ರವಿಚಂದ್ರನ್ ಅಶ್ವಿನ್ ಮಿಂಚಿದ ದಾಳಿಗೆ ಕ್ವಿಂಟನ್ ಡಿಕಾಕ್ ಪೆವಿಲಿಯನ್ ಸೇರಿದ್ದಾರೆ. ಪುಣೆ ಟೆಸ್ಟ್ ಪಂದ್ಯದಲ್ಲಿ ಭಾರತ ಹರಿಣಗಳ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಪುಣೆ[ಅ.12]: ಟೀಂ ಇಂಡಿಯಾ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕ್ವಿಂಟನ್ ಡಿಕಾಕ್ ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವೈಜಾಗ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಡಿಕಾಕ್’ಗೆ, ಅಶ್ವಿನ್ ಬ್ರೇಕ್ ಹಾಕಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪುಣೆ ಟೆಸ್ಟ್: ಫಾಲೋ ಆನ್ ಭೀತಿಯಲ್ಲಿ ಆಫ್ರಿಕಾ

ಇದೀಗ ಪುಣೆ ಟೆಸ್ಟ್ ಪಂದ್ಯದಲ್ಲಿ ನಾಯಕ ಡುಪ್ಲೆಸಿಸ್ ಜತೆಗೂಡಿ ಡಿಕಾಕ್ ಅರ್ಧಶತಕದ ಜತೆಯಾಟ ನಿಭಾಯಿಸಿದ್ದರು. ಈ ಮೂಲಕ ಭಾರತ ತಂಡಕ್ಕೆ ಆತಂಕವನ್ನುಂಟು ಮಾಡಿದ್ದರು. ಈ ಜೋಡಿ ಆರನೇ ವಿಕೆಟ್’ಗೆ 75 ರನ್’ಗಳ ಜತೆಯಾಟವಾಡಿದ್ದರು. ಆದರೆ 38ನೇ ಓವರ್’ನಲ್ಲಿ ಅಶ್ವಿನ್ ಹಾಕಿದ ಮಾಂತ್ರಿಕ ಸ್ಪಿನ್ ಎಸೆತ ಡಿಕಾಕ್ ಬೇಲ್ಸ್ ಎಗರಿಸಿತು. ಒಂದು ಕ್ಷಣ ಏನಾಯ್ತು ಎಂದು ಸ್ವತಃ ಡಿಕಾಕ್’ಗೂ ಅರ್ಥವಾಗಲಿಲ್ಲ. 

ಹೀಗಿತ್ತು ನೋಡಿ ಆ ಕ್ಷಣ:

Scroll to load tweet…

ರವಿಚಂದ್ರನ್ ಅಶ್ವಿನ್ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದಿದ್ದರು. ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 2 ವಿಕೆಟ್ ಪಡೆದಿದ್ದಾರೆ.

ಪುಣೆ ಟೆಸ್ಟ್: ಭಾರತ ಬೃಹತ್ ಮೊತ್ತ, 3 ವಿಕೆಟ್ ಕಳೆದುಕೊಂಡ ಸೌತ್ ಆಫ್ರಿಕಾ!

ಇದೀಗ 60 ಓವರ್ ಮುಕ್ತಾಯದ ವೇಳೆಗೆ ದಕ್ಷಿಣ ಆಫ್ರಿಕಾ ತಂಡ 8 ವಿಕೆಟ್ ಕಳೆದುಕೊಂಡು 167 ರನ್ ಬಾರಿಸಿದೆ. ಫಿಲಾಂಡರ್ 14 ಹಾಗೂ ಕೇಶವ್ ಮಹರಾಜ್ 4 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.