ಏಷ್ಯಾಕಪ್‌, ವಿಶ್ವಕಪ್‌ನಲ್ಲಿ ಬಲಿಷ್ಠ ಪಾಕಿಸ್ತಾನವನ್ನು ಸೋಲಿಸುವುದು ಸವಾಲು: ಅಶ್ವಿನ್ ಅಚ್ಚರಿಯ ಮಾತು..!

‘ಬಾಬರ್‌ ಆಜಂ ಹಾಗೂ ಮೊಹಮದ್‌ ರಿಜ್ವಾನ್‌ ಸ್ಥಿರ ಪ್ರದರ್ಶನ ಮುಂದುವರಿಸಿದರೆ ಪಾಕಿಸ್ತಾವನ್ನು ಏಷ್ಯಾಕಪ್‌ ಹಾಗೂ ವಿಶ್ವಕಪ್‌ನಲ್ಲಿ ಸೋಲಿಸುವುದು ಬಹಳ ಕಷ್ಟವಾಗಬಹುದು. ತಂಡಕ್ಕೆ ಪ್ರಚಂಡ ವೇಗಿಗಳ ಬಲವೂ ಇದೆ. ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಿದ ಅನುಭವ ಪಾಕಿಸ್ತಾನಿ ಆಟಗಾರರಿಗೆ ವರವಾಗಬಹುದು’ ಎಂದು ಅಶ್ವಿನ್ ಹೇಳಿದ್ದಾರೆ.

Pakistan is an exceptional side hard to beat Says Ravichandran Ashwin kvn

ಚೆನ್ನೈ(ಆ.31): ಭಾರತದ ಅಗ್ರ ಸ್ಪಿನ್ನರ್‌ ಆರ್.ಅಶ್ವಿನ್‌ ಏಷ್ಯಾಕಪ್‌ನಲ್ಲಿ ಬಲಿಷ್ಠ ಪಾಕಿಸ್ತಾನವನ್ನು ಸೋಲಿಸುವುದು ಭಾರತಕ್ಕೆ ಸವಾಲಾಗಿ ಪರಿಣಮಿಸಬಹುದು ಎಂದು ಅಭಿಪ್ರಾಯಿಸಿದ್ದಾರೆ. ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಅಶ್ವಿನ್‌, ಭಾರತ ಹಾಗೂ ಪಾಕಿಸ್ತಾನ ಎರಡೂ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡಗಳು ಎಂದಿದ್ದಾರೆ.

‘ಬಾಬರ್‌ ಆಜಂ ಹಾಗೂ ಮೊಹಮದ್‌ ರಿಜ್ವಾನ್‌ ಸ್ಥಿರ ಪ್ರದರ್ಶನ ಮುಂದುವರಿಸಿದರೆ ಪಾಕಿಸ್ತಾವನ್ನು ಏಷ್ಯಾಕಪ್‌ ಹಾಗೂ ವಿಶ್ವಕಪ್‌ನಲ್ಲಿ ಸೋಲಿಸುವುದು ಬಹಳ ಕಷ್ಟವಾಗಬಹುದು. ತಂಡಕ್ಕೆ ಪ್ರಚಂಡ ವೇಗಿಗಳ ಬಲವೂ ಇದೆ. ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಿದ ಅನುಭವ ಪಾಕಿಸ್ತಾನಿ ಆಟಗಾರರಿಗೆ ವರವಾಗಬಹುದು’ ಎಂದು ಅಶ್ವಿನ್ ಹೇಳಿದ್ದಾರೆ.

ಏಷ್ಯಾಕಪ್‌: ಶ್ರೀಲಂಕಾ ತಲುಪಿದ ಭಾರತ ತಂಡ

ಕೊಲಂಬೊ: ಏಷ್ಯಾಕಪ್‌ ಏಕದಿನ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ಕ್ರಿಕೆಟ್‌ ತಂಡ ಬುಧವಾರ ಶ್ರೀಲಂಕಾಗೆ ಪ್ರಯಾಣಿಸಿತು. ಬೆಂಗಳೂರಿನಿಂದ ಕೊಲಂಬೊಗೆ ಬಂದಿಳಿದ ತಂಡವನ್ನು ವಿಮಾನ ನಿಲ್ದಾಣದಲ್ಲಿ ಲಂಕಾ ಕ್ರಿಕೆಟ್‌ ಮಂಡಳಿ ಅಧಿಕಾರಿಗಳು ಸ್ವಾಗತಿಸಿದರು. ಬಳಿಕ ರಸ್ತೆ ಮಾರ್ಗವಾಗಿ ತಂಡ ಕ್ಯಾಂಡಿಗೆ ತೆರಳಿತು. ಕೆ.ಎಲ್‌.ರಾಹುಲ್‌ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಕ್ಯಾಂಡಿ ತಲುಪಿದ್ದು, ಗುರುವಾರದಿಂದ ಅಭ್ಯಾಸ ಆರಂಭಿಸಲಿದ್ದಾರೆ. ಟೀಂ ಇಂಡಿಯಾ ಸೆ.2ರಂದು ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಲಿದ್ದು, ಸೆ.4ರಂದು ಗುಂಪು ಹಂತದ ತನ್ನ 2ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಸೆಣಸಲಿದೆ.

Asia Cup 2023: 'ಗಾಯಗೊಂಡಿರುವ' ಸಿಂಹಳೀಯರಿಗೆ ಇಂದು ಬಾಂಗ್ಲಾ ಹುಲಿಗಳ ಸವಾಲು!

ಮುಂದಿನ 10 ತಿಂಗಳು ಭಾರತಕ್ಕೆ ಬಿಡುವಿಲ್ಲ!

ಏಷ್ಯಾಕಪ್‌ನಿಂದ ಆರಂಭಗೊಂಡು ಮುಂದಿನ 10 ತಿಂಗಳು ಭಾರತ ತಂಡ ಬಿಡುವಿಲ್ಲದಂತೆ ಕ್ರಿಕೆಟ್‌ ಆಡಲಿದೆ. ಏಷ್ಯಾಕಪ್‌ ಮುಗಿದ ಬೆನ್ನಲ್ಲೇ ತವರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ನಡೆಯಲಿದ್ದು, ಆ ಬಳಿಕ ಏಕದಿನ ವಿಶ್ವಕಪ್‌ನಲ್ಲಿ ತಂಡ ಕಣಕ್ಕಿಳಿಯಲಿದೆ. ವಿಶ್ವಕಪ್‌ ಬಳಿಕ ಆಸೀಸ್‌ ವಿರುದ್ಧ ಟಿ20 ಸರಣಿ, ಆ ನಂತರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟಿ20, ಏಕದಿನ, ಟೆಸ್ಟ್‌ ಸರಣಿಯಲ್ಲಿ ತಂಡ ಪಾಲ್ಗೊಳ್ಳಲಿದೆ. ದ.ಆಫ್ರಿಕಾದಿಂದ ವಾಪಸಾಗುತ್ತಿದ್ದಂತೆ ತವರಲ್ಲಿ ಆಫ್ಘನ್‌ ವಿರುದ್ಧ ಟಿ20 ಸರಣಿ, ಆ ನಂತರ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ. ಇದಾಗುತ್ತಿದ್ದಂತೆ ಭಾರತೀಯ ಆಟಗಾರರು ಐಪಿಎಲ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಐಪಿಎಲ್‌ ಮುಗಿಯುತ್ತಿದ್ದಂತೆ ಟಿ20 ವಿಶ್ವಕಪ್‌ಗೆ ವಿಂಡೀಸ್‌ಗೆ ತೆರಳಬೇಕಿದೆ.

Asia Cup 2023: ಉದ್ಘಾಟನಾ ಪಂದ್ಯದಲ್ಲಿ ನೇಪಾಳವನ್ನು ಬಗ್ಗುಬಡಿದ ಪಾಕಿಸ್ತಾನ!

ಇಂದು ಬಿಸಿಸಿಐ ಮಾಧ್ಯಮ ಪ್ರಸಾರ ಹಕ್ಕು ಹರಾಜು

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ತವರಿನ ಪಂದ್ಯಗಳ ಪ್ರಸಾರ ಹಕ್ಕು ಖರೀದಿಗೆ ಗುರುವಾರ ಇ-ಹರಾಜು ಪ್ರಕ್ರಿಯೆ ನಡೆಯಲಿದೆ. ಡಿಸ್ನಿ ಸ್ಟಾರ್‌, ವಯಾಕಾಮ್‌ 18 ಹಾಗೂ ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಸಂಸ್ಥೆಗಳು ಪ್ರಸಾರ ಹಕ್ಕಿಗಾಗಿ ಪೈಪೋಟಿ ನಡೆಸಲಿವೆ. ಟೀವಿ ಹಾಗೂ ಡಿಜಿಟೆಲ್‌ ಪ್ರಸಾರ ಹಕ್ಕು ಮಾರಾಟವನ್ನು ಬಿಸಿಸಿಐ ಪ್ರತ್ಯೇಕವಾಗಿ ನಡೆಸಲು ನಿರ್ಧರಿಸಿದ್ದು, ಪ್ರತಿ ಪಂದ್ಯಕ್ಕೆ ಟೀವಿ ಪ್ರಸಾರಕ್ಕೆ 20 ಕೋಟಿ ರು., ಡಿಜಿಟೆಲ್‌ ಪ್ರಸಾರಕ್ಕೆ 25 ಕೋಟಿ ರು. ಮೂಲಬೆಲೆ ನಿಗದಿಪಡಿಸಲಾಗಿದೆ. ಮುಂದಿನ 5 ವರ್ಷಗಳಿಗೆ ಒಪ್ಪಂದ ಇರಲಿದ್ದು, ಕನಿಷ್ಠ 88 ಪಂದ್ಯಗಳ ಪ್ರಸಾರ ಹಕ್ಕು ಸಿಗಲಿದೆ. ಪುರುಷರ ತಂಡದ ಪಂದ್ಯಗಳ ಪ್ರಸಾರಕ್ಕೆ ಬಿಡ್‌ ಗೆಲ್ಲುವ ಸಂಸ್ಥೆಯು ಭಾರತದಲ್ಲಿ ನಡೆಯಲಿರುವ ರಾಷ್ಟ್ರೀಯ ಮಹಿಳಾ ತಂಡ ಪಂದ್ಯಗಳ ಪ್ರಸಾರ ಹಕ್ಕನ್ನು ಉಚಿತವಾಗಿ ಪಡೆಯಲಿದೆ.
 

Latest Videos
Follow Us:
Download App:
  • android
  • ios