ಆಸ್ಟ್ರೇಲಿಯಾ vs ಶ್ರೀಲಂಕಾ ಟಿ20 ; ವಾಟರ್ ಬಾಯ್ ಆಗಿ ಬದಲಾದ ಪ್ರಧಾನಿ!
ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಟಿ20 ಅಭ್ಯಾಸ ಪಂದ್ಯದಲ್ಲಿ ದೇಶದ ಪ್ರಧಾನಿ 12ನೇ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ವಾಟರ್ ಬಾಯ್ ಆಗಿ ಮೈದಾನಕ್ಕಿಳಿದ ಪ್ರಧಾನಿ ಕ್ರಿಕೆಟ್ ಲೋಕಕ್ಕೆ ಅಚ್ಚರಿ ನೀಡಿದ್ದಾರೆ.
ಕ್ಯಾನ್‌ಬೆರಾ (ಅ.24): ಇದು ಕ್ರಿಕೆಟ್ ಇತಿಹಾಸದಲ್ಲೇ ಮೊದಲು. ದೇಶದ ಪ್ರಧಾನಿ ಆಟಗಾರರಿಗೆ ಡ್ರಿಂಕ್ಸ್ ಸರಬರಾಜು ಮಾಡೋ ಮೂಲಕ ಅಚ್ಚರಿ ನೀಡಿದ್ದಾರೆ. ಈ ಘಟನೆ ನಡೆದಿರೋದು ಆಸ್ಟ್ರೇಲಿಯಾ ಪ್ರಿಸಿಡೆಂಟ್ ಇಲೆವೆನ್ ಹಾಗೂ ಶ್ರೀಲಂಕಾ ನಡುವಿನ ಪಂದ್ಯದಲ್ಲಿ. ಈ ಪಂದ್ಯದ ಬ್ರೇಕ್ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ವಾಟರ್ ಬಾಯ್ ಆಗಿ ಮಿಂಚಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಸ್ಥಾನ
ಆಸ್ಟ್ರೇಲಿಯಾ ಪ್ರಸಿಡೆಂಟ್ ಇಲೆವೆನ್ ಹಾಗೂ ಶ್ರೀಲಂಕಾ ನಡುವಿನ ಅಭ್ಯಾಸ ಪಂದ್ಯ ಎಲ್ಲರಿಗೂ ಅಚ್ಚರಿ ನೀಡಿತ್ತು. ಕ್ಯಾನ್‌ಬೆರಾದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, 12ನೇ ಆಟಗಾರನಾಗಿ ಬದಲಾಗಿದ್ದಾರೆ. ತಂಡದ ಕ್ಯಾಪ್ ಧರಿಸಿ, ಡ್ರಿಂಕ್ಸ್ ಹಿಡಿದು ಮೈದಾನಕ್ಕಿಳಿದಿದ್ದಾರೆ. ಬಳಿಕ ಆಸ್ಟ್ರೇಲಿಯಾ ಆಟಗಾರರಿಗೆ ನೀರು ನೀಡಿದ್ದಾರೆ.
ಇದನ್ನೂ ಓದಿ: ಅಭ್ಯಾಸ ಆರಂಭಿಸಿದ ಶ್ರೀಶಾಂತ್, IPL ಟೂರ್ನಿಗೆ ವಾಪಾಸ್ಸಾಗಲು ಪ್ಲಾನ್!
ಬ್ರೇಕ್ ವೇಳೆ ಮಿಂಚಿನಂತೆ ಮೈದಾನದಲ್ಲಿ ಓಡಿದ ಸ್ಕಾಟ್ ಮಾರಿಸನ್, ಆಸೀಸ್ ಆಟಗಾರರ ಹಡಲ್ ತಲುಪಿದರು. ಬಳಿಕ ನೀರು ನೀಡಿದರು. ಈ ವೇಳೆ ಆಸೀಸ್ ಪ್ರಧಾನಿ ನೋಡಿದ ಆಟಗಾರರಿಗೆ ಮಾತ್ರವಲ್ಲ, ಅಭಿಮಾನಿಗಳು ಅಚ್ಚರಿಯಾಗಿತ್ತು. ಕೆಲ ಆಟಗಾರರಿಗೆ ಹೈಫೈ ಮಾಡೋ ಮೂಲಕವೂ ಪ್ರಧಾನಿ ಗಮನಸೆಳೆದರು.
ಈ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ರಸಿಡೆಂಟ್ ಇಲೆವೆನ್ , ಶ್ರೀಲಂಕಾ ತಂಡವನ್ನು ಮಣಿಸಿತು. ಪಂದ್ಯದ ಬಳಿಕ ಆಸ್ಟ್ರೇಲಿಯಾ ತಂಡದ ಜೊತೆ ಸ್ಕಾಟ್ ಮಾರಿಸನ್ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಕ್ರಿಕೆಟ್ ಪಂದ್ಯದ ನಡುವೆ ದೇಶದ ಪ್ರಧಾನಿ ನೀರು ಸರಬರಾಜು ಮಾಡಿದ್ದು ಇದೇ ಮೊದಲು. ಆಸ್ಟ್ರೇಲಿಯಾ ಪ್ರಧಾನಿ ಉತ್ಸಾಹ, ಸರಳತೆಗೆ ಮೆಚ್ಚುಗೆ ವ್ಯಕ್ತವಾಗಿದೆ.