ಕರಾಚಿ(ನ.15): ಕೊರೋನಾ  ಭೀತಿಯಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿದ್ದ ಪಾಕಿಸ್ತಾನ ಸೂಪರ್ ಲೀಗ್ ಶನಿವಾರ(ನ.14)ದಿಂದ ಮತ್ತೆ ಚಾಲನೆ ದೊರಕಿದೆ. ಕರಾಚಿಯಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಇಮಾದ್ ವಾಸೀಂ ನೇತೃತ್ವದ ಕರಾಚಿ ಕಿಂಗ್ಸ್ ತಂಡವು ಮುಲ್ತಾನ್ ಸುಲ್ತಾನ್ಸ್ ತಂಡವನ್ನು ಮಣಿಸಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.

ಇದಿಷ್ಟು ಒಂದು ಕಡೆಯಾದರೆ ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಇಮ್ರಾನ್ ತಾಹಿರ್ ಕ್ಷೇತ್ರರಕ್ಷಣೆ ಮಾಡುವಾಗ ಅದ್ಭುತ ಕ್ಯಾಚ್ ಹಿಡಿದು, ವಿನೂತನ ಶೈಲಿಯಲ್ಲಿ ಫೋಸ್‌ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು, ಇಮ್ರಾನ್ ತಾಹಿರ್ ಎಂದಾಕ್ಷಣ ತಕ್ಷಣಕ್ಕೆ ನೆನಪಾಗುವುದು ವಿಕೆಟ್ ಪಡೆದಾಕ್ಷಣ ಮೈದಾನದ ತುಂಬೆಲ್ಲಾ ಓಡಿ ಖುಷಿಪಡೆವುದು ಸರ್ವೇ ಸಾಮಾನ್ಯ. ಆದರೆ ಪಿಎಸ್‌ಎಲ್ ಟೂರ್ನಿಯ ವೇಳೆ ಮುಲ್ತಾನ್ ಸುಲ್ತಾನ್ಸ್ ತಂಡದ ಇಮ್ರಾನ್ ತಾಹಿರ್ ಹೊಸ ಫೋಸ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಕೆಲವರು ತಾಹಿರ್ ಓಟಕ್ಕೆ ಪಿಎಸ್‌ಎಲ್‌ನಲ್ಲಿ ಬ್ರೇಕ್ ಬಿದ್ದಿದೆ ಎಂದು ಕಾಲೆಳೆದಿದ್ದಾರೆ.

PSL ಪ್ಲೇ ಆಫ್‌ ಪಂದ್ಯದಲ್ಲಿ ಡೀನೋಗೆ ವಿಶಿಷ್ಠ ಗೌರವ ಸಲ್ಲಿಸಿದ ಕರಾಚಿ ಕಿಂಗ್ಸ್, ಮುಲ್ತಾನ್ ಸುಲ್ತಾನ್ಸ್‌..!

ಸೋಹೆಲ್ ತನ್ವೀರ್ ಬೌಲಿಂಗ್‌ನಲ್ಲಿ ಶಾರ್ಜಿಲ್ ಖಾನ್ ಬಾರಿಸಿದ ಚೆಂಡನ್ನು ಅಧ್ಭುತವಾಗಿ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಹೀಗಿತ್ತು ನೋಡಿ ಆ ಕ್ಷಣ:

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಇಮ್ರಾನ್ ತಾಹಿರ್, ಬಹುತೇಕ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು. ಇನ್ನು ಪಿಎಸ್‌ಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ತಾಹಿರ್ 4 ಓವರ್ ಬೌಲಿಂಗ್ ಮಾಡಿ 22 ರನ್ ನೀಡಿ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.