ಮೊದಲ ನಾಲ್ಕು ಪಂದ್ಯಗಳಲ್ಲಿ ಅದ್ಭುತವಾಗಿ ಗೆದ್ದಿರುವ ಭಾರತ ತಂಡ ಭಾನುವಾರ ಧರ್ಮಶಾಲಾದಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ. ಅದಕ್ಕೂ ಮುನ್ನ ತಂಡಕ್ಕೆ ಡಬಲ್‌ ಇಂಜುರಿ ಶಾಕ್‌ ಎದುರಾಗಿದೆ.

ಧರ್ಮಶಾಲಾ (ಅ.21): ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿರುವ ಟೀಮ್‌ ಇಂಡಿಯಾ ಮೊದಲ ನಾಲ್ಕು ಪಂದ್ಯದಲ್ಲಿ ಅದ್ಭುತ ನಿರ್ವಹಣೆ ತೋರುವ ಮೂಲಕ ಏಕಪಕ್ಷೀಯ ಗೆಲುವು ಕಂಡಿದೆ. ತನ್ನ ಐದನೇ ಪಂದ್ಯವಾಡುವ ನಿಟ್ಟಿನಲ್ಲಿ ಟೀಮ್‌ ಇಂಡಿಯಾ ಈಗಾಗಲೇ ಹಿಮಾಚಲ ಪ್ರದೇಶದ ಧರ್ಮಶಾಲಾಗೆ ಆಗಮಿಸಿದೆ. ಭಾನುವಾರ ಇಲ್ಲಿನ ಮೈದಾನದಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಇನ್ನೊಂದು ಟೀಮ್‌ ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ. ಈಗಾಗಲೇ ಹಾರ್ದಿಕ್‌ ಪಾಂಡ್ಯ ಮೊಣಕಾಲು ಗಾಯದ ಕಾರಣದಿಂದಾಗಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರ ನಡುವೆ ಶನಿವಾರ ಅಭ್ಯಾಸದ ಅವಧಿಯಲ್ಲಿ ತಂಡದ ಮತ್ತಿಬ್ಬರು ಆಟಗಾರರಿಗೆ ಗಾಯವಾಗಿದೆ. ವಿರಾಟ್‌ ಕೊಹ್ಲಿಗೂ ಕೂಡ ಬಲಗಾಲಿನ ತೊಡೆಗೆ ಚೆಂಡು ಬಡಿದು ಗಾಯವಾಗಿದೆ. ಆದರೆ, ಅವರು ಈಗಾಗಲೇ ಚೇತರಿಸಿಕೊಂಡಿದ್ದು, ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಆದರೆ, ಉಳಿದ ಇಬ್ಬರು ಆಟಗಾರರ ಲಭ್ಯತೆಯ ಬಗ್ಗೆ ಇನ್ನೂ ಅನುಮಾನಗಳಿವೆ. ಡಬಲ್‌ ಶಾಕ್‌ನಿಂದ ತಂಡ ಯಾವ ರೀತಿಯಲ್ಲಿ ಚೇತರಿಸಿಕೊಳ್ಳಲಿದೆ ಎನ್ನುವ ಕುತೂಹಲವಿದೆ.

ಶನಿವಾರ ತಂಡದ ಅಭ್ಯಾಸ ಅವಧಿಯ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌ ತಮ್ಮ ಬಲಗೈ ಮಣಿಕಟ್ಟಿಗೆ ಬಲವಾದ ಪೆಟ್ಟು ತಿಂದಿದ್ದಾರೆ. ಬೌಲಿಂಗ್‌ ಥ್ರೋಡೌನ್‌ ಸ್ಪೆಷಲಿಸ್ಟ್‌ ರಘು ಅವರ ಎಸೆತಗಳನ್ನು ಎದುರಿಸುವ ವೇಳೆ, ಚೆಂಡು ಬಿದ್ದು ಗಾಯವಾಗಿದ್ದು ಸೂರ್ಯಕುಮಾರ್‌ ಯಾದವ್‌ ತಮ್ಮ ಮಣಿಕಟ್ಟಿಗೆ ಬ್ಯಾಂಡೇಜ್‌ಅನ್ನೂ ಕಟ್ಟಿಕೊಂಡಿದ್ದಾರೆ. ಇನ್ನೊಂದೆಡೆ ಇಶಾನ್‌ ಕಿಶನ್‌ ಬ್ಯಾಟಿಂಗ್‌ ಮಾಡುವ ವೇಳೆ ಜೇನುಹಳ ಮುಖಕ್ಕೆ ಕಚ್ಚಿ ಗಾಯಗೊಂಡಿದ್ದಾರೆ.

ಶನಿವಾರ ಸಂಜೆ ಥ್ರೋಡೌನ್‌ ಸ್ಪೆಷಲಿಷ್ಟ್‌ ಜೊತೆ ಸೂರ್ಯಕುಮಾರ್‌ ಯಾದವ್‌ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಚೆಂಡು ಬಲವಾಗಿ ಅವರ ಮೊಣಕೈಗೆ ಬಡಿದಿದೆ. ತಕ್ಷಣವೇ ತಮ್ಮ ಮೊಣಕೈಗೆ ಅವರು ಬ್ಯಾಂಡೇಜ್‌ ಕಟ್ಟಿಕೊಂಡಿದ್ದಲ್ಲದೆ, ನಗುತ್ತಲೇ ನೆಟ್ಸ್‌ ಅಭ್ಯಾಸದಿಂದ ಹೊರನಡೆದಿದ್ದಾರೆ. ಇದರಿಂದಾಘು ನ್ಯೂಜಿಲೆಂಡ್‌ ವಿರುದ್ಧ ಇವರಿಬ್ಬರೂ ಪಂದ್ಯ ಆಡೋದು ಸದ್ಯದ ಪರಿಸ್ಥಿತಿಯಲ್ಲಿ ಅನುಮಾನವಾಗಿದೆ. ಆದರೆ, ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.

ಸ್ಟಾರ್‌ ಆಲ್ರೌಂಡರ್‌ ಈಗಾಗಲೇ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇವರ ಸ್ಥಾನದಲ್ಲಿ ಇಶಾನ್‌ ಕಿಶನ್‌ ಅಥವಾ ಸೂರ್ಯಕುಮಾರ್‌ ಯಾದವ್‌ ಅವರನ್ನು ಆಡಿಸುವ ಇರಾದೆಯಲ್ಲಿ ಟೀಮ್‌ ಇಂಡಿಯಾ ಮ್ಯಾನೇಜ್‌ಮೆಂಟ್‌ ಇತ್ತು. ಅದರ ನಡುವೆ ಇವರಿಬ್ಬರೂ ಗಾಯಗೊಂಡಿರುವ ಕಾರಣ ತಂಡದ ಪ್ಲೇಯಿಂಗ್‌ ಇಲೆವೆನ್‌ ಆಯ್ಕೆ ಕಷ್ಟವಾಗಬಹುದು ಎನ್ನಲಾಗಿದೆ.

ಪಂದ್ಯಕ್ಕೂ ಮುನ್ನ ಕೋಚ್ ರಾಹುಲ್ ದ್ರಾವಿಡ್ ಅವರು ಪತ್ರಿಕಾಗೋಷ್ಠಿಯಲ್ಲಿ ಪಾಂಡ್ಯ ಬಗ್ಗೆ ಅಪ್‌ಡೇಟ್ ನೀಡಿದರು. ಹಾರ್ದಿಕ್ ಪಾಂಡ್ಯ ನಮಗೆ ಪ್ರಮುಖ ಆಟಗಾರ, ಅವರು ಆಡುವ -11 ರಲ್ಲಿ ಉತ್ತಮ ಸಮತೋಲನವನ್ನು ಸೃಷ್ಟಿಸುತ್ತಾರೆ. ನಾವು ಅತ್ಯುತ್ತಮ ಪ್ಲೇಯಿಂಗ್-11 ಅನ್ನು ಆಯ್ಕೆ ಮಾಡಲು ಕೆಲಸ ಮಾಡುತ್ತೇವೆ. ನಾವು ಕೇವಲ 14 ಆಟಗಾರರನ್ನು ಹೊಂದಿದ್ದೇವೆ, ಅವರ ಸುತ್ತ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದಿದ್ದಾರೆ.

ನಮ್ಮ ದೇಶದ ನೀರೇ ಕುಡಿಯಲ್ವಾ ವಿರಾಟ್ ಕೊಹ್ಲಿ? ಒಂದು ಲೀಟರ್ ಆ ನೀರಿನ ಬೆಲೆ ಎಷ್ಟು ಗೊತ್ತಾ?

ಪಾಂಡ್ಯ ಅವರ ಅಲಭ್ಯತೆ ನಮ್ಮ ಅತ್ಯುತ್ತಮ ಆಟ-11ರ ಮೇಲೂ ಪರಿಣಾಮ ಬೀರಲಿದೆ ಎಂದು ಕೋಚ್ ದ್ರಾವಿಡ್ ಹೇಳಿದ್ದಾರೆ. ಕಳೆದ 4 ಪಂದ್ಯಗಳಲ್ಲಿ ಇದ್ದಂತೆ ಇರುವುದಿಲ್ಲ. ಬಾಂಗ್ಲಾದೇಶ ವಿರುದ್ಧದ ಕೊನೆಯ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಪಾಂಡ್ಯ ಅವರ ಮೊಣಕಾಲಿಗೆ ಗಾಯಮಾಡಿಕೊಂಡು ಪಂದ್ಯದಿಂದ ಹೊರನಡೆದಿದ್ದರು.

ವಿರಾಟ್ ಕೊಹ್ಲಿ ಶತಕಕ್ಕೆ ಮುನ್ನ ಅಂಪೈರ್ ವೈಡ್‌ ಕೊಡಲಿಲ್ಲವೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ