Pro Kabaddi League: ಗೆಲುವಿನ ಖಾತೆ ತೆರೆದ ಪಾಟ್ನಾ, ಯೋಧಾಸ್..!
ಬುಧವಾರದ ಆರಂಭಿಕ ಪಂದ್ಯದಲ್ಲಿ ಪಾಟ್ನಾಗೆ ತೆಲುಗು ಟೈಟಾನ್ಸ್ ವಿರುದ್ಧ 50-28 ಅಂಕಗಳ ಗೆಲುವು ಲಭಿಸಿತು. ನಾಯಕ ಪವನ್ ಶೆರಾವತ್‌ರ ಆಕ್ರಮಣಕಾರಿ ರೈಡ್‌ಗಳ ನೆರವಿನಿಂದ ಟೈಟಾನ್ಸ್ ಆರಂಭಿಕ 10 ನಿಮಿಷಗಳಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಬಳಿಕ ಪಾಟ್ನಾ ಓಟವನ್ನು ತಡೆಯನ್ನು ಟೈಟಾನ್ಸ್‌ಗೆ ಸಾಧ್ಯವಾಗಲಿಲ್ಲ.

ಅಹಮದಾಬಾದ್(ಡಿ.07): 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ 3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಭರ್ಜರಿ ಶುಭಾರಂಭ ಮಾಡಿದೆ. ಯುಪಿ ಯೋಧಾಸ್ ಕೂಡಾ ಟೂರ್ನಿಯ ಮೊದಲ ಗೆಲುವು ದಾಖಲಿಸಿದೆ.
ಬುಧವಾರದ ಆರಂಭಿಕ ಪಂದ್ಯದಲ್ಲಿ ಪಾಟ್ನಾಗೆ ತೆಲುಗು ಟೈಟಾನ್ಸ್ ವಿರುದ್ಧ 50-28 ಅಂಕಗಳ ಗೆಲುವು ಲಭಿಸಿತು. ನಾಯಕ ಪವನ್ ಶೆರಾವತ್‌ರ ಆಕ್ರಮಣಕಾರಿ ರೈಡ್‌ಗಳ ನೆರವಿನಿಂದ ಟೈಟಾನ್ಸ್ ಆರಂಭಿಕ 10 ನಿಮಿಷಗಳಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಬಳಿಕ ಪಾಟ್ನಾ ಓಟವನ್ನು ತಡೆಯನ್ನು ಟೈಟಾನ್ಸ್‌ಗೆ ಸಾಧ್ಯವಾಗಲಿಲ್ಲ.
ಮೊದಲಾರ್ಧಕ್ಕೆ 28-16ರ ಮುನ್ನಡೆ ಗಳಿಸಿದ ನೀರಜ್ ನಾಯಕತ್ವದ ಪಾಟ್ನಾ, ಯಾವ ಕ್ಷಣದಲ್ಲೂ ಟೈಟಾನ್ಸ್‌ಗೆ ಮೇಲೇರಲು ಅವಕಾಶ ನೀಡಲಿಲ್ಲ. ಸಚಿನ್ 14, ಮಂಜೀತ್ 7 ರೈಡ್ ಅಂಕಗಳ ಮೂಲಕ ಪೈರೇಟ್ಸ್‌ಗೆ ಗೆಲುವು ತಂದುಕೊಟ್ಟರೆ, ಪವನ್ 11 ರೈಡ್ ಅಂಕಗಳ ಆಟ ಟೈಟಾನ್ಸನ್ನು ಸತತ 2ನೇ ಸೋಲಿನಿಂದ ತಪ್ಪಿಸಲು ಸಾಕಾಗಲಿಲ್ಲ.
ರಾಮ ಮಂದಿರ ಪ್ರಾಣಪ್ರತಿಷ್ಠೆ ಆಮಂತ್ರಣ ಸ್ವೀಕರಿಸಿದ ಕೊಹ್ಲಿ-ಸಚಿನ್; ಆಯೋಧ್ಯೆಗೆ ಕ್ರಿಕೆಟ್ ದಿಗ್ಗಜರು!
ಹರ್ಯಾಣ ಸೋಲಿನ ಆರಂಭ
ಹರ್ಯಾಣ ಸ್ಟೀಲರ್ಸ್ ತಂಡ ಯು.ಪಿ. ಯೋಧಾಸ್ ವಿರುದ್ಧ 27-57 ಅಂಕಗಳಿಂದ ಹೀನಾಯವಾಗಿ ಸೋಲುವ ಮೂಲಕ 10ನೇ ಆವೃತ್ತಿಯನ್ನು ಆರಂಭಿಸಿದೆ. ಸುರೇಂದರ್ ಗಿಲ್ 13 ಅಂಕ ಪಡೆದು ಯೋಧಾಸ್ ಗೆಲುವಿಗೆ ಸಹಕರಿಸಿದರೆ, ನಾಯಕ ಪ್ರದೀಪ್ ನರ್ವಾಲ್ (12 ಅಂಕ) ನಿರೀಕ್ಷೆ ಉಳಿಸಿಕೊಂಡರು. ಹರ್ಯಾಣದ ತಾರಾ ರೈಡರ್ ಸಿದ್ಧಾರ್ಥ್ (04 ಅಂಕ) ಮಿಂಚಿನ ಆಟವಾಡಲು ವಿಫಲರಾದರು.
ಇಂದಿನ ಪಂದ್ಯಗಳು
ಬೆಂಗಾಲ್-ಜೈಪುರ, ರಾತ್ರಿ 8ಕ್ಕೆ
ಗುಜರಾತ್-ಪಾಟ್ನಾ, ರಾತ್ರಿ 9ಕ್ಕೆ
ವಾಲಿಬಾಲ್: ವೀರೋಚಿತ ಸೋಲುಂಡ ಅಹ್ಮದಾಬಾದ್
ಬೆಂಗಳೂರು: ವಿಶ್ವ ಶ್ರೇಷ್ಠ ಆಟಗಾರರ ವಿರುದ್ಧ ಪ್ರಬಲ ಪೈಪೋಟಿ ನೀಡಿದ ಹೊರತಾಗಿಯೂ 2023ರ ಕ್ಲಬ್ ವಿಶ್ವ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಅಹಮದಾಬಾದ್ ಡಿಫೆಂಡರ್ಸ್ ಸೋಲಿನ ಆರಂಭ ಪಡೆದಿದೆ. ನಗರದ ಕೋರಮಂಗಲದಲ್ಲಿ ನಡೆದ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಜ್ರೆಜಿಲ್‌ನ ಇಟಂಬೆ ಮಿನಾಸ್ ವಿರುದ್ಧ 0-3(22-25, 23-25, 19-25) ಅಂತರದಲ್ಲಿ ಸೋಲು ಎದುರಾಯಿತು.
ಎಲ್ಲಿಯವರೆಗೂ ನಡಿಯೋಕೆ ಆಗುತ್ತೋ ಅಲ್ಲಿಯವರೆಗೂ ಐಪಿಎಲ್ ಆಡ್ತೇನೆ: RCB ಫ್ಯಾನ್ಸ್‌ಗೆ ಜೋಶ್ ತುಂಬಿದ ಮ್ಯಾಕ್ಸ್‌ವೆಲ್
ಆರಂಭಿಕ ಸೆಟ್‌ನಿಂದಲೂ ಅತ್ಯುತ್ತಮ ಪ್ರದರ್ಶನ ತೋರಿದ ಅಹ್ಮದಾಬಾದ್ ಆಟಗಾರರು, ಎದುರಾಳಿ ತಂಡಕ್ಕೆ ಅಂಕ ಗಳಿಕೆಯಲ್ಲಿ ದೊಡ್ಡ ಮುನ್ನಡೆ ಸಾಧಿಸಲು ಅವಕಾಶ ನೀಡಲಿಲ್ಲ. 2ನೇ ಸೆಟ್‌ನಲ್ಲಿ 23-25ರಿಂದ ಸೋತ ತಂಡ, ಕೊನೆ ಸೆಟ್‌ನಲ್ಲಿ ಒಂದು ಹಂತದಲ್ಲಿ 7-14ರಿಂದ ಹಿಂದಿತ್ತು. ಆದರೂ ಹೋರಾಟ ಬಿಡದ ಅಹ್ಮದಾಬಾದ್ ಪಂದ್ಯವನ್ನು ರೋಚಕವಾಗಿ ಅಂತ್ಯಗೊಳಿಸಿತು.
ಇದಕ್ಕೂ ಮೊದಲು ಆರಂಭಿಕ ಪಂದ್ಯದಲ್ಲಿ ಟರ್ಕಿಯ ಹಾಲ್ಕ್‌ಬ್ಯಾಂಕ್ ಸ್ಪೋರ್ ಕುಲುಬೆ ವಿರುದ್ಧ ಜಪಾನ್‌ನ ಸುಂಟೋರಿ ಸನ್‌ಬರ್ಡ್ಸ್ 3-0 ಅಂತರದಲ್ಲಿ ಗೆಲುವು ಸಾಧಿಸಿತು.
ಕಿರಿಯರ ಹಾಕಿ ವಿಶ್ವಕಪ್: ಇಂದು ಭಾರತ vs ಸ್ಪೇನ್
ಕೌಲಾ ಲಂಪುರ: ಎಫ್‌ಐಎಚ್ ಕಿರಿಯ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿರುವ ಭಾರತ ತಂಡ, ಗುರುವಾರ ತನ್ನ 2ನೇ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಆಡಲಿದೆ. ‘ಸಿ’ ಗುಂಪಿನಲ್ಲಿ ಅಗ್ರ-2ರಲ್ಲಿ ಸ್ಥಾನ ಕಾಯ್ದುಕೊಂಡು ಕ್ವಾರ್ಟರ್ ಫೈನಲ್ ಪ್ರವೇಶಿಸುವ ಗುರಿ ಹೊಂದಿರುವ ಭಾರತ, ಈ ಪಂದ್ಯ ಗೆದ್ದರೆ ನಾಕೌಟ್ ಹಂತಕ್ಕೇರುವುದು ಬಹುತೇಕ ಖಚಿತವಾಗಲಿದೆ. ಸ್ಪೇನ್ ತನ್ನ ಮೊದಲ ಪಂದ್ಯದಲ್ಲಿ ಕೆನಡಾವನ್ನು 7-0 ಗೋಲುಗಳಲ್ಲಿ ಸೋಲಿಸಿತ್ತು.