* ಬಾನದಾರಿಯಲ್ಲಿ ಜಾರಿ ಹೋದ ಪುನೀತ್‌ ರಾಜ್‌ಕುಮಾರ್* ಕ್ರೀಡಾ ಕ್ಷೇತದಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಪವರ್‌ಸ್ಟಾರ್* ಆರ್‌ಸಿಬಿ, ಬೆಂಗಳೂರು ಬುಲ್ಸ್ ತಂಡಕ್ಕೆ ರಾಯಬಾರಿಯಾಗಿದ್ದ ಅಪ್ಪು 

ಬೆಂಗಳೂರು(ಅ.30): ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) (46) ಹೃದಯಾಘಾತದಿಂದ (Heart Attack) ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಕನ್ನಡಿಗರ ಪಾಲಿನ ನೆಚ್ಚಿನ ಅಪ್ಪು, ದೈಹಿಕ ಕಸರತ್ತು ನಡೆಸುವ ವೇಳೆ ಸಂಭವಿಸಿದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಕ್ರೀಡಾಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದ ತಾರೆಯರು ಕಂಬನಿ ಮಿಡಿದಿದ್ದಾರೆ

ಪುನೀತ್‌ ರಾಜ್‌ಕುಮಾರ್‌ ಕ್ರೀಡೆಯೊಂದಿಗೆ ಅಪಾರ ನಂಟು ಹೊಂದಿದ್ದರು. ಕ್ರೀಡೆಯಲ್ಲಿ ಬಹಳ ಆಸಕ್ತಿ ಹೊಂದಿದ್ದ ಅಪ್ಪು, ಬೆಂಗಳೂರಿನ ಐಪಿಎಲ್‌ ತಂಡವಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore), ಪ್ರೊ ಕಬಡ್ಡಿಯ ಲೀಗ್‌ನಲ್ಲಿ (Pro Kabaddi League) ಬೆಂಗಳೂರು ಬುಲ್ಸ್‌ (Bengaluru Bulls) ತಂಡದ ರಾಯಭಾರಿಯಾಗಿದ್ದರು (brand ambassador). ಪುನೀತ್‌ ಐಪಿಎಲ್‌ ಪಂದ್ಯಗಳನ್ನು ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿ, ಅಭಿಮಾನಿಗಳೊಂದಿಗೆ ಬೆರೆಯುತ್ತಿದ್ದರು. 

Scroll to load tweet…
Scroll to load tweet…

ಅಪ್ಪನ ರೀತಿ ಯೋಗ ಮಾಡಬೇಕು ಅಂತಿದ್ದರು;ದೇಹವನ್ನು ಫ್ಲೆಕ್ಸಿಬಲ್‌ ಆಗಿಸಲು ಶ್ರಮಿಸುತ್ತಿದ್ದರು Puneeth Rajkumar!

ಕಂಠೀರವ ಕ್ರೀಡಾಂಗಣದಲ್ಲಿ ಹಲವು ಪ್ರೊ ಕಬಡ್ಡಿ ಪಂದ್ಯಗಳು, ಬೆಂಗಳೂರು ಎಫ್‌ಸಿ (Bengaluru Bulls) ತಂಡ ಫುಟ್ಬಾಲ್‌ ಪಂದ್ಯಗಳನ್ನೂ ವೀಕ್ಷಿಸಿದ್ದರು. ಪ್ರೀಮಿಯರ್‌ ಫುಟ್ಬಾಲ್‌ ಲೀಗ್‌ ಆರಂಭಗೊಂಡಾಗ ಪುನೀತ್‌ ರಾಜ್‌ಕುಮಾರ್ ಬೆಂಗಳೂರು ತಂಡವನ್ನು ಖರೀದಿಸಿದ್ದರು.

Scroll to load tweet…

ಪರ್‌ಫೆಕ್ಟ್ ಜಂಟಲ್‌ಮೆನ್‌ ಪುನೀತ್‌: ಬಾಲನಟನಾಗಿ, ಹೀರೋ ಆಗಿ ಚಿತ್ರರಂಗ ಆಳಿದ ಅಪ್ಪು

ನನ್ನ ಹೃದಯದಲ್ಲಿ ಪುನೀತ್‌ಗೆ ಶಾಶ್ವತ ಸ್ಥಾನ: ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಸುಹಾಸ್

ಪ್ರೀತಿಯ ಗೆಳೆಯ ಪುನೀತ್ ರಾಜ್‌ಕುಮಾರ್ ಅವರಿಗೆ ಇಷ್ಟು ಬೇಗ ವಿದಾಯ ಹೇಳುತ್ತೇನೆ ಎಂದು ಕನಸಿನ್ನಲ್ಲೂ ಅಂದುಕೊಂಡಿರಲಿಲ್ಲ. ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಅವರಿಗೆ ನನ್ನ ಹೃದಯದಲ್ಲಿ ಶಾಶ್ವತವಾದ ಸ್ಥಾನ ನೀಡಿದ್ದೇನೆ ಎಂದು ಪ್ಯಾರಾಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಹಾಗೂ ಉತ್ತರ ಪ್ರದೇಶದ ಐಎಎಸ್ ಅಧಿಕಾರಿ (IAS Officer) ಸುಹಾಸ್ ಯತಿರಾಜ್ (Suhas Yathiraj) ಕಂಬನಿ ಮಿಡಿದಿದ್ದಾರೆ.

ಅಕ್ಟೋಬರ್ 02ರಂದು ಅವರ ಜತೆ ಮೂರು ಗಂಟೆಗೂ ಅಧಿಕ ಕಾಲ ಇರುವ ಸೌಭಾಗ್ಯ ನನ್ನದಾಗಿತ್ತು. ಸನ್ಮಾನ ಮಾಡಿ ಪ್ರೀತಿ ತೋರಿಸಿದ್ದರು. ಪ್ಯಾರಾಲಿಂಪಿಕ್ಸ್‌ (Paralympics) ಸಾಧನೆ ಬಗ್ಗೆ ವಿಚಾರಿಸಿದ್ದರು. ದೆಹಲಿಗೆ ಬಂದಾಗ ಭೇಟಿ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಅವರು ಕಾಲನ ಕರೆಗೆ ಓಗೊಟ್ಟಿದ್ದಾರೆ ಎಂದು ಸುಹಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

Puneeth Rajkumar Death ಕಂಬನಿ ಮಿಡಿದ ಕ್ರಿಕೆಟಿಗ ಅನಿಲ್ ಕುಂಬ್ಳೆ

ಸ್ಯಾಂಡಲ್‌ವುಡ್‌ನ (Sandalwood) ಮೇರು ಪ್ರತಿಭೆ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಕ್ರೀಡಾ ಕ್ಷೇತ್ರ ಕೂಡಾ ಕಂಬನಿ ಮಿಡಿದಿದೆ. ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (Virener Sehwag), ಅನಿಲ್‌ ಕುಂಬ್ಳೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ, ಬೆಂಗಳೂರು ಎಫ್‌ಸಿ, ಬೆಂಗಳೂರು ಬುಲ್ಸ್ ಫ್ರಾಂಚೈಸಿ ಕೂಡಾ ಟ್ವೀಟ್ ಮೂಲಕ ಅಗಲಿದ ಚೇತನಕ್ಕೆ ಕಂಬನಿ ಮಿಡಿದಿವೆ. 

Scroll to load tweet…

Puneeth Rajkumar Death: ಮನೆಯಲ್ಲಿ ಬೆಳಕಿದ್ರೂ ಕರ್ನಾಟಕದಲ್ಲಿಂದು 'ಪವರ್' ಇಲ್ಲ: ಮನಮುಟ್ಟೋ ವೈರಲ್ ಪೋಸ್ಟ್‌ಗಳು

ಇದಷ್ಟೇ ಅಲ್ಲದೇ ಸುನೀಲ್ ಜೋಶಿ, ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ, ಟೀಂ ಇಂಡಿಯಾ ಕ್ರಿಕೆಟಿಗ ಮಯಾಂಕ್‌ ಅಗರ್‌ವಾಲ್, ರಾಬಿನ್‌ ಉತ್ತಪ್ಪ, ಯುವ ಕ್ರಿಕೆಟಿಗ ಪವನ್‌ ದೇಶಪಾಂಡೆ ಸೇರಿದಂತೆ ಹಲವು ಕ್ರೀಡಾತಾರೆಯರು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ಹಾಗೂ ಅಭಿಮಾನಿ ವರ್ಗಕ್ಕೆ ಪುನೀತ್ ರಾಜ್‌ಕುಮಾರ್ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ