Asianet Suvarna News Asianet Suvarna News

ಈ ವಿಶ್ವಕಪ್‌ನಲ್ಲಿ ಪಾಕ್‌ಗಿಂತ ಅಫ್ಘನ್‌ ಆಟ ಚೆನ್ನಾಗಿತ್ತು: ವಾಸೀಂ ಅಕ್ರಂ

ಟೀವಿ ಚರ್ಚೆಯಲ್ಲಿ ಮಾತನಾಡಿದ ಮಲಿಕ್‌, ‘ಈ ವಿಶ್ವಕಪ್‌ ಮಾತ್ರ ನೋಡುವುದಾದರೆ ಆಫ್ಘನ್‌ ಪ್ರದರ್ಶನ ಪಾಕ್‌ಗಿಂತ ಉತ್ತಮವಾಗಿತ್ತು. ಏಷ್ಯಾದ ದೇಶಗಳ ಪೈಕಿ ಭಾರತ ಮಾತ್ರ ಸೆಮೀಸ್‌ಗೇರುವ ಅರ್ಹತೆ ಹೊಂದಿದೆ’ ಎಂದಿದ್ದಾರೆ.

ICC World Cup 2023 Afghanistan played better cricket than Pakistan feel Wasim Akram and Shoaib Malik kvn
Author
First Published Nov 12, 2023, 10:37 AM IST

ಲಾಹೋರ್‌(ನ.12): ಈ ಬಾರಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕಿಂತ ಅಫ್ಘಾನಿಸ್ತಾನದ ಪ್ರದರ್ಶನ ಉತ್ತಮವಾಗಿತ್ತು ಎಂದು ಪಾಕ್‌ ಮಾಜಿ ಕ್ರಿಕೆಟಿಗರಾದ ವಾಸೀಂ ಅಕ್ರಂ, ಶೋಯಿಬ್‌ ಮಲಿಕ್‌ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಟೀವಿ ಚರ್ಚೆಯಲ್ಲಿ ಮಾತನಾಡಿದ ಮಲಿಕ್‌, ‘ಈ ವಿಶ್ವಕಪ್‌ ಮಾತ್ರ ನೋಡುವುದಾದರೆ ಆಫ್ಘನ್‌ ಪ್ರದರ್ಶನ ಪಾಕ್‌ಗಿಂತ ಉತ್ತಮವಾಗಿತ್ತು. ಏಷ್ಯಾದ ದೇಶಗಳ ಪೈಕಿ ಭಾರತ ಮಾತ್ರ ಸೆಮೀಸ್‌ಗೇರುವ ಅರ್ಹತೆ ಹೊಂದಿದೆ’ ಎಂದಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ವಾಸೀಂ, ಆಫ್ಘನ್‌ ಕ್ರಿಕೆಟಿಗರು ಪಾಕ್‌ಗಿಂತ ಶ್ರೇಷ್ಠ ಅಟವಾಡಿದರು. ಅದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದಿದ್ದಾರೆ.

ಇಂಗ್ಲೆಂಡ್‌ ವಿರುದ್ಧ 93 ರನ್‌ ಹೀನಾಯ ಸೋಲುಂಡ ಪಾಕ್‌ ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿ ಗಂಟುಮೂಟೆ ಕಟ್ಟಿದೆ. ಟೂರ್ನಿ ಆರಂಭಕ್ಕೂ ಮುನ್ನ ಸೆಮೀಸ್‌ಗೇರಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಪಾಕಿಸ್ತಾನ, ಇದೀಗ ಲೀಗ್ ಹಂತದಲ್ಲೇ ತಮ್ಮ ಅಭಿಯಾನ ಮುಗಿಸಿದೆ.

533 ರನ್ ನೀಡಿ ಪಾಕ್‌ನ ರೌಫ್‌ ಅನಗತ್ಯ ದಾಖಲೆ

ಕೋಲ್ಕತಾ: ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌ ಈ ಬಾರಿ ವಿಶ್ವಕಪ್‌ನಲ್ಲಿ ಅನಗತ್ಯ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಟೂರ್ನಿಯ 9 ಪಂದ್ಯಗಳಲ್ಲಿ ಒಟ್ಟು 533 ರನ್‌ ಬಿಟ್ಟುಕೊಟ್ಟಿದ್ದು, ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್ ಬಿಟ್ಟುಕೊಟ್ಟ ಅಪಕೀರ್ತಿಗೆ ಗುರಿಯಾಗಿದ್ದಾರೆ. ಈ ದಾಖಲೆ ಈ ಮೊದಲು ಇಂಗ್ಲೆಂಡ್‌ನ ಆದಿಲ್‌ ರಶೀದ್‌ ಹೆಸರಲ್ಲಿತ್ತು. ಅವರು 2019ರಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 526 ರನ್‌ ಬಿಟ್ಟುಕೊಟ್ಟಿದ್ದರು. ಶ್ರೀಲಂಕಾದ ಮಧುಶಂಕ ಈ ಬಾರಿ 525, 2019ರಲ್ಲಿ ಆಸ್ಟ್ರೇಲಿಯಾದ ಮಿಚೆಲ್‌ ಸ್ಟಾರ್ಕ್‌ 502 ರನ್‌ ನೀಡಿದ್ದರು.

ಮುಂಬೈನಲ್ಲಿ ಭಾರತ vs ಕಿವೀಸ್‌ ಮೊದಲ ಸೆಮೀಸ್‌! ಒಂದು ವೇಳೆ ಪಂದ್ಯ ರದ್ದಾದರೆ ಫೈನಲ್‌ಗೆ ಯಾರು?

ಪಾಕ್‌ಗಿನ್ನು 1 ವರ್ಷ ಏಕದಿನ ಪಂದ್ಯವಿಲ್ಲ!

ಕೋಲ್ಕತಾ: ವಿಶ್ವಕಪ್‌ನಲ್ಲಿ ಸೋಲಿನೊಂದಿಗೆ ತನ್ನ ಅಭಿಯಾನ ಕೊನೆಗೊಳಿಸಿರುವ ಪಾಕಿಸ್ತಾನ ಮತ್ತೆ ಏಕದಿನ ಪಂದ್ಯವಾಡುವುದು 2024ರ ನವೆಂಬರ್‌ನಲ್ಲಿ. ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿ ಆಡಲಿರುವ ಪಾಕ್‌, ಆ ಬಳಿಕ ಹೆಚ್ಚಾಗಿ ಟಿ20 ಸರಣಿಗಳನ್ನೇ ಆಡಲಿದೆ. ಮುಂದಿನ ವರ್ಷ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆ ಪ್ರವಾಸದಲ್ಲಿ ಏಕದಿನ ಸರಣಿ ನಿಗದಿಯಾಗಿದೆ.

ಪಾಕ್‌ ನಾಯಕತ್ವ ಬಿಡಲು ಬಾಬರ್‌ ನಿರ್ಧಾರ: ವರದಿ

ಕರಾಚಿ: ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸೆಮಿಫೈನಲ್‌ ಪ್ರವೇಶಿಸಲು ವಿಫಲವಾಗಿದ್ದು, ಈ ಬಗ್ಗೆ ಮಾಜಿ ಕ್ರಿಕೆಟಿಗರು, ಅಭಿಮಾನಿಗಳಿಂದ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವಕಪ್‌ ಬಳಿಕ ಬಾಬರ್‌ ಆಜಂ ತಂಡದ ನಾಯಕತ್ವ ತ್ಯಜಿಸಲಿದ್ದಾರೆ ಎಂದು ವರದಿಯಾಗಿದೆ. 

ICC World Cup 2023: ನೆದರ್‌ಲೆಂಡ್ಸ್‌ ಬೇಟೆಗೆ ಅಜೇಯ ಟೀಂ ಇಂಡಿಯಾ ಸಜ್ಜು..!

ಟೂರ್ನಿ ಮುಕ್ತಾಯಗೊಂಡ ಬಳಿಕ ಪಾಕಿಸ್ತಾನಕ್ಕೆ ತೆರಳಿ ಈ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಅವರ ಸಹ ಆಟಗಾರರು ನಾಯಕತ್ವ ಬಿಡದಂತೆ ಬಾಬರ್‌ಗೆ ಮನವಿ ಮಾಡಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಮೂಲಗಳು ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಬಾಬರ್‌ ನಾಯಕತ್ವ ತ್ಯಜಿಸಿದರೆ ಇಮಾಂ, ಶದಾಬ್‌ ಖಾನ್‌, ಶಾಹೀನ್‌ ಅಫ್ರಿದಿ ಅಥವಾ ಹ್ಯಾರಿಸ್‌ ರೌಫ್‌ ನಾಯಕತ್ವ ವಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
 

Follow Us:
Download App:
  • android
  • ios