Asianet Suvarna News Asianet Suvarna News

ವಿಶ್ವಕಪ್‌ನಿಂದ ಹೊರಬಿದ್ದ ಬಾಂಗ್ಲಾದೇಶ, ಪಾಕಿಸ್ತಾನಕ್ಕಿದೆಯಾ ಸೆಮಿಫೈನಲ್ ಚಾನ್ಸ್?

ಐಸಿಸಿ ವಿಶ್ವಕಪ್ ಟೂರ್ನಿಯಿಂದ ಬಾಂಗ್ಲಾದೇಶ ಹೊರಬಿದ್ದಿದೆ. ಇತ್ತ ಪಾಕಿಸ್ತಾನ ಸತತ ಸೋಲಿನ ಸರಮಾಲೆಯಿಂದ ಹೊರಬಂದಿದ್ದು, ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ. ಪಾಕಿಸ್ತಾನಕ್ಕೆ ಸೆಮಿಫೈನಲ್ ಚಾನ್ಸ್ ಎಷ್ಟರ ಮಟ್ಟಿಗಿದೆ?

Pakistan knocked Bangladesh out of ICC world cup 2023 seminal scenario ckm
Author
First Published Oct 31, 2023, 10:09 PM IST

ಕೋಲ್ಕತಾ(ಅ.31) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತನ್ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ. ಬಾಂಗ್ಲಾದೇಶ ವಿರುದ್ಧದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ 7 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಎರಡೂ ತಂಡಗಳು ತಲಾ 6 ಅಂಕ ಪಡದಿದೆ. ಆದರೆ ಪಾಕಿಸ್ತಾನ ನೆಟ್ ರನ್‌ರೇಟ್ ಉತ್ತಮವಾಗಿರುವದರಿದಂ 5ನೇ ಸ್ಥಾನಕ್ಕೆ ಜಿಗಿದಿದೆ. ಬಾಂಗ್ಲಾದೇಶದ ಸೆಮಿಫೈನಲ್ ಆಸೆ ಕಮರಿಹೋಗಿದೆ. ಆದರೆ ಪಾಕಿಸ್ತಾನಕ್ಕೆ ಸೆಮೀಸ್ ಚಾನ್ಸ್ ತೆರೆದುಕೊಂಡಿದೆ.

ಅಂಕಪಟ್ಟಿಯಲ್ಲಿ ಪಾಕಿಸ್ತಾನ 5ನೇ ಸ್ಥಾನದಲ್ಲಿದೆ. 3 ಮತ್ತು 4ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾಗಿಂತ ಕೇವಲ 2 ಪಾಯಿಂಟ್ಸ್ ಕಡಿಮೆಯಿದೆ. ಮೊದಲ ಸ್ಥಾನದಲ್ಲಿರು ಭಾರತ 12 ಅಂಕ ಸಂಪಾದಿಸಿದ್ದರೆ, 2ನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ 10 ಅಂಕ ಪಡೆದುಕೊಂಡಿದೆ. ಪಾಕಿಸ್ತಾನಕ್ಕೆ ಇನ್ನೆರಡು ಪಂದ್ಯ ಬಾಕಿ ಇದೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ದದ ಪಂದ್ಯ ಬಾಕಿ ಇದೆ. ಈ ಎರಡೂ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದರೆ ಪಾಕಿಸ್ತಾನದ ಪಾಯಿಂಟ್ಸ್ 10ಕ್ಕೇ ಏರಿಕೆಯಾಗಲಿದೆ. ಜೊತೆಗೆ ಉತ್ತಮ ರನ್‌ರೇಟ್ ಕೂಡ ಅವಶ್ಯಕತೆ ಇದೆ.

ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 100 ವಿಕೆಟ್ ಕಬಳಿಸಿ ದಾಖಲೆ ಬರೆದ 'ವೇಗಿ' ಶಾಹೀನ್ ಅಫ್ರಿದಿ..!

ಇತ್ತ 8 ಪಾಯಿಂಟ್ಸ್ ಪಡೆದಿರುವ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮುಂದಿನ ಪಂದ್ಯದಲ್ಲಿ ಮುಗ್ಗರಿಸಿದರೆ ಪಾಕಿಸ್ತಾನದ ಅವಕಾಶ ತೆರದುಕೊಳ್ಳವ ಸಾಧ್ಯತೆ ಇದೆ. ಪಾಕಿಸ್ತಾನ 10 ಅಂಕದ ಜೊತೆಗೆ ಉತ್ತಮ ರನ್‌ರೇಟ್ ಕಾಯ್ದುಕೊಂಡರೆ, ಇತ್ತ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಇನ್ನುಳಿದ ಪಂದ್ಯದಲ್ಲಿ ಮುಗ್ಗರಿಸಿದರೆ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ ಈ ಸಾಧ್ಯತೆಗಳು ಕಷ್ಟ ಸಾಧ್ಯ.

ಇತ್ತ ವಿಶ್ವಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದ ಮೊದಲ ತಂಡ ಬಾಂಗ್ಲಾದೇಶ ಅನ್ನೋ ಅಪಖ್ಯಾತಿಗೆ ಗುರಿಯಾಗಿದೆ. ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶ ಬಹುತೇಕ ಕಮರಿಹೋಗಿದೆ. ಆಧರೆ ಅಧಿಕೃತವಾಗಿ ಹೊರಬಿದ್ದಿಲ್ಲ. ಕಾರಣ ಇಂಗ್ಲೆಂಡ್ ತಂಡಕ್ಕೆ ಇನ್ನೂ 3 ಪಂದ್ಯಗಳು ಬಾಕಿ ಇವೆ. ಆದರೆ ಇಂಗ್ಲೆಂಡ್ ಸೆಮಿಫೈನಲ್ ಸಾಧ್ಯತೆಗಳು ಬಹುತೇಕ ಬಂದ್ ಆಗಿದೆ.

"ಇಂಗ್ಲೆಂಡ್ ಈಗಲೂ ಕ್ವಾಲಿಫೈ ಆಗಬಹುದು...": ಮತ್ತೆ ಮೈಕಲ್ ವಾನ್ ಕಾಲೆಳೆದ ಜಾಫರ್..! ಟ್ವೀಟ್ ವೈರಲ್

ಇನ್ನು ಆಫ್ಘಾನಿಸ್ತಾನ, ಶ್ರೀಲಂಕಾ ಹಾಗೂ ನೆದರ್ಲೆಂಡ್ ತಂಡಕ್ಕೂ ಇದೇ ರೀತಿ ಅವಕಾಶಗಳಿವೆ. ಆದರೆ ಸದ್ಯ ಟಾಪ್ 4ರಲ್ಲಿ ಕಾಣಿಸಿಕೊಂಡ ತಂಡಗಳ ಸೋಲಿನ ಮೇಲೆ ತಂಡಗಳ ಸೆಮಿಫೈನಲ್ ಸಾಧ್ಯತೆ ತೆರೆದುಕೊಳ್ಳಲಿದೆ.
 

Follow Us:
Download App:
  • android
  • ios