ಕರಾಚಿ (ನ.03): 2020ರ ಮಾರ್ಚ್’ನಲ್ಲಿ ಟಿ20 ಸರಣಿ ಆಡು​ವು​ದ​ಕ್ಕಾಗಿ ದಕ್ಷಿಣ ಆಫ್ರಿಕಾ ತಂಡ​ವನ್ನು ಪಾಕಿ​ಸ್ತಾನ ಕ್ರಿಕೆಟ್‌ ಸಂಸ್ಥೆ (ಪಿಸಿ​ಬಿ) ಆಹ್ವಾ​ನಿ​ಸಿ​ದೆ. ವಿಶ್ವ ಟಿ20 ಟೂರ್ನಿ ತಯಾ​ರಿ​ ನಡೆ​ಸಲು ದಕ್ಷಿಣ ಆಫ್ರಿಕಾ ವಿರುದ್ಧ ತವ​ರಿನ ಸರಣಿ ಆಯೋ​ಜಿ​ಸ​ಲು ಪಾಕಿ​ಸ್ತಾನ ಮುಂದಾ​ಗಿ​ದೆ.

ಇಂಡೋ-ಪಾಕ್ ಚೊಚ್ಚಲ ಪಂದ್ಯ ನಡೆದದ್ದು, ಗೆದ್ದಿದ್ದು..?

‘ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಟೂರ್ನಿಗಳು ಪಾಕಿ​ಸ್ತಾ​ನಕ್ಕೆ ಮರ​ಳ​ಲಿದೆ. ಪಾಕಿಸ್ತಾ​ನದ ಅವ​ಕಾ​ಶ​ಗಳ ಬಾಗಿಲು ತೆರೆ​ದು​ಕೊಂಡಿದೆ. ಇತ್ತೀ​ಚೆಗಿನ ಶ್ರೀಲಂಕಾ ವಿರುದ್ಧದ ತವ​ರಿನ ಟಿ20, ಏಕ​ದಿನ ಸರಣಿ ಬಹಳ ನೆರ​ವಾ​ಯಿ​ತು’ ಎಂದು ಪಿಸಿಬಿ ಸಿಇಒ ವಾಸಿಮ್‌ ಖಾನ್‌ ತಿಳಿ​ಸಿ​ದ​ರು. ಡಿಸೆಂಬ​ರ್‌​ನಲ್ಲಿ ರಾವ​ಲ್ಪಿಂಡಿ ಹಾಗೂ ಕರಾ​ಚಿ​ಯಲ್ಲಿ ಶ್ರೀಲಂಕಾ 2 ಐಸಿಸಿ ಟೆಸ್ಟ್‌ ವಿಶ್ವ ಚಾಂಪಿ​ಯ​ನ್‌​ಶಿಪ್‌ ಪಂದ್ಯ​ಗ​ಳನ್ನೂ ಆಡ​ಲಿದೆಯೆಂಬ ಭರ​ವಸೆ ವ್ಯಕ್ತ​ಪ​ಡಿ​ಸಿ​ದ​ರು.

ನಾಯಕತ್ವದಿಂದ ಸರ್ಫರಾಜ್’ಗೆ ಗೇಟ್ ಪಾಸ್ ನೀಡಿದ ಪಾಕ್..!

ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಪಾಕಿಸ್ತಾನ ತಂಡವನ್ನು ತವರಿನಲ್ಲೇ ಇತ್ತೀಚೆಗೆ ಶ್ರೀಲಂಕಾ ಮಣಿಸಿ ಗೆಲುವಿನ ನಗೆ ಬೀರಿತ್ತು. ಶ್ರೀಲಂಕಾ ತಂಡವು ಬರೋಬ್ಬರಿ ದಶಕಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡು ಸುರಕ್ಷಿತವಾಗಿ ವಾಪಾಸ್ಸಾಗಿತ್ತು. ಇದೀಗ ಹರಿಣಗಳ ಪಡೆಯನ್ನು ಪಾಕ್ ಕ್ರಿಕೆಟ್ ಮಂಡಳಿ ಆಹ್ವಾನಿಸಿದೆ.