Asianet Suvarna News Asianet Suvarna News

ವಿರಾಟ್ ಕೊಹ್ಲಿ ಶತಕಕ್ಕೆ ಮುನ್ನ ಅಂಪೈರ್ ವೈಡ್‌ ಕೊಡಲಿಲ್ಲವೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಕಳೆದ ವರ್ಷ ಐಸಿಸಿ ವೈಡ್‌ ನಿಯಮದಲ್ಲಿ ಕೆಲ ಬದಲಾವಣೆ ಮಾಡಿತ್ತು. ವೈಡ್ ಡಿಕ್ಲೇರ್‌ಗೂ ಮುನ್ನ ಫೀಲ್ಡ್ ಅಂಪೈರ್ ಬ್ಯಾಟರ್‌ ಇರುವ ಸ್ಥಾನವನ್ನೂ ಗಣನೆಗೆ ತೆಗೆದುಕೊಳ್ಳುತ್ತಾರೆ. ವಿಕೆಟ್‌ನಿಂದ ಚೆಂಡಿನ ಅಂತರವನ್ನು ಪರಿಗಣಿಸಿ ವೈಡ್ ಬಳಿಕ ವೈಡ್‌ ಎಂದು ಘೋಷಿಸಲಾಗುತ್ತದೆ. ಇದೇ ಕಾರಣಕ್ಕೆ ಕೊಹ್ಲಿ ಬ್ಯಾಟಿಂಗ್‌ ವೇಳೆ ಅಂಪೈರ್‌ ವೈಡ್‌ ನೀಡಲ್ಲ ಎಂದು ತಿಳಿದುಬಂದಿದೆ.

ICC World Cup Here is why Richard Kettleborough did not rule Nasum Ahmed delivery to Virat Kohli wide kvn
Author
First Published Oct 21, 2023, 12:10 PM IST

ಪುಣೆ(ಅ.21): ವಿಶ್ವಕಪ್‌ನ ಗುರುವಾರದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ವಿರಾಟ್‌ ಕೊಹ್ಲಿ ಶತಕದ ಸನಿಹದಲ್ಲಿದ್ದಾಗ ಅಂಪೈರ್‌ ವೈಡ್‌ ನೀಡದೆ ಇರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಅಂಪೈರ್‌ ಕೊಹ್ಲಿಗೆ ಶತಕವನ್ನು ಪೂರ್ಣಗೊಳಿಸಲು ಸಹಕರಿಸಿದರು ಎಂಬ ಟೀಕೆಗೆ ಗುರಿಯಾಗಿದ್ದಾರೆ. ಆದರೆ ವೈಡ್‌ ಕರೆ ಬಗ್ಗೆ ನಿಯಮದಲ್ಲಿ ಬದಲಾವಣೆಯಾಗಿದ್ದು, ಇದೇ ಕಾರಣಕ್ಕೆ ಅಂಪೈರ್‌ ವೈಡ್‌ ನೀಡಿಲ್ಲ ಎಂದು ಗೊತ್ತಾಗಿದೆ.

ಭಾರತ ಪಂದ್ಯ ಗೆಲ್ಲಲು ಕೇವಲ ಎರಡು ರನ್ ಅಗತ್ಯವಿದ್ದಾಗ, ವಿರಾಟ್ ಕೊಹ್ಲಿ ಶತಕ ಪೂರೈಸಲು ಮೂರು ರನ್ ಅಗತ್ಯವಿತ್ತು. ಈ ವೇಳೆ ಬೌಲಿಂಗ್ ಮಾಡಿದ ಸ್ಪಿನ್ನರ್ ನಸುಮ್ ಅಹಮ್ಮದ್ ಚೆಂಡನ್ನು ಲೆಗ್‌ ಸೈಡ್‌ನತ್ತ ಎಸೆದರು. ಆದರೆ ಅಂಪೈರ್ ವೈಡ್ ನೀಡಲಿಲ್ಲ. ಇದಾದ ಬಳಿಕ ಎರಡನೇ ಎಸೆತದಲ್ಲಿ ಕೊಹ್ಲಿ ರನ್ ಗಳಿಸಲಿಲ್ಲ. ಇನ್ನು ಮೂರನೇ ಎಸೆತವನ್ನು ವಿರಾಟ್ ಕೊಹ್ಲಿ ಸಿಕ್ಸರ್‌ಗಟ್ಟುವ ಮೂಲಕ ಶತಕ ಪೂರೈಸುವಲ್ಲಿ ಯಶಸ್ವಿಯಾದರು.

ಕಳೆದ ವರ್ಷ ಐಸಿಸಿ ವೈಡ್‌ ನಿಯಮದಲ್ಲಿ ಕೆಲ ಬದಲಾವಣೆ ಮಾಡಿತ್ತು. ವೈಡ್ ಡಿಕ್ಲೇರ್‌ಗೂ ಮುನ್ನ ಫೀಲ್ಡ್ ಅಂಪೈರ್ ಬ್ಯಾಟರ್‌ ಇರುವ ಸ್ಥಾನವನ್ನೂ ಗಣನೆಗೆ ತೆಗೆದುಕೊಳ್ಳುತ್ತಾರೆ. ವಿಕೆಟ್‌ನಿಂದ ಚೆಂಡಿನ ಅಂತರವನ್ನು ಪರಿಗಣಿಸಿ ವೈಡ್ ಬಳಿಕ ವೈಡ್‌ ಎಂದು ಘೋಷಿಸಲಾಗುತ್ತದೆ. ಇದೇ ಕಾರಣಕ್ಕೆ ಕೊಹ್ಲಿ ಬ್ಯಾಟಿಂಗ್‌ ವೇಳೆ ಅಂಪೈರ್‌ ವೈಡ್‌ ನೀಡಲ್ಲ ಎಂದು ತಿಳಿದುಬಂದಿದೆ.

ಸಚಿನ್ ದಾಖಲೆ ಸರಿಗಟ್ಟಲು ಕೊಹ್ಲಿಗೆ ಬೇಕಿದೆ ಇನ್ನೊಂದು ಶತಕ..!

ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 48ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಕ್ರಿಕೆಟ್ ದಂತಕಥೆ ಸಚಿನ್‌ ತೆಂಡುಲ್ಕರ್ 49 ಶತಕ ಸಿಡಿಸಿದ್ದಾರೆ. ಇದೀಗ ಸಚಿನ್ ದಾಖಲೆ ಸರಿಗಟ್ಟಲು ವಿರಾಟ್ ಕೊಹ್ಲಿಗೆ ಕೇವಲ ಇನ್ನೊಂದು ಶತಕದ ಅಗತ್ಯವಿದೆ.

ಡೆನ್ಮಾರ್ಕ್‌ ಓಪನ್‌ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಸೆಮೀಸ್‌ಗೆ ಲಗ್ಗೆ

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ವಿರಾಟ್ ಕೊಹ್ಲಿ ಬಾರಿಸಿದ 78ನೇ ಶತಕವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.

ವನಿತಾ ಟಿ20: ರಾಜ್ಯಕ್ಕೆ ಸತತ 2ನೇ ಗೆಲುವು

ವಡೋದರ: ರಾಷ್ಟ್ರೀಯ ಮಹಿಳಾ ಟಿ20 ಟೂರ್ನಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿದೆ. ಶುಕ್ರವಾರ ನಡೆದ ಮೇಘಾಲಯ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಜಯಿಸಿತು. ಮೊದಲು ಬ್ಯಾಟ್‌ ಮಾಡಿದ ಮೇಘಾಲಯ 12.2 ಓವರಲ್ಲಿ 41 ರನ್‌ಗೆ ಆಲೌಟ್‌ ಆಯಿತು. ತಂಡದ ಯಾರೊಬ್ಬರೂ ಎರಡಂಕಿ ಮೊತ್ತ ತಲುಪಲಿಲ್ಲ. ಪುಷ್ಪಾ 3 ವಿಕೆಟ್‌ ಕಿತ್ತರು. ರಾಜ್ಯ ತಂಡ 7.3 ಓವರಲ್ಲಿ ವಿಕೆಟ್‌ ನಷ್ಟವಿಲ್ಲದೆ 43 ರನ್‌ ಗಳಿಸಿತು. ಕರ್ನಾಟಕ ಮುಂದಿನ ಪಂದ್ಯವನ್ನು ಅ.22ರಂದು ಉತ್ತರ ಪ್ರದೇಶ ವಿರುದ್ಧ ಆಡಲಿದೆ.

ವಿರಾಟ್ ಕೊಹ್ಲಿ ಸ್ವಾರ್ಥಿ ನಾ? ಶತಕದ ಹಿಂದಿನ ಸೀಕ್ರೇಟ್ ಬಿಚ್ಚಿಟ್ಟ ಕನ್ನಡಿಗ ಕೆ ಎಲ್ ರಾಹುಲ್..!

ಮುಷ್ತಾಕ್‌ ಅಲಿ ಟಿ20: ರಾಜ್ಯಕ್ಕಿಂದು ಡೆಲ್ಲಿ ಸವಾಲು

ಡೆಹ್ರಾಡೂನ್‌: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕಕ್ಕೆ ಶನಿವಾರ ಬಲಿಷ್ಠ ಡೆಲ್ಲಿ ತಂಡದ ಸವಾಲು ಎದುರಾಗಲಿದೆ. ತಮಿಳುನಾಡು ವಿರುದ್ಧದ ಪಂದ್ಯ ಮಳೆಗೆ ಬಲಿಯಾದ ಬಳಿಕ, 2ನೇ ಪಂದ್ಯದಲ್ಲಿ ಮಧ್ಯಪ್ರದೇಶವನ್ನು ಸುಲಭವಾಗಿ ಬಗ್ಗುಬಡಿದಿತ್ತು. ಡೆಲ್ಲಿ ಸಹ ಉತ್ತಮ ಲಯದಲ್ಲಿದ್ದು, ಅಜೇಯವಾಗಿ ಉಳಿದಿದೆ. ಮೊದಲ ಪಂದ್ಯ ಮಳೆಗೆ ಬಲಿಯಾದ ಬಳಿಕ, ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದು ‘ಇ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

ರಾಜ್ಯ ತಂಡದಲ್ಲಿ ಮಯಾಂಕ್‌, ಮನೀಶ್‌, ಪಡಿಕ್ಕಲ್‌, ಪ್ರಸಿದ್ಧ್‌ ಸೇರೆ ತಾರಾ ಆಟಗಾರರ ದಂಡೇ ಇದ್ದು, ಡೆಲ್ಲಿ ತಂಡವನ್ನು ಯುವ ಆಟಗಾರ ಯಶ್‌ ಧುಳ್‌ ಮುನ್ನಡೆಸುತ್ತಿದ್ದಾರೆ. ನಾಕೌಟ್‌ ರೇಸ್‌ನಲ್ಲಿ ಉಳಿಯುವ ದೃಷ್ಟಿಯಿಂದ ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯ ಎನಿಸಿದೆ.

Follow Us:
Download App:
  • android
  • ios