ಹಣ ಪಡೆಯದ ಭಾರತೀಯ ಕ್ಯಾಬ್ ಡ್ರೈವರ್‌ಗೆ ಸ್ಪೆಷಲ್ ಗಿಫ್ಟ್ ನೀಡಿದ ಪಾಕ್ ಕ್ರಿಕೆಟರ್ಸ್!
ಪಾಕಿಸ್ತಾನ ಕ್ರಿಕೆಟಿಗರನ್ನು ರೆಸ್ಟೋರೆಂಟ್‌ಗೆ ಕರೆದೊಯ್ದ ಭಾರತೀಯ ಕ್ಯಾಬ್ ಚಾಲಕ, ಕ್ರಿಕೆಟಿಗರಿಂದ ಹಣ ಪಡೆದಿಲ್ಲ. ಹೀಗಾಗಿ ಪಾಕ್ ಕ್ರಿಕೆಟಿಗರು ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.
ಬ್ರಿಸ್ಬೇನ್(ನ.25): ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿದೆ. ಇನಿಂಗ್ಸ್ ಹಾಗೂ 5 ರನ್ ಸೋಲು ಕಂಡ ಪಾಕಿಸ್ತಾನ ಇದೀಗ 29ರಿಂದ ಆಡಿಲೇಡ್‌ನಲ್ಲಿ ನಡೆಯಲಿರುವ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದತ್ತ ಪಾಕಿಸ್ತಾನ ಚಿತ್ತ ಹರಿಸಿದೆ. ಮೊದಲ ಟೆಸ್ಟ್ ಪಂದ್ಯದ ನಡುವೆ ಪಾಕಿಸ್ತಾನ ಕ್ರಿಕೆಟಿಗರನ್ನು ರೆಸ್ಟೋರೆಂಟ್‌ಗೆ ಕರೆದೊಯ್ದ ಭಾರತೀಯ ಕ್ಯಾಬ್ ಡ್ರೈವರ್‌ಗೆ ವಿಶೇಷ ಉಡುಗೊರೆ ನೀಡಿದ ಘಟನೆ ನಡೆದಿದೆ.
ಇದನ್ನೂ ಓದಿ: ತಾಯಿಯ ನಿಧನರಾದರೂ ತಾಯ್ನಾಡಿಗೆ ತೆರಳದೆ ಪಂದ್ಯ ಆಡಿದ ಪಾಕ್ ಕ್ರಿಕೆಟಿಗ!
ಬ್ರೀಸ್ಬೇನ್ ಟೆಸ್ಟ್ ಪಂದ್ಯದ ನಡುವೆ ಪಾಕಿಸ್ತಾನ ಕ್ರಿಕೆಟಿಗರಾದ ಶಹೀನ್ ಶಾ ಆಫ್ರಿದಿ, ಯಾಸಿರ್ ಶಾ ಹಾಗೂ ನಸೀಮ್ ಶಾ ರೆಸ್ಟೋರೆಂಟ್‌ಗೆ ತೆರಳುವ ಕಾರಣ ಕ್ಯಾಬ್ ಬುಕ್ ಮಾಡಿದ್ದಾರೆ. ಕ್ರಿಕೆಟಿಗರನ್ನು ಕರೆದೊಯ್ಯಲು ಬಂದ ಕ್ಯಾಬ್ ಚಾಲಕ ಭಾರತೀಯ ಮೂಲದವ. ಇಷ್ಟೇ ಅಲ್ಲ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿ. ತನ್ನ ಕಾರಿನಲ್ಲಿರುವುದು ಪಾಕಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟಿಗರು ಅನ್ನೋ ಸಂತಸ ಕ್ಯಾಬ್ ಚಾಲಕನಿಗೆ. ಹೀಗಾಗಿ ಕ್ಯಾಬ್ ಚಾಲಕ ಪಾಕ್ ಕ್ರಿಕೆಟಿಗರಿಂದ ಹಣ ಪಡೆಯಲು ನಿರಾಕರಿಸಿದ್ದಾನೆ.
ಇದನ್ನೂ ಓದಿ: ಟಿ20 ಕ್ರಿಕೆಟ್: ದಕ್ಷಿಣ ಆಫ್ರಿಕಾಕ್ಕೆ ಪಾಕ್ ಆಹ್ವಾನ.
ಅದೆಷ್ಟೇ ಹೇಳಿದರೂ ಕ್ಯಾಬ್ ಚಾಲಕ ಹಣ ಪಡೆಯಲಿಲ್ಲ. ಹೀಗಾಗಿ ಪಾಕಿಸ್ತಾನ ಕ್ರಿಕೆಟಿಗರು, ತಮ್ಮ ಜೊತೆ ಡಿನ್ನರ್ ಮಾಡುವಂತೆ ಆಹ್ವಾನ ನೀಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟಿಗ ಸಮ್ಮುಖದಲ್ಲಿ, ಒಂದೇ ಟೇಬಲ್‌ನಲ್ಲಿ ಕುಳಿತ ಭೋಜನ ಸವಿಯುವ ಅವಕಾಶವನ್ನು ಯಾವ ಅಭಿಮಾನಿ ಮಿಸ್ ಮಾಡಿಕೊಳ್ಳುತ್ತಾರೆ ಹೇಳಿ. ಪಾಕಿಸ್ತಾನ ಕ್ರಿಕೆಟಿಗ ಆಹ್ವಾನ ಸ್ವೀಕರಿಸಿದ ಕ್ಯಾಬ್ ಚಾಲಕ, ಪಾಕ್ ಕ್ರಿಕೆಟಿಗರ ಜೊತೆ ಭೋಜನ ಸವಿದಿದ್ದಾನೆ.
ಸಂಪೂರ್ಣ ಘಟನೆಯನ್ನು ABC ರೇಡಿಯೋ ನಿರೂಪಕಿ ಆಲಿಸನ್ ಮಿಚೆಲ್ ವಿವರಿಸಿದ್ದಾರೆ. ವೀಕ್ಷಕ ವಿವರಣೆ ವೇಳೆ ಆಲಿಸನ್, ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮಿಚೆಲ್ ಜಾನ್ಸನ್‌ಗೆ ವಿವರಿಸಿದ್ದಾರೆ.
ನವೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: