ಇನ್ನಿಂಗ್ಸ್ ಡಿಕ್ಲೇರ್‌ನಲ್ಲೂ ಟೀಂ ಇಂಡಿಯಾ ವಿಶ್ವದಾಖಲೆ!
ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರುವುದರ ಜತೆಗೆ ಮತ್ತೊಂದು ಇನಿಂಗ್ಸ್ ಗೆಲುವಿನ ಹೊಸ್ತಿಲಲ್ಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಕೋಲ್ಕತಾ[ನ.24]: ಸತತ 7 ಇನ್ನಿಂಗ್ಸ್‌ಗಳನ್ನು ಡಿಕ್ಲೇರ್ ಮಾಡಿಕೊಂಡ ಭಾರತ ಹೊಸ ವಿಶ್ವದಾಖಲೆ ಬರೆದಿದೆ. 2009ರಲ್ಲಿ ಸತತ 6 ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಇಂಗ್ಲೆಂಡ್ ತಂಡ ಬರೆದಿದ್ದ ದಾಖಲೆಯನ್ನು ಭಾರತ ಮುರಿಯಿತು.
ವಿಂಡೀಸ್ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದ ಭಾರತ, ವಿಶಾಖಪಟ್ಟಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳನ್ನು ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಸತತ 3 ಪಂದ್ಯಗಳಲ್ಲಿ ಇನ್ನಿಂಗ್ಸ್ ಗೆಲುವು ಸಾಧಿಸಿರುವ ಕೊಹ್ಲಿ ಪಡೆ, ಬಾಂಗ್ಲಾ ವಿರುದ್ಧ ಕೋಲ್ಕತಾ ಟೆಸ್ಟ್‌ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ದಾಖಲೆ ಬರೆಯಿತು.
ಇಶಾಂತ್ ದಾಳಿಗೆ ಬಾಂಗ್ಲಾ ತತ್ತರ, ಇತಿಹಾಸ ರಚಿಸಲು ಭಾರತ ಕಾತರ!
ಭಾರತೀಯ ವೇಗಿಗಳು ಬಲು ಅಪಾಯಕಾರಿ!
ಭಾರತ ಸ್ಪಿನ್ ಬೌಲಿಂಗ್‌ನಿಂದಲೇ ಹೆಚ್ಚು ಯಶಸ್ಸು ಕಂಡಿದ್ದ ತಂಡ. ಆದರೆ ಈಗ ಭಾರತೀಯ ವೇಗಿಗಳು ಹೆಚ್ಚು ಸದ್ದು ಮಾಡುತ್ತಿದ್ದಾರೆ. ಮೊಹಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಉಮೇಶ್ ಯಾದವ್ ಕೇವಲ ಪರಿಣಾಮಕಾರಿ ಮಾತ್ರವಲ್ಲ, ಅಪಾಯಕಾರಿ ಕೂಡ ಹೌದು. ಈ ವರೆಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 5 ಬಾರಿ ತಂಡವೊಂದು ಐಸಿಸಿಯ ನೂತನ ಸುಪ್ತಾವಸ್ಥೆ ಬದಲಿ ಆಟಗಾರನ ನಿಯಮದ ಸಹಾಯ ಪಡೆದಿದೆ.
ಗಮನಿಸಿದ್ರಾ..? ಟೆಸ್ಟ್‌ನಲ್ಲಿ ಮೊದಲ ಬಾರಿ 2 ಬದಲಿ ಆಟಗಾರರು..!
ಈ ನಿಯಮ ಇದೇ ವರ್ಷ ಆಗಸ್ಟ್‌ನಲ್ಲಿ ಜಾರಿಗೆ ಬಂತು. ಬೌನ್ಸರ್ ಎಸೆತ ಆಟಗಾರನ ತಲೆಗೆ ಬಡಿದು, ಆತ ಪಂದ್ಯದಲ್ಲಿ ಮುಂದುವರಿಯಲು ಸಾಧ್ಯವಾಗದಿದ್ದರೆ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದಾಗಿದೆ. ಭಾರತೀಯರೇ 4 ಬಾರಿ ಎದುರಾಳಿ ತಂಡ ಬದಲಿ ಆಟಗಾರನನ್ನು ಕರೆಸಿಕೊಳ್ಳಲು ಕಾರಣರಾಗಿದ್ದಾರೆ.
25 ಇನ್ನಿಂಗ್ಸ್
ಕಳೆದ 25 ಇನ್ನಿಂಗ್ಸ್‌ಗಳಲ್ಲಿ ಭಾರತ ವಿರುದ್ಧ ಯಾವ ಎದುರಾಳಿಯಿಂದಲೂ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ದಾಖಲಾಗಿಲ್ಲ. 32 ರನ್‌ಗಳೇ ಗರಿಷ್ಠ ಮೊದಲ ವಿಕೆಟ್ ಜತೆಯಾಟವಾಗಿದೆ.
2ನೇ ದಿನವೂ ಕ್ರೀಡಾಂಗಣ ಭರ್ತಿ
ಈಡನ್ ಗಾರ್ಡನ್ ಕ್ರೀಡಾಂಗಣ 2ನೇ ದಿನವೂ ಭರ್ತಿಯಾಗಿತ್ತು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿರುವ ಅಭಿಮಾನಿಗಳ ಫೋಟೋವನ್ನು ಟ್ವೀಟ್ ಮಾಡಿ ಸಂಭ್ರಮ ಹಂಚಿಕೊಂಡರು. ಮೊದಲ ದಿನ 60000 ಸಾವಿರ ಪ್ರೇಕ್ಷಕರು ಪಂದ್ಯ ವೀಕ್ಷಿಸಿದರು ಎಂದು ವರದಿಯಾಗಿತ್ತು. 3ನೇ ದಿನವಾದ ಭಾನುವಾದ ಟಿಕೆಟ್‌ಗಳು ಸಹ ಸಂಪೂರ್ಣವಾಗಿ ಮಾರಾಟವಾಗಿವೆ ಎನ್ನಲಾಗಿದೆ.