Asia Cup 2023 ಶತಕ ಸಿಡಿಸಿ ಟೀಂ ಇಂಡಿಯಾಗೆ ಎಚ್ಚರಿಕೆ ಕೊಟ್ಟ ಪಾಕ್ ನಾಯಕ ಬಾಬರ್ ಅಜಂ..!

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು ಬಾಬರ್ ಅಜಂ ಹಾಗೂ ಇಫ್ರಿಕಾರ್ ಅಹಮ್ಮದ್ ಬಾರಿಸಿದ ಸಮಯೋಚಿತ ಶತಕಗಳ ನೆರವಿನಿಂದ 342 ರನ್ ಕಲೆಹಾಕಿತು. ಇನ್ನು ಕಠಿಣ ಗುರಿ ಬೆನ್ನತ್ತಿದ ನೇಪಾಳ ತಂಡವು 23.4 ಓವರ್‌ಗಳಲ್ಲಿ 104 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಹೀನಾಯ ಸೋಲು ಅನುಭವಿಸಿದೆ.

Pakistan hammer Nepal in Asia Cup opener Good preparation for India game Says Babar Azam kvn

ಮುಲ್ತಾನ್(ಆ.31): ಏಷ್ಯಾಕಪ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಂ ನೇಪಾಳ ಎದುರು ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಭಾರತ ಎದುರಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಭರ್ಜರಿ ತಾಲೀಮು ನಡೆಸಿದ್ದಾರೆ. ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ತವರಿನಲ್ಲಿ ನೇಪಾಳ ಎದುರು 238 ರನ್ ಅಂತರದ ದಾಖಲೆಯ ಗೆಲುವು ಸಾಧಿಸಿದೆ. ಸ್ಪೋಟಕ ಶತಕ ಸಿಡಿಸುವ ಮೂಲಕ ಬಲಿಷ್ಠ ಭಾರತ ತಂಡಕ್ಕೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು ಬಾಬರ್ ಅಜಂ ಹಾಗೂ ಇಫ್ರಿಕಾರ್ ಅಹಮ್ಮದ್ ಬಾರಿಸಿದ ಸಮಯೋಚಿತ ಶತಕಗಳ ನೆರವಿನಿಂದ 342 ರನ್ ಕಲೆಹಾಕಿತು. ಇನ್ನು ಕಠಿಣ ಗುರಿ ಬೆನ್ನತ್ತಿದ ನೇಪಾಳ ತಂಡವು 23.4 ಓವರ್‌ಗಳಲ್ಲಿ 104 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಹೀನಾಯ ಸೋಲು ಅನುಭವಿಸಿದೆ.

Asia Cup 2023: ಉದ್ಘಾಟನಾ ಪಂದ್ಯದಲ್ಲಿ ನೇಪಾಳವನ್ನು ಬಗ್ಗುಬಡಿದ ಪಾಕಿಸ್ತಾನ!

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ, "ಕೆಲವು ಓವರ್‌ಗಳು ನಾವು ಅಂದುಕೊಂಡಂತೆ ಆಡಲು ಸಾಧ್ಯವಾಗಲಿಲ್ಲ. ನಮ್ಮ ವೇಗಿಗಳು ತುಂಬಾ ಚೆನ್ನಾಗಿ ಆರಂಭ ಒದಗಿಸಿಕೊಟ್ಟರು. ಇನ್ನು ಸ್ಪಿನ್ನರ್‌ಗಳು ಕೂಡಾ ಚೆನ್ನಾಗಿ ಆಡಿದರು. ಇನ್ನು ಈ ಪಂದ್ಯವು ಭಾರತದ ಎದುರಿನ ಪಂದ್ಯಕ್ಕೂ ಮುನ್ನ ಉತ್ತಮ ಸಿದ್ದತೆ ನಡೆಸಲು ಅವಕಾಶವಾದಂತೆ ಆಗಿದೆ. ಯಾಕೆಂದರೆ ಈ ಪಂದ್ಯದಲ್ಲಿ ಆಡಿದ ರೀತಿಯು ನಮ್ಮಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ನಾವು ಪ್ರತಿ ಪಂದ್ಯದಲ್ಲೂ 100% ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದೇವೆ, ಭಾರತದ ಎದುರು ಇದೇ ರೀತಿ ಪ್ರದರ್ಶನ ತೋರುವ ವಿಶ್ವಾಸವಿದೆ" ಎಂದು ಬಾಬರ್ ಅಜಂ ಹೇಳಿದ್ದಾರೆ.

ನೇಪಾಳ ಎದುರಿನ ಪಂದ್ಯದಲ್ಲಿ ಬಾಬರ್ ಅಜಂ 131 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 151 ರನ್ ಬಾರಿಸಿ ಮಿಂಚಿದರು. ಈ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಇದರ ಜತೆಗೆ ಬಾಬರ್ ಅಜಂ, ಇಫ್ತಿಕಾರ್ ಅಹಮ್ಮದ್ ಜತೆಗೆ 214 ರನ್‌ಗಳ ಜತೆಯಾಟವಾಡುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಮತ್ತೊಂದು ತುದಿಯಲ್ಲಿ ಇಫ್ತಿಕಾರ್ ಅಹಮ್ಮದ್ ಕೇವಲ 71 ಎಸೆತಗಳಲ್ಲಿ 107 ರನ್‌ ಸಿಡಿಸಿದರು.

ಏಷ್ಯಾಕಪ್‌, ವಿಶ್ವಕಪ್‌ನಲ್ಲಿ ಬಲಿಷ್ಠ ಪಾಕಿಸ್ತಾನವನ್ನು ಸೋಲಿಸುವುದು ಸವಾಲು: ಅಶ್ವಿನ್ ಅಚ್ಚರಿಯ ಮಾತು..!

ನೇಪಾಳ ಎದುರು ಭರ್ಜರಿ ಗೆಲುವು ಸಾಧಿಸಿದ ಪಾಕಿಸ್ತಾನ ತಂಡವು ಇದೀಗ ಶ್ರೀಲಂಕಾದತ್ತ ಮುಖ ಮಾಡಿದೆ. ಸೆಪ್ಟೆಂಬರ್ 02ರಂದು ನಡೆಯಲಿರುವ ಭಾರತ ಎದುರಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಕಣಕ್ಕಿಳಿಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಪಲ್ಲೆಕೆಲೆ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದೆ.

Latest Videos
Follow Us:
Download App:
  • android
  • ios