ಹರಿಣಗಳ ವಿರುದ್ಧ ಸ್ಪಿನ್ ಮೋಡಿ; ಕುಂಬ್ಳೆ ಸಾಲಿಗೆ ಸೇರಿದ ಅಶ್ವಿನ್!
ಸೌತ್ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿದ ಆರ್ ಅಶ್ವಿನ್ ದಿಗ್ಗಜರ ಸಾಲಿಗೆ ಸೇರಿಕೊಂಡಿದ್ದಾರೆ. ಹರಿಗಣಳಿಗೆ ಮತ್ತೊಂದು ಶಾಕ್ ನೀಡಿ, ಆರ್ ಅಶ್ವಿನ್ ಬರೆದ ದಾಖಲೆ ವಿವರ ಇಲ್ಲಿದೆ.
ಪುಣೆ(ಅ.12): ಸೌತ್ ಆಫ್ರಿಕಾ ವಿರುದ್ದ ಪುಣೆ ಟೆಸ್ಟ್ ಪಂದ್ಯದ 3ನೇ ದಿನವೂ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಭಾರತ ಮೊದಲ ಇನಿಂಗ್ಸ್‌ನಲ್ಲಿ 601 ರನ್‌ಗೆ ಉತ್ತರವಾಗಿ ಸೌತ್ ಆಫ್ರಿಕಾ ಕೇವಲ 275 ರನ್ ಸಿಡಿಸಿ ಆಲೌಟ್ ಆಯಿತು. ಹರಿಗಣಗಳನ್ನು ಆಲೌಟ್ ಮಾಡುವಲ್ಲಿ ಆರ್ ಅಶ್ವಿನ್ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ದಿಗ್ಗಜ ಅನಿಲ್ ಕುಂಬ್ಳೆಗೆ ಸಾಲಿಗೆ ಸೇರಿದ್ದಾರೆ.
ಇದನ್ನೂ ಓದಿ: ಅಶ್ವಿನ್ ಬೌಲಿಂಗ್‌ಗೆ ತಬ್ಬಿಬ್ಬಾದ ಡಿಕಾಕ್: ವಿಡಿಯೋ ವೈರಲ್
ಸೌತ್ ಆಫ್ರಿಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ 326 ರನ್ ಹಿನ್ನಡೆಯಲ್ಲಿದೆ. ಆರ್ ಅಶ್ವಿನ್ 4 ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಸೌತ್ ಆಫ್ರಿಕಾ ವಿರುದ್ದ ಅಶ್ವಿನ್ 50 ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಇದರೊಂದಿಗೆ ಸೌತ್ ಆಫ್ರಿಕಾ ವಿರುದ್ದ 50ಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ನಾಲ್ಕನೇ ಕ್ರಿಕೆಟಿಗ ಅನ್ನೋ ದಾಖಲೆ ಬರೆದರು.
ಇದನ್ನೂ ಓದಿ: ಅಶ್ವಿನ್, ಜಡೇಜಾಗೆ ಮೊದಲ ಆದ್ಯತೆ; ವರಸೆ ಬದಲಿಸಿದ ಕೊಹ್ಲಿ!
ಸೌತ್ ಆಫ್ರಿಕಾ ವಿರುದ್ಧ ಗರಿಷ್ಠ ವಿಕೆಟ್ ಸಾಧಕರು(ಟೆಸ್ಟ್)
ಅನಿಲ್ ಕುಂಬ್ಳೆ = 84
ಜಾವಗಲ್ ಶ್ರೀನಾಥ್ = 64
ಹರ್ಭಜನ್ ಸಿಂಗ್ = 60
ಆರ್ ಅಶ್ವಿನ್ = 50
ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ 2ನೇ ಪಂದ್ಯದಲ್ಲೂ ಭರ್ಜರಿ ಮೇಲುಗೈ ಸಾಧಿಸಿದೆ.