ಬೆಂಗಳೂರು[ಅ.10]: ಕನ್ನಡಿಗ ಮಯಾಂಕ್ ಅಗರ್‌ವಾಲ್ ಮತ್ತೊಂದು ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈಗಾಗಲೇ ವೈಜಾಗ್ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಮಯಾಂಕ್, ಇದೀಗ ಪುಣೆ ಟೆಸ್ಟ್ ಪಂದ್ಯದಲ್ಲೂ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್’ಮನ್ ವಿರೇಂದ್ರ ಸೆಹ್ವಾಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. 

INDvSA:ಸತತ 2ನೇ ಶತಕ; ಸೆಹ್ವಾಗ್ ದಾಖಲೆ ಸರಿಗಟ್ಟಿದ ಮಯಾಂಕ್!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಾಯಕ ವಿರಾಟ್ ಕೊಹ್ಲಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟ್ ಬೀಸಿದ ಮಯಾಂಕ್ ಅಗರ್ ವಾಲ್, ಹರಿಣಗಳ ಪಡೆಯನ್ನು ದಿಟ್ಟವಾಗಿ ಎದುರಿಸಿದರು. ಆರಂಭದಲ್ಲೇ ಟೀಂ ಇಂಡಿಯಾ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ಚೇತೇಶ್ವರ್ ಪೂಜಾರ ಜತೆ ಮಯಾಂಕ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 183ನೇ ಎಸೆತದಲ್ಲಿ ಮಯಾಂಕ್ ಶತಕ ಪೂರೈಸಿದರು. ಮಯಾಂಕ್ ಅವರ ಈ ಅದ್ಭುತ ಇನಿಂಗ್ಸ್’ನಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್ ಗಳೂ ಸೇರಿದ್ದವು. ಈ ಶತಕದೊಂದಿಗೆ ಆರಂಭಿಕನಾಗಿ ದಕ್ಷಿಣ ಆಫ್ರಿಕಾ ವಿರುದ್ದ ಸತತ ಎರಡು ಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್’ಮನ್ ಎನ್ನುವ ಗೌರವಕ್ಕೆ ಮಯಾಂಕ್ ಭಾಜನರಾಗಿದ್ದಾರೆ. ಈ ಮೊದಲು 2009-10ರಲ್ಲಿ ವಿರೇಂದ್ರ ಸೆಹ್ವಾಗ್ ಸಹಾ ದಕ್ಷಿಣ ಆಫ್ರಿಕಾ ವಿರುದ್ಧ ಸತತ 2 ಶತಕ ಬಾರಿಸಿದ್ದರು. 

ಕೊಹ್ಲಿಗೆ ಪಾಕ್ ಅಭಿಮಾನಿಯ ವಿಶೇಷ ಮನವಿ; ಭಾರತೀಯರಿಂದ ಸಕಾರಾತ್ಮಕ ಸ್ಪಂದನೆ!

ಪುಣೆ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಒಟ್ಟು 195 ಎಸೆತಗಳನ್ನು ಎದುರಿಸಿ 16 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 108 ರನ್ ಬಾರಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು.  ಮಯಾಂಕ್ ಶತಕದಾಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಇರ್ಫಾನ್ ಪಠಾಣ್, ಅವಕಾಶ ಸಿಕ್ಕಾಗಲೆಲ್ಲಾ ಮಿಂಚುವವನನ್ನು ಮಯಾಂಕ್ ಅಗರ್‌ವಾಲ್ ಎನ್ನಬಹುದು ಎಂದಿದ್ದರೆ, ಹಿರಿಯ ಪತ್ರಕರ್ತ ರಾಜ್’ದೀಪ್ ಸರ್ದೇಸಾಯಿ ಅವಕಾಶಕ್ಕಾಗಿ ಸಾಕಷ್ಟು ವರ್ಷ ಕಾಯ್ದು, ಸಿಕ್ಕ ಅವಕಾಶದಲ್ಲಿ ಅದ್ಭುತ ಶತಕ ಸಿಡಿಸಿದ. ಇದೊಂದು ಮಯಾಂಕ್ ಬಾರಿಸಿದ ಅದ್ಭುತ ಇನಿಂಗ್ಸ್ ಎಂದು ಕೊಂಡಾಡಿದ್ದಾರೆ. ಮತ್ತೆ ಯಾರೆಲ್ಲಾ ಮಯಾಂಕ್ ಬಗ್ಗೆ ಏನಂದ್ರು...? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್....