IPL 2022: ಶಿಖರ್ ಧವನ್‌ಗೆ ತಂದೆಯಿಂದಲೇ ಹಿಗ್ಗಾಮುಗ್ಗ ಥಳಿತ..! ವಿಡಿಯೋ ವೈರಲ್

* ಐಪಿಎಲ್ ಪ್ಲೇ ಆಫ್‌ಗೇರಲು ಪಂಜಾಬ್ ಕಿಂಗ್ಸ್ ವಿಫಲ

* ಶಿಖರ್ ಧವನ್ ಪ್ರತಿನಿಧಿಸಿದ್ದ ಪಂಜಾಬ್ ಕಿಂಗ್ಸ್‌ ನಾಕೌಟ್‌ಗೇರಲು ವಿಫಲ

* ನಾಕೌಟ್‌ಗೇರಲು ವಿಫಲವಾದ ಬೆನ್ನಲ್ಲೇ ತಂದೆಯಿಂದಲೇ ಗಬ್ಬರ್‌ ಸಿಂಗ್‌ಗೆ ಥಳಿತ..!

Punjab Kings batter Shikhar Dhawan kicked, slapped by his father funny video goes viral kvn

ನವದೆಹಲಿ(ಮೇ.26): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಮಯಾಂಕ್ ಅಗರ್‌ವಾಲ್  ನೇತೃತ್ವದ ಪಂಜಾಬ್ ಕಿಂಗ್ಸ್‌ (Mayank Agarwal Led Punjab Kings) ತಂಡವು ಪ್ಲೇ ಆಫ್‌ ಪ್ರವೇಶಿಸುವಲ್ಲಿ ವಿಫಲವಾಗಿದೆ. ಇನ್ನು ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ ಶಿಖರ್ ಧವನ್ (Shikhar Dhawan) ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರಾದರೂ, ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡುವಲ್ಲಿ ವಿಫಲವಾಗಿದ್ದಾರೆ. ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ (Indian Cricket Team) ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಧವನ್ ವಿಫಲರಾಗಿದ್ದಾರೆ. ಇದರ ಬೆನ್ನಲ್ಲೇ ಮನೆಗೆ ವಾಪಸ್ಸಾಗಿರುವ ಶಿಖರ್ ಧವನ್‌ಗೆ ಅವರ ತಂದೆ ಮನಬಂದಂತೆ ಥಳಿಸಿದ್ದಾರೆ. ಕುಟುಂಬಸ್ಥರು ತಡೆಯಲು ಬಂದರೂ ಸುಮ್ಮನಾಗದೇ ಧವನ್‌ಗೆ ಅವರ ತಂದೆ ಜಾಡಿಸಿ ಒದ್ದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅರೇ ಏನಿದು..? ಅಷ್ಟಕ್ಕೂ ಶಿಖರ್ ಧವನ್ ಅಂತಹ ತಪ್ಪೇನು ಮಾಡಿಬಿಟ್ಟರು ಅಂತ ಜಾಸ್ತಿ ಟೆನ್ಷನ್ ಆಗಬೇಡಿ. ಇದೊಂದು ಫನ್ನಿ ವಿಡಿಯೋವಾಗಿದ್ದು, ಗಬ್ಬರ್‌ ಸಿಂಗ್ ಖ್ಯಾತಿಯ ಶಿಖರ್ ಧವನ್‌, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ (Instagram) ಪೋಸ್ಟ್‌ ಮಾಡಿದ್ದು, ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಡೆಲ್ಲಿ ಮೂಲದ ಎಡಗೈ ಬ್ಯಾಟರ್ ಶಿಖರ್ ಧವನ್‌, ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಇದರ ಹೊರತಾಗಿಯೂ ಪಂಜಾಬ್ ಕಿಂಗ್ಸ್‌ ತಂಡವು ನಾಕೌಟ್ ಹಂತಕ್ಕೇರಲು ವಿಫಲವಾಯಿತು. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಪಂಜಾಬ್ ಕಿಂಗ್ಸ್ ತಂಡವು ಗೆಲುವು ಸಾಧಿಸುವ ಮೂಲಕ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಶಿಖರ್ ಧವನ್ ಕೇವಲ ಮನರಂಜನೆಯ ಉದ್ದೇಶದಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಅಭಿಮಾನಿಗಳು ಎಂಜಾಯ್ ಮಾಡಲಿ ಎನ್ನುವ ಉದ್ದೇಶದಿಂದ ಶಿಖರ್ ಧವನ್‌ ಆಗಾಗ ಇಂತಹ ಫನ್ನಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಗಬ್ಬರ್‌ ಸಿಂಗ್ ಖ್ಯಾತಿಯ ಧವನ್ ರೀಲ್ಸ್ ವಿಡಿಯೋ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಕೆಲವೊಮ್ಮೆ ಧವನ್ ಮಾಡುವ ವಿಡಿಯೋದಲ್ಲಿ ಅವರ ಕುಟುಂಬಸ್ಥರೂ ಕಾಣಿಸಿಕೊಂಡಿದ್ದೂ ಇದೆ.

IPL 2022 ಗೆಲುವಿನೊಂದಿಗೆ ಪಂಜಾಬ್ ವಿದಾಯ, 8ನೇ ಸ್ಥಾನಕ್ಕೆ ತೃಪ್ತಿಪಟ್ಟ ಹೈದರಾಬಾದ್!

ಈ ವಿಡಿಯೋ ಜತೆಗೆ ಶಿಖರ್ ಧವನ್ ಅದ್ಭುತ ಕ್ಯಾಪ್ಷನ್ ನೀಡಿದ್ದು, ನಾಕೌಟ್‌ಗೆ ಕ್ವಾಲಿಫೈ ಆಗದೇ ಹೋಗಿದ್ದರಿಂದ ನನ್ನ ತಂದೆ ನನ್ನನ್ನು ಮನೆಯಿಂದ ನಾಕೌಟ್ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. 

ಇನ್ನು ಐಪಿಎಲ್ ವಿಚಾರಕ್ಕೆ ಬರುವುದಾದರೇ, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಯಾಂಕ್ ಅಗರ್‌ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ತಲಾ 7 ಗೆಲುವು ಹಾಗೂ 7 ಸೋಲುಗಳೊಂದಿಗೆ 14 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿತ್ತು. ಶಿಖರ್ ಧವನ್ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ 453 ರನ್ ಸಿಡಿಸುವ ಮೂಲಕ ಪಂಜಾಬ್ ಪರ ಗರಿಷ್ಟ ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದರು.
 

Latest Videos
Follow Us:
Download App:
  • android
  • ios