ಏಷ್ಯಾಕಪ್ ವಿಚಾರದಲ್ಲಿ ರಮೀಜ್ ರಾಜಾ ಹಾದಿಯನ್ನೇ ಹಿಂಬಾಲಿಸುತ್ತಿರುವ ನಜಂ ಸೇಠಿನಜಂ ಸೇಠಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷಏಷ್ಯಾಕಪ್ ಆಡಲು ಭಾರತ ಪಾಕ್‌ ಪ್ರವಾಸ ಮಾಡದಿದ್ದರೇ, ಪಾಕ್, ಏಕದಿನ ವಿಶ್ವಕಪ್ ಆಡಲು ಭಾರತಕ್ಕೆ ಬರಲ್ಲ

ಕರಾಚಿ(ಫೆ.06): ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಆತಿಥ್ಯ ಪಾಕಿಸ್ತಾನಕ್ಕೇ ಸಿಗಬೇಕು. ಇಲ್ಲದಿದ್ದರೆ ಪಾಕ್‌ ತಂಡ ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬರುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಯ ಹಾಲಿ ಅಧ್ಯಕ್ಷ ನಜಂ ಸೇಠಿ ಎಚ್ಚರಿಕೆ ನೀಡಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಮೊದಲು ಪಿಸಿಬಿ ಅಧ್ಯಕ್ಷರಾಗಿದ್ದ ರಮೀಜ್‌ ರಾಜಾ ಕೂಡಾ ಏಕದಿನ ವಿಶ್ವಕಪ್‌ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದರು. ಅದನ್ನು ಈಗ ಸೇಠಿ ಕೂಡಾ ಪುನರುಚ್ಚರಿಸಿದ್ದಾರೆ.

ಶನಿವಾರ ಬಹರೇನ್‌ನಲ್ಲಿ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌(ಎಸಿಸಿ) ಸಭೆಯಲ್ಲಿ ಈ ಬಗ್ಗೆ ಸೇಠಿ ಎಸಿಸಿ ಮುಖ್ಯಸ್ಥರೂ ಆಗಿರುವ ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾಗೆ ಸ್ಪಷ್ಟ ನಿರ್ಧಾರ ತಿಳಿಸಿದ್ದಾಗಿ ಹೇಳಲಾಗುತ್ತಿದೆ. ಏಷ್ಯಾಕಪ್‌ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಬರಬೇಕು. ಇಲ್ಲದಿದ್ದರೆ ನಮ್ಮ ತಂಡವನ್ನೂ ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಸೇಠಿ ಹೇಳಿದ್ದಾರೆ ಎಂದು ಗೊತ್ತಾಗಿದೆ.

ಏಷ್ಯಾಕಪ್‌ ಟೂರ್ನಿ ಈ ಬಾರಿ 50 ಓವರ್‌ ಮಾದರಿಯಲ್ಲಿ ನಡೆಯಲಿದ್ದು, ಇದೇ ವರ್ಷ ಸೆಪ್ಟಂಬರ್‌ನಲ್ಲ ಆಯೋಜಿಸಲಾಗುವುದು ಎಂದು ಎಸಿಸಿ ತಿಳಿಸಿತ್ತು. ಇದರ ಆತಿಥ್ಯ ಪಾಕ್‌ ಬಳಿ ಇದ್ದರೂ ಭದ್ರತಾ ಕಾರಣಗಳಿಂದಾಗಿ ತಮ್ಮ ತಂಡವನ್ನು ಅಲ್ಲಿಗೆ ಕಳುಹಿಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ತಟಸ್ಥ ಸ್ಥಳದಲ್ಲಿ ಟೂರ್ನಿ ನಡೆಸಿದರೆ ಮಾತ್ರ ಭಾರತ ಆಡಲಿದೆ ಎಂದೂ ಹೇಳಿತ್ತು. ಈ ನಡುವೆ ಶನಿವಾರ ಇದರ ಬಗ್ಗೆ ಚರ್ಚಿಸಲು ತುರ್ತು ಸಭೆ ನಡೆಸಿದರೂ ಯಾವುದೇ ತೀರ್ಮಾನವಾಗಿಲ್ಲ ಎಂದು ತಿಳಿದುಬಂದಿದೆ.

ಪಾಕ್‌ನಲ್ಲಿ ನಡೆಯುತ್ತಾ? ಮಾರ್ಚ್‌ನಲ್ಲಿ ನಿರ್ಧಾರ

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಲಿದೆಯೇ ಅಥವಾ ಬೇರೆ ದೇಶಕ್ಕೆ ಸ್ಥಳಾಂತರಗೊಳ್ಳಲಿದೆಯೇ ಎಂಬುದರ ಬಗ್ಗೆ ಮುಂದಿನ ತಿಂಗಳು ಎಸಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಸದ್ಯದ ವರದಿ ಪ್ರಕಾರ ಟೂರ್ನಿ ಯುಎಇಯಲ್ಲಿ ನಡೆಯುವ ಸಾಧ್ಯತೆಯಿದೆ. ದುಬೈ, ಅಬುಧಾಬಿ, ಶಾರ್ಜಾ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ ಎಂದು ವರದಿಯಾಗಿದೆ. ಕಳೆದ ಆವೃತ್ತಿಯ ಟೂರ್ನಿ ಕೂಡಾ ಯುಎಇಯಲ್ಲಿ ನಡೆದಿತ್ತು. ಶ್ರೀಲಂಕಾ ಬಳಿ ಆತಿಥ್ಯ ಹಕ್ಕು ಇದ್ದರೂ ದೇಶದ ಆರ್ಥಿಕ ಮುಗ್ಗಟ್ಟು, ಭಾರೀ ಪ್ರತಿಭಟನೆಗಳ ಕಾರಣಕ್ಕೆ ಟೂರ್ನಿಯನ್ನು ಯುಎಇಯಲ್ಲಿ ನಡೆಸಲಾಗಿತ್ತು.

Shikhar Dhawan wife Aesha Mukerji: ಶಿಖರ್ ಧವನ್‌ಗೆ ಸಿಹಿ ಸುದ್ದಿ ನೀಡಿದ ಪಟಿಯಾಲ ಕೋರ್ಟ್..!

ಯುಎಇಯಲ್ಲಿ ಏಷ್ಯಾಕಪ್‌?

ನವದೆಹಲಿ: 2023ರ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಪಾಕಿಸ್ತಾನ ಬದಲು ಯುಎಇಯಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದ್ದು, ಮುಂದಿನ ತಿಂಗಳು ಈ ಬಗ್ಗೆ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌(ಎಸಿಸಿ) ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. 

ಕಳೆದ ಶನಿವಾರ ಎಸಿಸಿ ಮುಖ್ಯಸ್ಥ, ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಅಧ್ಯಕ್ಷ ನಜಂ ಸೇಠಿ ಬಹರೇನ್‌ನಲ್ಲಿ ತುರ್ತು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಜಯ್‌ ಶಾ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ ಯುಎಇಯಲ್ಲಿ ಟೂರ್ನಿ ನಡೆಯುವ ಸಾಧ್ಯತೆ ಇದ್ದು, ದುಬೈ, ಅಬುಧಾಬಿ, ಶಾರ್ಜಾ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ ಎಂದು ವರದಿಯಾಗಿದೆ. ಟೂರ್ನಿಯ ಆತಿಥ್ಯ ಹಕ್ಕು ಪಾಕ್‌ ಬಳಿ ಇದ್ದರೂ ಬಿಸಿಸಿಐ ಈಗಾಗಲೇ ಅಲ್ಲಿಗೆ ತೆರಳಿ ಕ್ರಿಕೆಟ್‌ ಆಡಲ್ಲ ಎಂದು ಹೇಳಿದೆ.