2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕರೆಸಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಹೊಸ ಆಫರ್ ನೀಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ತನ್ನ ನೆಲದಲ್ಲೇ ನಡೆಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ), ಬಿಸಿಸಿಐ ಮುಂದೆ ಹೊಸ ಪ್ರಸ್ತಾಪವೊಂದನ್ನು ಇರಿಸಿದೆ ಎಂದು ತಿಳಿದುಬಂದಿದೆ. 

ಚಾಂಪಿಯನ್ಸ್‌ ಟ್ರೋಫಿ ವೇಳೆ ಭಾರತ ತಂಡ ಪಾಕಿಸ್ತಾನದಲ್ಲಿ ಉಳಿಯಲು ಇಚ್ಛಿಸದಿದ್ದರೆ, ಪಂದ್ಯದ ದಿನ ನವದೆಹಲಿ ಅಥವಾ ಚಂಡೀಗಢದಿಂದ ಲಾಹೋರ್‌ಗೆ ಬಂದು, ಪಂದ್ಯ ಮುಗಿದ ಬಳಿಕ ತವರಿಗೆ ವಾಪಸಾಗಲಿ ಎನ್ನುವ ಪ್ರಸ್ತಾಪವನ್ನು ಪಿಸಿಬಿ, ಬಿಸಿಸಿಐ ಮುಂದಿಟ್ಟಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. 

ಇನ್ನು, ಇತ್ತೀಚೆಗೆ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ, ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುವಂತೆ ಅಲ್ಲಿನ ಸರ್ಕಾರ ಹಾಗೂ ಪಿಸಿಬಿ ಮನವಿ ಸಲ್ಲಿಸಿತು ಎನ್ನಲಾಗಿದೆ.

ಸದ್ಯ ಟೂರ್ನಿಯ ಆತಿಥ್ಯ ಪಾಕ್‌ ಬಳಿ ಇದ್ದು, 2025ರ ಫೆ.19ರಿಂದ ಮಾ.9ರ ವರೆಗೆ ಲಾಹೋರ್‌, ರಾವಲ್ಪಿಂಡಿ, ಕರಾಚಿಯಲ್ಲಿ ಪಂದ್ಯಗಳು ನಿಗದಿಯಾಗಿದೆ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆಯಿಲ್ಲ. ಹೀಗಾದರೆ ಭಾರತದ ಲೀಗ್‌ ಹಂತದ ಪಂದ್ಯಗಳು ಪಾಕ್‌ನ ಹೊರಗಡೆ ಅಂದರೆ ಬೇರೆ ಯಾವುದಾದರೂ ದೇಶದಲ್ಲಿ ನಡೆಯಬಹುದು. ಕಳೆದ ಬಾರಿಯ ಏಷ್ಯಾಕಪ್‌ನಂತೆ ಚಾಂಪಿಯನ್ಸ್‌ ಟ್ರೋಫಿ ಕೂಡಾ ಹೈಬ್ರಿಡ್‌ ಮಾದರಿಯಲ್ಲೇ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮಹಿಳಾ ಟಿ20 ವಿಶ್ವಕಪ್: ವೆಸ್ಟ್ ಇಂಡೀಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ನ್ಯೂಜಿಲೆಂಡ್‌

ಭಾರತ ತಂಡ 2008ರಲ್ಲಿ ಕೊನೆ ಬಾರಿ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಿತ್ತು. ಬಳಿಕ ಭಾರತ ತಂಡ ಪಾಕ್‌ಗೆ ಪ್ರಯಾಣಿಸಿಲ್ಲ. ಕಳೆದ ವರ್ಷ ಏಷ್ಯಾಕಪ್‌ ಆತಿಥ್ಯ ಪಾಕ್‌ ಬಳಿ ಇತ್ತಾದರೂ, ಭಾರತದ ಪಂದ್ಯಗಳನ್ನು ಹೈಬ್ರಿಡ್‌ ಮಾದರಿಯಲ್ಲಿ ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು. ಭಾರತ-ಶ್ರೀಲಂಕಾ ಫೈನಲ್‌ ಪಂದ್ಯ ಕೊಲಂಬೊದಲ್ಲಿ ನಡೆದಿತ್ತು.

ಸ್ಪಿನ್ ಖೆಡ್ಡಾಕ್ಕೆ ಬಿದ್ದ ಇಂಗ್ಲೆಂಡ್: ಪಾಕಿಸ್ತಾನಕ್ಕೆ 152 ರನ್ ಗೆಲುವು

ಮುಲ್ತಾನ್: ನೂಮನ್ ಅಲಿ, ಸಾಜಿದ್ ಖಾನ್ ಸೇರಿ 20 ವಿಕೆಟ್‌ಗಳನ್ನು ಕಬಳಿಸಿದ ಪರಿಣಾಮ, ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಪಾಕಿಸ್ತಾನ 152 ರನ್‌ಗಳ ಗೆಲುವು ದಾಖಲಿಸಿದೆ. 2021ರ ಫೆಬ್ರವರಿ ಬಳಿಕ ಪಾಕಿಸ್ತಾನಕ್ಕೆ ತವರಿನಲ್ಲಿ ಇದು ಮೊದಲ ಜಯ. 

ಬೆಂಗಳೂರು ಟೆಸ್ಟ್‌: ಕಿವೀಸ್‌ಗೆ ತಿರುಗೇಟು ನೀಡುವತ್ತ ಟೀಂ ಇಂಡಿಯಾ ದಿಟ್ಟ ಹೆಜ್ಜೆ, ಕೊಹ್ಲಿ-ಸರ್ಫರಾಜ್ ಸೂಪರ್ ಬ್ಯಾಟಿಂಗ್

ಮೊದಲ ಇನ್ನಿಂಗ್ಸ್ನಲ್ಲಿ 366 ರನ್ ಕಲೆಹಾಕಿದ್ದ ಪಾಕಿಸ್ತಾನ, ಇಂಗ್ಲೆಂಡನ್ನು 291 ರನ್‌ಗೆ ಕಟ್ಟಿಹಾಕಿತ್ತು. ಬಳಿಕ 2ನೇ ಇನ್ನಿಂಗ್ನಲ್ಲಿ 221 ರನ್ ಗಳಿಸಿದ ಪಾಕ್, ಇಂಗ್ಲೆಂಡ್‌ಗೆ ಗೆಲ್ಲಲು 297 ರನ್ ಗುರಿ ನಿಗದಿಪಡಿಸಿತ್ತು. ಇಂಗ್ಲೆಂಡ್ 2ನೇ ಇನ್ನಿಂಗ್ಸ್‌ನಲ್ಲಿ 144 ರನ್‌ಗೆ ಆಲೌಟ್ ಆಯಿತು. 2ನೇ ಇನ್ನಿಂಗ್ಸ್‌ನಲ್ಲಿ 8 ಸೇರಿ ಪಂದ್ಯದಲ್ಲಿ ಅಲಿ ಒಟ್ಟು 11 ವಿಕೆಟ್ ಕಿತ್ತರೆ, ಮೊದಲ ಇನ್ನಿಂಗ್ನಲ್ಲಿ 7 ಸೇರಿ ಸಾಜಿದ್ ಒಟ್ಟು 9 ವಿಕೆಟ್ ಕಬಳಿಸಿದರು. 3 ಪಂದ್ಯಗಳ ಸರಣಿ 1-1ರಲ್ಲಿ ಸಮಗೊಂಡಿದ್ದು, 3ನೇ ಹಾಗೂ ಅಂತಿಮ ಟೆಸ್ಟ್ ಅ.24ರಿಂದ ಆರಂಭಗೊಳ್ಳಲಿದೆ.