮಾಡಿದ್ದೇನು ನೋಡಿ
ಬೀದಿಬದಿ ನಿರಾಶ್ರಿತರಾಗಿ ಮಲಗಿಕೊಂಡಿದ್ದ ಮಂದಿಯ ಬಳಿ ಅವರಿಗೆ ಅರಿವಿಲ್ಲದಂತೆ ಹಣವನ್ನು ನೀಡಿ ಕಾರಿನಲ್ಲಿ ತೆರಳಿದ್ದಾರೆ. ಈ ಮೂಲಕ ಬಡವರೂ ಕೂಡಾ ಖುಷಿಯಿಂದ ದೀಪಾವಳಿ ಆಚರಿಸುವಂತೆ ಆಗಲಿ ಎನ್ನುವ ಸಂದೇಶವನ್ನು ಸಾರಿದ್ದಾರೆ. ರೆಹಮನುಲ್ಲಾ ಗುರ್ಬಾಜ್ ಅವರ ಈ ಒಳ್ಳೆಯ ಗುಣ ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಅಹಮದಾಬಾದ್(ನ.12): ಆಫ್ಘಾನಿಸ್ತಾನ ಕ್ರಿಕೆಟ್ ತಂಡವು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಿಟ್ಟ ಹೋರಾಟದ ಹೊರತಾಗಿಯೂ ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿದೆ. ಆದರೆ ಟೂರ್ನಿಯುದ್ದಕ್ಕೂ ಆಫ್ಘಾನ್ ಕ್ರಿಕೆಟ್ ತಂಡದ ಆಟಗಾರರ ತೋರಿದ ಕೆಚ್ಚೆದೆಯ ಹೋರಾಟ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ರೆಹಮನುಲ್ಲಾ ಗುರ್ಬಾಜ್, ಅಹಮದಾಬಾದ್‌ನ ನಿರ್ಗತಿಕರ ಪಾಲಿಗೆ ಆಸರೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ಹೌದು, ಇಡೀ ದೇಶವೇ ಬೆಳಕಿನ ಹಬ್ಬವಾದ ದೀಪಾವಳಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಿದೆ. ಒಂದು ಕಡೆಯಾದರೆ, ಮತ್ತೊಂದೆಡೆ ಇನ್ನೂ ಎಷ್ಟೋ ಮಂದಿ ಈಗಲೂ ದೇಶದಲ್ಲಿ ತುತ್ತು ಊಟಕ್ಕೆ, ನೆಮ್ಮದಿಯ ಆಸರೆಯನ್ನು ಪಡೆಯಲು ಪರದಾಡುತ್ತಿದ್ದಾರೆ ಎನ್ನುವುದು ಕೂಡಾ ನಗ್ನ ಸತ್ಯ. ಹೀಗಿರುವಾಗ ಆಫ್ಘಾನಿಸ್ತಾನ ಆರಂಭಿಕ ಬ್ಯಾಟರ್ ರೆಹಮನುಲ್ಲಾ ಗುರ್ಬಾಜ್, ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಅಹಮದಾಬಾದ್‌ನ ರಸ್ತೆ ಬದಿ ಮಲಗಿಕೊಂಡಿದ್ದ ನಿರ್ಗತಿಕರಿಗೆ ತಾವು ಸಂಪಾದಿಸಿದ ಹಣವನ್ನು ದಾನ ಮಾಡುವ ಮೂಲಕ ದೀಪಾವಳಿ ಆಚರಿಸಲು ಸರ್ಪ್ರೈಸ್ ನೀಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಈ ವಿಶ್ವಕಪ್‌ನಲ್ಲಿ ಪಾಕ್‌ಗಿಂತ ಅಫ್ಘನ್ ಆಟ ಚೆನ್ನಾಗಿತ್ತು: ವಾಸೀಂ ಅಕ್ರಂ
ಬೀದಿಬದಿ ನಿರಾಶ್ರಿತರಾಗಿ ಮಲಗಿಕೊಂಡಿದ್ದ ಮಂದಿಯ ಬಳಿ ಅವರಿಗೆ ಅರಿವಿಲ್ಲದಂತೆ ಹಣವನ್ನು ನೀಡಿ ಕಾರಿನಲ್ಲಿ ತೆರಳಿದ್ದಾರೆ. ಈ ಮೂಲಕ ಬಡವರೂ ಕೂಡಾ ಖುಷಿಯಿಂದ ದೀಪಾವಳಿ ಆಚರಿಸುವಂತೆ ಆಗಲಿ ಎನ್ನುವ ಸಂದೇಶವನ್ನು ಸಾರಿದ್ದಾರೆ. ರೆಹಮನುಲ್ಲಾ ಗುರ್ಬಾಜ್ ಅವರ ಈ ಒಳ್ಳೆಯ ಗುಣ ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ತನ್ನದೇ ದೇಶವು ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿದ್ದರೂ, ಭಾರತದಲ್ಲಿರುವ ಬಡವರಿಗೆ ನೆರವಾಗಬೇಕು ಎಂದು ಮುಂದಾದ ಗುರ್ಬಾಜ್ ಅವರನ್ನು ನೆಟ್ಟಿಗರು ನೀನಂತೂ ದೇವ ಮಾನವನಾಗಿಬಿಟ್ಟೆ ಬಿಡು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗುಣಗಾನ ಮಾಡಿದ್ದಾರೆ.
2019ರ ಸೋಲನ್ನು ಮರೆತಿಲ್ಲ ಭಾರತೀಯರು..! 4 ವರ್ಷಗಳ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಸಿಕ್ಕದೆ ಗೋಲ್ಡನ್ ಚಾನ್ಸ್
ಆಫ್ಘಾನಿಸ್ತಾನ ತಂಡವು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ 9 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 5 ಸೋಲು ಕಂಡಿದೆ. ಆಫ್ಘಾನಿಸ್ತಾನ ತಂಡವು ಏಕದಿನ ವಿಶ್ವಕಪ್ ಸೆಮೀಸ್‌ಗೇರಲು ವಿಫಲವಾಗಿದ್ದರೂ ಸಹಾ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಲ್ಗೊಳ್ಳಲು ಇದೇ ಮೊದಲ ಬಾರಿಗೆ ಅರ್ಹತೆ ಪಡೆಯಲು ಯಶಸ್ವಿಯಾಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆಫ್ಘಾನಿಸ್ತಾನ ಪಾಲಿನ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ಎದುರು 5 ವಿಕೆಟ್ ಅಂತರದ ಸೋಲು ಅನುಭವಿಸಿತು. ರೆಹಮನುಲ್ಲಾ ಗುರ್ಬಾಜ್, ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 9 ಇನಿಂಗ್ಸ್‌ಗಳನ್ನಾಡಿ 31.11ರ ಬ್ಯಾಟಿಂಗ್ ಸರಾಸರಿಯಲ್ಲಿ 280 ರನ್ ಗಳಿಸಿದೆ. ಇನ್ನು ಇಬ್ರಾಹಿಂ ಜದ್ರಾನ್, ಈ ಬಾರಿ ಆಫ್ಘಾನಿಸ್ತಾನ ಪರ ಅತ್ಯಂತ ಯಶಸ್ವಿ ಬ್ಯಾಟರ್ ಆಗಿ ಹೊರಹೊಮ್ಮಿದ್ದು, ಒಂದು ಶತಕ ಸಹಿತ 493 ರನ್ ಸಿಡಿಸಿದ್ದರು.