ಏಷ್ಯನ್ ಗೇಮ್ಸ್ ಕ್ರಿಕೆಟ್‌ನಲ್ಲಿ ಭಾರತ ವಿರುದ್ದ ಮುಗ್ಗರಿಸಿದ ಪಾಕಿಸ್ತಾನ ತಂಡದಲ್ಲಿ ಕೋಲಾಹಲ ಶುರುವಾಗಿದೆ. ಟಿ20 ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ನಾಯಕ ಸೇರದಂತೆ ಹಲವರ ಬದಲಿಸಲು ಮುಂದಾಗಿದೆ
ಇಸ್ಲಾಮಾಬಾದ್ (ಅ.04) ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಪಾಕಿಸ್ತಾನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಗೆಲುವಿನ ಮೂಲಕ ಚಿನ್ನದ ಪದಕ ಗೆದ್ದುಕೊಂಡಿತು. ಪಾಕಿಸ್ತಾನ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು. ಭಾರತ ವಿರುದ್ದ ಸೋಲಿನ ಬೆನ್ನಲ್ಲೇ ಇದೀಗ ಪಾಕಿಸ್ತಾನ ತಂಡದಲ್ಲಿ ಮೇಜರ್ ಸರ್ಜರಿ ಮಾಡಲಾಗುತ್ತಿದೆ. ಏಷ್ಯನ್ ಗೇಮ್ಸ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಸಾಹೀಬ್‌ಜಾದ ಫರ್ಹಾನ್ ಮುನ್ನಡೆಸಿದ್ದರು. ಇದೀಗ ಪಾಕಿಸ್ತಾನ ಖಾಯಂ ಟಿ20 ನಾಯಕ ಸಲ್ಮಾನ್ ಅಲಿ ಅಘಾ ಹಾಗೂ ಫರ್ಹಾನ್ ಇಬ್ಬರಿಗೂ ಕೊಕ್ ನೀಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಾಗಿದೆ.
ಪಾಕಿಸ್ತಾನ ಖಾಯಂ ಟಿ20 ನಾಯಕನ ಸಲ್ಮಾನ್ ಅಲಿ ಅಘಾಗೆ ಕೊಕ್ ನೀಡಲಾಗುತ್ತಿದೆ. 2026ರ ಏಷ್ಯಾಕಪ್ ಟೂರ್ನಿ ಹಾಗೂ ಟಿ20 ವಿಶ್ವಕಪ್ 2026ರಲ್ಲಿ ಪಾಕಿಸ್ತಾನ ತಂಡ ಮುನ್ನಡೆಸಿದ್ದರು. ಇದೀಗ ಸಲ್ಮಾನ್ ಅಲಿ ಅಘಾಗೆ ಕೇವಲ ನಾಯಕತ್ವದಿಂದ ಮಾತ್ರವಲ್ಲ, ತಂಡದಿಂದಲೇ ಹೊರಗಿಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಾಗಿದೆ.
ಲಂಕಾ ವಿರುದ್ದ ಸರಣಿಗೆ ಹೊಸ ತಂಡ
ಶ್ರೀಲಂಕಾ ವಿರುದ್ಧದ ತವರಿನ ಟಿ20 ಸರಣಿಗೆ ಪಾಕಿಸ್ತಾನ ತಂಡದ ಆಯ್ಕೆ ನಡೆಯಲಿದೆ. ಅಕ್ಟೋಬರ್ 9 ರಿಂದ 13ರವರೆಗೆ ಟಿ20 ಟೂರ್ನಿ ನಡೆಯಲಿದೆ. ಸಲ್ಮಾನ್ ಅಲಿ ಅಘಾ ನಾಯಕತ್ವದಲ್ಲಿ ಪಾಕಿಸ್ತಾನ ಟಿ20 ತಂಡದ ಪ್ರಮುಖ ಸರಣಿಗಳನ್ನು ಸೋತಿದೆ. ಪ್ರಮುಖವಾಗಿ ಭಾರತದ ವಿರುದ್ಧ ಸೋಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸಲ್ಮಾನ್ ಅಲ್ ಅಘಾಗೆ ತಂಡದಿಂದ ಕೊಕ್ ನೀಡಲಾಗುತ್ತಿದೆ.
ಶದಬ್ ಖಾನ್‌ಗೆ ನಾಯಕತ್ವ ಸ್ಥಾನ
ಸಲ್ಮಾನ್ ಅಲಿ ಅಘಾ ಬದಲು ಶದಬ್ ಖಾನ್‌ಗೆ ನಾಯಕತ್ವ ನೀಡಲು ಪಿಸಿಬಿ ಮುಂದಾಗಿದೆ. ಸ್ಪಿನ್ ಬೌಲರ್ ಶದಬ್ ಖಾನ್ ಏಕದಿನ ಮಾದರಿಯಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಟಿ20 ಮಾದರಿಗೂ ಶದಬ್ ಖಾನ್‌ಗೆ ನಾಯಕ ಸ್ಥಾನ ನೀಡಲು ಪಿಸಿಬಿ ಮುಂದಾಗಿದೆ.
ಭಾರತ ವಿರುದ್ಧ ಸೋಲಿಗೆ ಪಾಕಿಸ್ತಾನದಲ್ಲಿ ಭಾರಿ ಆಕ್ರೋಶ
ಭಾರತ ವಿರುದ್ಧ ಏಷ್ಯಾಕಪ್ ಟೂರ್ನಿಯಲ್ಲಿನ ಸೋಲಿಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಏಷ್ಯಾಕಪ್ ಟೂರ್ನಿಯಲ್ಲೂ ಭಾರತದ ವಿರುದ್ದ ಮುಗ್ಗರಿಸಿತ್ತು. ಇದೀಗ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ವಿರುದ್ದ ಪಾಕಿಸ್ತಾನ ಸೋಲು ಕಂಡಿದೆ. ಪಾಕಿಸ್ತಾನ ಅಭಿಮಾನಿಗಳು ಈ ಸೋಲಿಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬಲಿಷ್ಠ ತಂಡ ಕಟ್ಟಲು ಪಿಸಿಬಿಗೆ ಆಗ್ರಹಿಸಿದ್ದಾರೆ.


