Asianet Suvarna News Asianet Suvarna News

NZ vs IND 2ನೇ ಟಿ20 ಪಂದ್ಯಕ್ಕೆ ಮಳೆ ಭೀತಿ, ಇಲ್ಲಿದೆ ಹವಾಮಾನ ವರದಿ!

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಪಂದ್ಯ ಮೌಂಟ್ ಮೌಂಗುನಯಿನಲ್ಲಿ ನಡೆಯಲಿದೆ. ಇದೀಗ ಎರಡನೇ ಪಂದ್ಯಕ್ಕೂ ಮಳೆ ಅಡ್ಡಿಯಾಗುತ್ತಾ? ಈ ಕುರಿತು ನ್ಯೂಜಿಲೆಂಡ್ ಹವಾಮಾನ ಇಲಾಖೆ ಹೇಳುವುದೇನು?
 

NZ vs IND possibility of rain to interrupt 2nd t20 match Mount Maunganui more than 50 percent chance disrupt game ckm
Author
First Published Nov 19, 2022, 5:05 PM IST

ಮೌಂಟ್ ಮೌಂಗುನಯಿ(ನ.19): ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಬಳಿಕ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾಗೆ ನಿರಾಸೆಗಳೇ ಹೆಚ್ಚಾಗಿದೆ. ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ. ಇದೀಗ ಎರಡನೇ ಪಂದ್ಯಕ್ಕೆ ಕುತೂಹಲ ಹೆಚ್ಚಾಗಿದೆ. ನಾಳೆ(ನ.20) ಮೌಂಟ್ ಮೌಂಗುನಯಿಯಲ್ಲಿ ಎರಡನೇ ಟಿ20 ಪಂದ್ಯ ಆಯೋಜಿಸಲಾಗಿದೆ. ಆದರೆ ಎರಡನೇ ಪಂದ್ಯಕ್ಕೂ ಇದೀಗ ಮಳೆ ಕಾಟ ಹೆಚ್ಚಾಗಿದೆ. ಈಗಾಗಲೇ ಮೌಂಟ್ ಮೌಂಗುನಯಿಗೆ ಆಗಮಿಸಿದ ಟೀಂ ಇಂಡಿಯಾ ಅಭ್ಯಾಸದಲ್ಲಿ ತೊಡಗಿದೆ. ಆದರೆ ಸುತ್ತ ಮುತ್ತ ದಟ್ಟ ಕಾರ್ಮೋಡ ಆವರಿಸಿದೆ. ನ್ಯೂಜಿಲೆಂಡ್ ಹವಾಮಾನ ಇಲಾಖೆ ವರದಿ ಪ್ರಕಾರ ದ್ವಿತೀಯ ಪಂದ್ಯಕ್ಕೆ ಮಳೆ ಸಾಧ್ಯತೆ ಶೇಕಡಾ 50ಕ್ಕಿಂತ ಹೆಚ್ಚು ಎಂದಿದೆ. 

ವೆಲ್ಲಿಂಗ್ಟನ್‌ನಲ್ಲಿ ಮಳೆಯಿಂದಾಗಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ರದ್ದಾಗಿದೆ. ನ್ಯೂಜಿಲೆಂಡ್‌ನ ಬಹುತೇಕ ಕಡೆಗಳಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಟಿ20 ಸರಣಿ ಹಾಗೂ ಬಳಿಕ ನಡೆಯಲಿರುವ ಏಕದಿನ ಸರಣಿಗೆ ಅಡ್ಡಿಯಾವುವುದರಲ್ಲಿ ಯಾವುದೇ ಅನುಮಾನವಿಲ್ಲ. ಎರಡನೇ ಟಿ20 ಪಂದ್ಯಕ್ಕೆ ಮಳೆ ಭೀತಿ ಆವರಿಸಿರುವುದು ಟೀಂ ಇಂಡಿಯಾ ಆತಂಕ ಹೆಚ್ಚಿಸಿದೆ. 

ತೌರಂಗಾಗೆ ಆಗಮಿಸಿದ ಟೀಂ ಇಂಡಿಯಾಗೆ ನ್ಯೂಜಿಲೆಂಡ್‌ನ ಸಾಂಪ್ರದಾಯಿಕ ಪೌಹಿರಿ ಸ್ವಾಗತ!

ಭಾರತ ಟಿ20 ಕ್ರಿಕೆಟ್‌ನ ಭವಿಷ್ಯ ತಜ್ಞ ಆಟಗಾರರು ಹಾಗೂ ಆಕ್ರಮಣಕಾರಿ ಆಟದ ಮೇಲೆ ಅವಲಂಬಿತವಾಗಿದೆ ಎಂದು ಹಂಗಾಮಿ ಕೋಚ್‌ ವಿವಿಎಸ್‌ ಲಕ್ಷ್ಮಣ್‌ ಹೇಳಿದ್ದಾರೆ. ಈ ಸರಣಿಯಲ್ಲಿ ಭಾರತ ತಂಡದ ಆಡಳಿತ ಆಯ್ಕೆ ಮಾಡುವ ಆಟಗಾರರು ಹಾಗೂ ಆ ಆಟಗಾರರ ಆಟದ ಶೈಲಿ ಮೇಲೆ ಎಲ್ಲರ ಕಣ್ಣಿದೆ.

ಭಾರತ ತಂಡ ಈ ಸರಣಿಯಲ್ಲಿ ಹೊಸ ಆರಂಭಿಕ ಜೋಡಿಯೊಂದಿಗೆ ಕಣಕ್ಕಿಳಿಯಲಿದೆ. ಆರಂಭಿಕರಾಗಿ ಇಶಾನ್‌ ಕಿಶನ್‌, ಶುಭ್‌ಮನ್‌ ಗಿಲ್‌ ಆಡುವ ಸಾಧ್ಯತೆ ಇದೆಯಾದರೂ, ರಿಷಭ್‌ ಪಂತ್‌ರನ್ನು ಇನ್ನಿಂಗ್‌್ಸ ಆರಂಭಿಸುವಂತೆ ಕೇಳಬಹುದು ಎನ್ನುವ ಚರ್ಚೆಯೂ ನಡೆಯುತ್ತಿದೆ. 3ನೇ ಕ್ರಮಾಂಕಕ್ಕೆ ಸಂಜು ಸ್ಯಾಮ್ಸನ್‌, ಶ್ರೇಯಸ್‌ ಅಯ್ಯರ್‌ ಹಾಗೂ ದೀಪಕ್‌ ಹೂಡಾ ನಡುವೆ ಸ್ಪರ್ಧೆ ಏರ್ಪಡಬಹುದು. ವಿಶ್ವಕಪ್‌ ಪಂದ್ಯಗಳನ್ನು ಡಗೌಟ್‌ನಲ್ಲಿ ಕೂತು ವೀಕ್ಷಿಸಿದ ಯಜುವೇಂದ್ರ ಚಹಲ್‌ಗೆ ಅವಕಾಶ ಸಿಗುವುದು ಬಹುತೇಕ ಖಚಿತ.

ಆಯ್ಕೆ ಸಮಿತಿ ವಜಾ ಬಳಿಕ ಟೀಂ ಇಂಡಿಯಾಗೆ ಸರ್ಜರಿ, ನಾಯಕತ್ವ ಬದಲಾವಣೆಗೆ ಬಿಸಿಸಿಐ ಪ್ಲಾನ್

ಟಿ20 ವಿಶ್ವಕಪ್ ಸೋಲಿನ ಬಳಿಕ ಟೀಂ ಇಂಡಿಯಾ ಕಳಪೆ ಪ್ರದರ್ಶನದ ವಿರುದ್ಧ ಅಭಿಮಾನಿಗಳು ಮಾತ್ರವಲ್ಲ, ಬಿಸಿಸಿಐ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಈಗಾಗಲೇ ಆಯ್ಕೆ ಸಮಿತಿನ್ನು ವಜಾಗೊಳಿಸಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರು ತಮ್ಮ ಸಮಾರ್ಥ್ಯ ಸಾಬೀತುಪಡಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. 

ಶೀಘ್ರ ಪಾಂಡ್ಯಗೆ ಟಿ20 ತಂಡದ ನಾಯಕತ್ವ?
 ಭಾರತ ಟಿ20 ತಂಡದ ನೂತನ ನಾಯಕರಾಗಿ ಹಾರ್ದಿಕ್‌ ಪಾಂಡ್ಯ ನೇಮಕಗೊಳ್ಳುವುದು ಖಚಿತವಾಗಿದ್ದು, 2023ರ ಜನವರಿಯಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಸರಣಿಗೂ ಮೊದಲೇ ಅವರು ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ರೋಹಿತ್‌ ಶರ್ಮಾ ಟಿ20 ನಾಯಕತ್ವ ತೊರೆಯಲಿದ್ದು, 2023ರ ವಿಶ್ವಕಪ್‌ ವರೆಗೂ ಏಕದಿನ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ.
 

Follow Us:
Download App:
  • android
  • ios