Asianet Suvarna News Asianet Suvarna News

8 ತಿಂಗಳ ಬಳಿಕ ಆರಂಭಗೊಂಡ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯ ನಿಲ್ಲಿಸಿದ ನಾಯಿ!

8 ತಿಂಗಳ ಹಿಂದೆ  ಸ್ಥಗತಿಗೊಂಡಿದ್ದ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಆರಂಭಿಸಲು ಕೊರೋನಾ ಪದೆೇ ಪದೇ ಅಡ್ಡಿಯಾಯಿತು. ಕೊನೆಗೂ ಹರಸಾಹಸ ಪಟ್ಟು ಪಾಕಿಸ್ತಾನ ಪಿಎಸ್‌ಲ್ ಪ್ಲೇ ಆಫ್ ಪಂದ್ಯಗಳನ್ನು ಆಯೋಜಿಸಿತ್ತು. ಆದರೆ ಇದೀಗ ನಾಯಿ ಬಂದು ಪಂದ್ಯ ನಿಲ್ಲಿಸಿದ ಘಟನೆ ನಡೆದಿದೆ.

Pakistan super league match stopped due to dog enter field ckm
Author
Bengaluru, First Published Nov 15, 2020, 8:22 PM IST

ಕರಾಚಿ(ನ.15): ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ 8 ತಿಂಗಳ ಹಿಂದೆ ಸ್ಥಗಿತಗೊಂಡಿತ್ತು. ಲೀಗ್ ಹಂತದ ಪಂದ್ಯ ಮುಗಿಯುತ್ತಿದ್ದಂತ ಟೂರ್ನಿ ಸ್ಥಗಿತಗೊಂಡಿತು. ಬಳಿಕ ಕೊರೋನಾ ಕಾರಣ ಟೂರ್ನಿ ಪುನರ್ ಆರಂಭಿಸಲು ಸಾಧ್ಯವಾಗಲೇ ಇಲ್ಲ. ಇದೀಗ ಪ್ಲೇ ಆಫ್ ಹಂತದ ಪಂದ್ಯಗಳು ಮತ್ತೆ ಆರಂಭಗೊಂಡಿದೆ. ಇದೀಗ ನಾಯಿಯೊಂದು ಪಂದ್ಯವನ್ನೇ ನಿಲ್ಲಿಸಿದೆ.

PSL 2020: ಕೊನೆಗೂ ಓಡೋದು ನಿಲ್ಲಿಸಿದ ಇಮ್ರಾನ್ ತಾಹಿರ್..!..

ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ಹಾಗೂ ಮುಲ್ತಾನ್ ಸುಲ್ತಾನ್ಸ್ ಮುಖಾಮುಖಿಯಾಗಿತ್ತು. 141 ರನ್ ಟಾರ್ಗೆಟ್ ಬೆನ್ನಟ್ಟುತ್ತಿರುವ ವೇಳೆ ಕರಾಚಿ ಯಾವುದೇ ಆತಂಕವಿಲ್ಲದೆ ಸಾಗಿತ್ತು. 13 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 90 ರನ್ ಸಿಡಿಸಿತ್ತು. ಈ ವೇಳೆ ನಾಯಿಯೊಂದು ಮೈದಾನ ಪ್ರವೇಶಿಸಿದ ಕಾರಣ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿತು.

ಆಸ್ಟ್ರೇಲಿಯಾ ತೆರಳಿದ ಟೀಂ ಇಂಡಿಯಾ ಕ್ರಿಕೆಟಿಗರ ಕೊರೋನಾ ರಿಪೋರ್ಟ್ ಬಹಿರಂಗ!.

ಉಭಯ ತಂಡದ ಕ್ರಿಕೆಟಿಗರು ನಾಯಿ ಓಡಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲಿಲ್ಲ. ಬಳಿಕ ಭದ್ರತಾ ಸಿಬ್ಬಂದಿಗಳು ಬಂದು ನಾಯಿ ಓಡಿಸಿ ಸುಸ್ತಾದರು. ಕೆಲ ಹೊತ್ತು ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ನಾಯಿ ಮೈದಾನದಿಂದ ಹೊರ ಹೋದ ಬಳಿಕ ಪಂದ್ಯ ಆರಂಭಗೊಂಡಿತು. ಇಷ್ಟೇ ಅಲ್ಲ ಕರಾಚಿ ಕಿಂಗ್ಸ್ ಗೆಲುವು ದಾಖಲಿಸೋ ಮೂಲಕ ಫೈನಲ್ ಪ್ರವೇಶಿಸಿತು.
 

Follow Us:
Download App:
  • android
  • ios