ಏಕೈಕ ಟೆಸ್ಟ್: ದೀಪ್ತಿ ಶರ್ಮಾ ಆಲ್ರೌಂಡ್ ಆಟ, ಬೃಹತ್‌ ಜಯದತ್ತ ಭಾರತ ದಾಪುಗಾಲು!

ಮೊದಲ ಇನ್ನಿಂಗ್ಸಲ್ಲಿ 67 ರನ್‌ ಗಳಿಸಿ, ಭಾರತ 428 ರನ್‌ ಕಲೆಹಾಕಲು ನೆರವಾದ ದೀಪ್ತಿ, ಬಳಿಕ 5.3 ಓವರಲ್ಲಿ 4 ಮೇಡನ್‌ ಸಹಿತ ಕೇವಲ 7 ರನ್‌ ನೀಡಿ 5 ವಿಕೆಟ್‌ ಕಬಳಿಸಿ ಇಂಗ್ಲೆಂಡ್ 136 ರನ್‌ಗೆ ಆಲೌಟ್‌ ಆಗಲು ಕಾರಣರಾದರು. ಇದರಿಂದಾಗಿ ಭಾರತ ಮೊದಲ ಇನ್ನಿಂಗ್ಸಲ್ಲಿ 292 ರನ್‌ಗಳ ದೊಡ್ಡ ಮುನ್ನಡೆ ಪಡೆಯಿತು.

India Women vs England Women One Off Test India Aim To Keep England Under Pressure kvn

ನವಿ ಮುಂಬೈ(ಡಿ.16): ದೀಪ್ತಿ ಶರ್ಮಾ ಅವರ ಆಲ್ರೌಂಡ್‌ ಪ್ರದರ್ಶನದ ನೆರವಿನಿಂದ ಭಾರತ ಮಹಿಳಾ ತಂಡ, ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಚೊಚ್ಚಲ ಟೆಸ್ಟ್‌ ಗೆಲುವಿನತ್ತ ದಾಪುಗಾಲಿರಿಸಿದೆ. ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್‌ನಲ್ಲಿ ಭಾರತ 2ನೇ ಇನ್ನಿಂಗ್ಸಲ್ಲಿ 478 ರನ್‌ಗಳ ಬೃಹತ್‌ ಮುನ್ನಡೆ ಪಡೆದಿದ್ದು, ಇಂಗ್ಲೆಂಡ್‌ಗೆ ಕೈಗೆಟುಕದಂತಹ ಗುರಿ ನೀಡುವಷ್ಟು ಸುಸ್ಥಿತಿಯಲ್ಲಿದೆ.

ಮೊದಲ ಇನ್ನಿಂಗ್ಸಲ್ಲಿ 67 ರನ್‌ ಗಳಿಸಿ, ಭಾರತ 428 ರನ್‌ ಕಲೆಹಾಕಲು ನೆರವಾದ ದೀಪ್ತಿ, ಬಳಿಕ 5.3 ಓವರಲ್ಲಿ 4 ಮೇಡನ್‌ ಸಹಿತ ಕೇವಲ 7 ರನ್‌ ನೀಡಿ 5 ವಿಕೆಟ್‌ ಕಬಳಿಸಿ ಇಂಗ್ಲೆಂಡ್ 136 ರನ್‌ಗೆ ಆಲೌಟ್‌ ಆಗಲು ಕಾರಣರಾದರು. ಇದರಿಂದಾಗಿ ಭಾರತ ಮೊದಲ ಇನ್ನಿಂಗ್ಸಲ್ಲಿ 292 ರನ್‌ಗಳ ದೊಡ್ಡ ಮುನ್ನಡೆ ಪಡೆಯಿತು.

ಫಾಲೋ ಆನ್‌ ಹೇರದ ಭಾರತ, 2ನೇ ಇನ್ನಿಂಗ್ಸ್‌ ಆರಂಭಿಸಿ 2ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 186 ರನ್‌ ಕಲೆಹಾಕಿತು. 2ನೇ ದಿನ ಬರೋಬ್ಬರಿ 19 ವಿಕೆಟ್‌ ಪತನಗೊಂಡವು. ಇದರಲ್ಲಿ 15 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾದವು.

ಐಪಿಎಲ್‌ ಮಾದರಿಯಲ್ಲಿ ಭಾರತದಲ್ಲಿ ಟಿ10 ಲೀಗ್‌ ಆರಂಭಿಸುವ ನಿರ್ಧಾರ ಮಾಡಿದ ಬಿಸಿಸಿಐ!

ಪಂದ್ಯದಲ್ಲಿ ಇನ್ನೂ 2 ದಿನ ಬಾಕಿ ಇದ್ದು, ಭಾರತ ದೊಡ್ಡ ಗೆಲುವಿನ ಮೇಲೆ ಕಣ್ಣಿಟ್ಟಿದೆ. 3ನೇ ದಿನವಾದ ಶನಿವಾರವೇ ಪಂದ್ಯ ಮುಕ್ತಾಯಗೊಂಡರೂ ಅಚ್ಚರಿಯಿಲ್ಲ.

ಸ್ಕೋರ್‌: 
ಭಾರತ 428 ಹಾಗೂ 186/6 (ಹರ್ಮನ್‌ಪ್ರೀತ್‌ 44*, ಶಫಾಲಿ 33, ಡೀನ್‌ 4-68), 
ಇಂಗ್ಲೆಂಡ್‌ 136/10 (ಸ್ಕೀವರ್‌ 59, ದೀಪ್ತಿ 5-7, ಸ್ನೇಹ 2-25)

ಐಪಿಎಸ್‌ ಅಧಿಕಾರಿ ವಿರುದ್ಧ ಕೇಸಲ್ಲಿ ಧೋನಿಗೆ ಜಯ!

ಚೆನ್ನೈ: ಐಪಿಎಸ್‌ ಅಧಿಕಾರಿ ಸಂಪತ್‌ ಕುಮಾರ್‌ ವಿರುದ್ಧದ ಕೇಸ್‌ನಲ್ಲಿ ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂ.ಎಸ್‌.ಧೋನಿಗೆ ಜಯ ಸಿಕ್ಕಿದೆ. ಸಂಪತ್‌ಗೆ ಮದ್ರಾಸ್‌ ಹೈಕೋರ್ಟ್ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ.

ಧೋನಿ ಜರ್ಸಿ ನಂಬರ್ ಯಾರಿಗೂ ಲಭ್ಯವಿಲ್ಲ, ನಂ.7ಗೆ ನಿವೃತ್ತಿ ಘೋಷಿಸಿದ ಬಿಸಿಸಿಐ!

ಏನಿದು ಪ್ರಕರಣ?: 2013ರ ಐಪಿಎಲ್‌ ಬೆಟ್ಟಿಂಗ್‌ ಪ್ರಕರಣದ ಪ್ರಾಥಮಿಕ ತನಿಖೆ ನಡೆದಿದ್ದ ಸಂಪತ್‌ ಮಾಧ್ಯಮವೊಂದರ ಸಂದರ್ಶನದಲ್ಲಿ ಧೋನಿ ವಿರುದ್ಧವೂ ಆರೋಪ ಮಾಡಿದ್ದರು. ಈ ಸಂಬಂಧ ಕೋರ್ಟ್‌ ಮೆಟ್ಟಿಲೇರಿ ಧೋನಿ ತಮ್ಮ ವಿರುದ್ಧ ಅಪಪ್ರಚಾರ ಮಾಡದಂತೆ ತಡೆಯಾಜ್ಞೆ ತಂದಿದ್ದರು. ಆದರೂ ಸಂಪತ್‌ ಕೆಲ ಲಿಖಿತ ಹೇಳಿಕೆಗಳಲ್ಲಿ ಧೋನಿ ಬಗ್ಗೆ ಉಲ್ಲೇಖಿಸಿದ್ದು ಮಾತ್ರವಲ್ಲದೇ ಮಾಧ್ಯಮಗಳಲ್ಲೂ ಮಾತನಾಡಿದ್ದರು. ಈ ಸಂಬಂಧ ಸಂಪತ್‌ ವಿರುದ್ಧ ಧೋನಿ, ನ್ಯಾಯಾಂಗ ನಿಂದನೆ ಕೇಸ್‌ ಹಾಕಿದ್ದರು. ಆ ಕೇಸಲ್ಲಿ ತೀರ್ಪು ಧೋನಿ ಪರ ಬಂದಿದೆ.

Latest Videos
Follow Us:
Download App:
  • android
  • ios