2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಪಾಕ್‌ಗೆ
2025ರ ಟೂರ್ನಿಯೂ ಪಾಕಿಸ್ತಾನದಿಂದ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದರೆ ಟೂರ್ನಿಯನ್ನು ಸ್ಥಳಾಂತರಿಸದೆ ಐಸಿಸಿಗೆ ಬೇರೆ ದಾರಿ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ದುಬೈ(ಡಿ.16): 2025ರ ಚಾಂಪಿಯನ್ ಟ್ರೋಫಿ ಆತಿಥ್ಯ ಹಕ್ಕನ್ನು ತಾನು ಪಡೆದುಕೊಂಡಿರುವುದಾಗಿ ಶುಕ್ರವಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಿಳಿಸಿದೆ. ಅಂ.ರಾ. ಕ್ರಿಕೆಟ್ ಸಮಿತಿ (ಐಸಿಸಿ) ಪ್ರಧಾನ ವ್ಯವಸ್ಥಾಪಕ ಜೊನಾಥನ್ ಹಾಲ್ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾಗಿ ಪಿಸಿಬಿ ಮುಖ್ಯಸ್ಥ ಜಾಕಾ ಅಶ್ರಫ್ ತಿಳಿಸಿದ್ದಾರೆ. ಪಾಕಿಸ್ತಾನ ಕೊನೆಯ ಬಾರಿಗೆ ಐಸಿಸಿ ಟೂರ್ನಿಗೆ ಆತಿಥ್ಯ ವಹಿಸಿದ್ದು 1996ರಲ್ಲಿ.
2025ರ ಟೂರ್ನಿಯೂ ಪಾಕಿಸ್ತಾನದಿಂದ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದರೆ ಟೂರ್ನಿಯನ್ನು ಸ್ಥಳಾಂತರಿಸದೆ ಐಸಿಸಿಗೆ ಬೇರೆ ದಾರಿ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಯುವ ಭಾರತಕ್ಕೆ ಬಾಂಗ್ಲಾದೇಶ ಶಾಕ್!
ದುಬೈ: ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್‌ಗೂ ಮುನ್ನ ಭಾರತ ಅಂಡರ್- 19 ತಂಡಕ್ಕೆ ಭಾರಿ ಆಘಾತ ಎದುರಾಗಿದೆ. ಏಷ್ಯಾಕಪ್‌ನ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 4 ವಿಕೆಟ್ ಸೋಲು ಅನುಭವಿಸಿದ ಭಾರತ, ವಿಶ್ವಕಪ್ ಗೂ ಮುನ್ನ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದೆ.
ಐಪಿಎಲ್ ಮಾದರಿಯಲ್ಲಿ ಭಾರತದಲ್ಲಿ ಟಿ10 ಲೀಗ್ ಆರಂಭಿಸುವ ನಿರ್ಧಾರ ಮಾಡಿದ ಬಿಸಿಸಿಐ!
ಶುಕ್ರವಾರದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ಭಾರತ 42.4 ಓವರಲ್ಲಿ 188 ರನ್‌ಗೆ ಆಲೌಟ್ ಆಯಿತು. ಮುರುಗನ್ ಅಭಿಷೇಕ್ (62) ಹಾಗೂ ಮುಷೀರ್ ಖಾನ್ (50) ಹೊರತುಪಡಿಸಿ ಉಳಿದ್ಯಾರೂ ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆರಂಭಿಕ ಆಘಾತದ ಹೊರತಾಗಿಯೂ ಬಾಂಗ್ಲಾದೇಶ 4 ವಿಕೆಟ್ ಉಳಿಸಿಕೊಂಡು ಇನ್ನೂ 7.1 ಓವರ್ ಬಾಕಿ ಇರುವಂತೆ ಜಯ ಸಾಧಿಸಿತು. 34ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಅರಿಫುಲ್ (94) ಹಾಗೂ ಅಹ್ರಾರ್(44) ಆಸರೆಯಾದರು. ಇವರಿಬ್ಬರ ನಡುವೆ 4ನೇ ವಿಕೆಟ್‌ಗೆ 138 ರನ್ ಜೊತೆಯಾಟ ಮೂಡಿಬಂತು.
ಪಾಕ್‌ಗೆ ಸೋಲುಣಿಸಿ ಫೈನಲ್‌ಗೆ ಯುಎಇ!
ಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಯುಎಇ 11 ರನ್‌ಗಳ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಯುಎಇ ನೀಡಿದ್ದ 194 ರನ್ ಗುರಿಯನ್ನು ಬೆನ್ನತ್ತಲು ಇಳಿದ ಪಾಕ್, 182 ರನ್‌ಗೆ ಆಲೌಟ್ ಆಯಿತು. ಭಾನುವಾರ (ಡಿ.17) ಫೈನಲ್‌ನಲ್ಲಿ ಬಾಂಗ್ಲಾದೇಶ-ಯುಎಇ ಟ್ರೋಫಿಗಾಗಿ ಸೆಣಸಲಿವೆ.
ಭಾರತ-ಪಾಕ್ ಟಿ20 ವಿಶ್ವಕಪ್ ಪಂದ್ಯಕ್ಕೆ ನ್ಯೂಯಾರ್ಕ್‌ನಲ್ಲಿ ಸಿದ್ಧತೆ
ನವದೆಹಲಿ: 2024ರ ಟಿ20 ವಿಶ್ವಕಪ್‌ಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಮೊದಲ ಬಾರಿಗೆ ಟೂರ್ನಿಗೆ ಆತಿಥ್ಯ ವಹಿಸಲಿರುವ ಅಮೆರಿಕ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಮೆರಿಕದ 3 ನಗರಗಳಲ್ಲಿ ಪಂದ್ಯಗಳು ನಡೆಯಲಿದ್ದು, ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನದ ಪಂದ್ಯಕ್ಕೆ ನ್ಯೂಯಾರ್ಕ್ ಆತಿಥ್ಯ ವಹಿಸಲಿದೆ.
ಏಕೈಕ ಟೆಸ್ಟ್: ದೀಪ್ತಿ ಶರ್ಮಾ ಆಲ್ರೌಂಡ್ ಆಟ, ಬೃಹತ್ ಜಯದತ್ತ ಭಾರತ ದಾಪುಗಾಲು!
ಇಲ್ಲಿನ ಕ್ರೀಡಾಂಗಣದಲ್ಲಿ 32,000 ಆಸನ ಸಾಮರ್ಥ್ಯವಿರುವ ತಾತ್ಕಾಲಿಕ ಪ್ರೇಕ್ಷಕರ ಗ್ಯಾಲರಿಯನ್ನು ಅಮೆರಿಕದ ಕ್ರಿಕೆಟ್ ಸಂಸ್ಥೆ ಸಿದ್ಧಪಡಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನ್ಯೂಯಾರ್ಕ್‌ನಲ್ಲಿ 7 ಲಕ್ಷಕ್ಕೂ ಹೆಚ್ಚು ಭಾರತೀಯ ಮೂಲದವರಿದ್ದು, 1 ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿಯರಿದ್ದಾರೆ. ಈ ಕಾರಣಕ್ಕೆ ಭಾರತ-ಪಾಕ್ ಪಂದ್ಯವನ್ನು ನ್ಯೂಯಾರ್ಕ್‌ನಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ