ಪುಣೆ ಟೆಸ್ಟ್: ಸೌತ್ ಆಫ್ರಿಕಾ 275 ರನ್‌ಗೆ ಆಲೌಟ್; ಭಾರತಕ್ಕೆ ಭರ್ಜರಿ ಮೇಲುಗೈ

ವಿಶಾಖಪಟ್ಟಣಂ ಟೆಸ್ಟ್ ಪಂದ್ಯ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಇದೀಗ ಪುಣೆ ಪಂದ್ಯವನ್ನು ಬಹುಬೇಗ ಕೈವಶ ಮಾಡೋ ತವಕದಲ್ಲಿದೆ. ಮೊದಲ ಇನಿಂಗ್ಸ್‌ನಲ್ಲಿ ಸೌತ್ ಆಫ್ರಿಕಾ ತಂಡವನ್ನು 275ರನ್‌ಗೆ ಕಟ್ಟಿಹಾಕಿದ ಭಾರತ, ಫಾಲೋ ಆನ್ ಹೇರುವ ಸಾಧ್ಯತೆ ಇದೆ. 

Pune test Team India restrict south Africa by 275 runs

ಪುಣೆ(ಅ.12):  ಸೌತ್ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದ 3ನೇ ದಿನ ಭಾರತ ಮೇಲುಗೈ ಸಾಧಿಸಿದೆ. ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಕೇಶವ್ ಮಹರಾಜ್ ಹೋರಾಟ ನೀಡಿದರೂ ಪ್ರಯೋಜನವಾಗಲಿಲ್ಲ. ಸೌತ್ ಆಫ್ರಿಕಾ ತಂಡವನ್ನು 275 ರನ್‌ಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಫಾಲೋ ಆನ್ ಹೇರುವ ಸಾಧ್ಯತೆ ಇದೆ. 

ಇದನ್ನೂ ಓದಿ: ಭದ್ರತಾ ಸಿಬ್ಬಂದಿಕಣ್ತಪ್ಪಿಸಿ ರೋಹಿತ್ ಪಾದಕ್ಕೆರಗಿದ ಅಭಿಮಾನಿ!

3 ವಿಕೆಟ್ ನಷ್ಟಕ್ಕೆ 36 ರನ್‌ಗಳೊಂದಿಗೆ 3ನೇ ದಿನದಾಟ ಆರಂಭಿಸಿದ ಸೌತ್ ಆಫ್ರಿಕಾ ಮತ್ತೆ ಟೀಂ ಇಂಡಿಯಾ ದಾಳಿಗೆ ಕುಸಿಯಿತು. ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಕೇಶವ್ ಮಹರಾಜ್ ಹೊರತು ಪಡಿಸಿದರೆ ಇನ್ಯಾರು ಕೂಡ ನೆರವಾಗಲಿಲ್ಲ. ತೆಂಬಾ ಬುವುಮಾ 3, ಅನಿರಿಚ್ ನೋರ್ಜೆ 8, ಕ್ವಿಂಟನ್ ಡಿಕಾಕ್ 31, ಸೆನುರನ್ ಮುತ್ತುಸ್ವಾಮಿ 7 ರನ್ ಸಿಡಿಸಿ ಔಟಾದರು.

ಇದನ್ನೂ ಓದಿ: ಅಶ್ವಿನ್ ಬೌಲಿಂಗ್‌ಗೆ ತಬ್ಬಿಬ್ಬಾದ ಡಿಕಾಕ್: ವಿಡಿಯೋ ವೈರಲ್

ಡುಪ್ಲೆಸಿಸ್ 64 ರನ್ ಕಾಣಿಕೆ ನೀಡಿದರೆ, ಕೇಶವ್ 72 ರನ್ ಸಿಡಿಸಿದರು. ವರ್ನಾನ್ ಫಿಲಾಂಡರ್ ಸಿಡಿಸಿದ ಅಜೇಯ 44 ರನ್ ನೆರವಿನಿಂದ ಸೌತ್ ಆಫ್ರಿಕಾ 275 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 326 ರನ್ ಹಿನ್ನಡೆ ಅನುಭವಿಸಿತು. ಸೌತ್ ಆಫ್ರಿಕಾ ಆಲೌಟ್ ಬೆನ್ನಲ್ಲೇ ದಿನದಾಟ ಅಂತ್ಯಗೊಂಡಿತು. ಟೀಂ ಇಂಡಿಯಾ ಫಾಲೋ ಆನ್ ಹೇರುತ್ತಾ? ಅಥವಾ 2ನೇ ಇನಿಂಗ್ಸ್ ಆರಂಭಿಸುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.ಈ ಕುತೂಹಲ ನಾಲ್ಕನೇ ದಿನದಾಟದಲ್ಲಿ ಆರಂಭದಲ್ಲಿ ತಿಳಿಯಲಿದೆ.

Latest Videos
Follow Us:
Download App:
  • android
  • ios