ಇಂಗ್ಲೆಂಡ್ ವಿರುದ್ಧ 3ನೇ ಟಿ20 ಗೆದ್ದ ಕಿವೀಸ್
ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯವನ್ನು ನ್ಯೂಜಿಲೆಂಡ್ ತಂಡ ರೋಚಕ ಜಯ ಸಾಧಿಸಿದೆ. ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಕಿವೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
"
ನೆಲ್ಸನ್(ನ.06): ಇಂಗ್ಲೆಂಡ್ ವಿರುದ್ಧದ 3ನೇ ಟಿ20ನಲ್ಲಿ ಆತಿಥೇಯ ನ್ಯೂಜಿಲೆಂಡ್ 14 ರನ್‌ಗಳಿಂದ ಜಯಿಸಿ, 5 ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಪಡೆದಿದೆ.
ಐಪಿಎಲ್ನಲ್ಲಿ ಇನ್ಮುಂದೆ ನೋಬಾಲ್ ಅಂಪೈರ್!
ಮಂಗಳವಾರ ನಡೆದ ಪಂದ್ಯದಲ್ಲಿ ಕಿವೀಸ್ ನೀಡಿದ 181 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 166 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 14 ರನ್‌ಗಳಿಂದ ಆಂಗ್ಲರ ಪಡೆ ಶರಣಾಯಿತು. ಡೇವಿಡ್ ಮಲಾನ್[55] ಹಾಗೂ ಜೇಮ್ಸ್ ವಿನ್ಸ್[49] ಸ್ಫೋಟಕ ಇನಿಂಗ್ಸ್ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ 15 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 139 ರನ್ ಕಲೆಹಾಕಿ ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದ ಇಂಗ್ಲೆಂಡ್ ಆ ಬಳಿಕ ನಾಟಕೀಯ ಕುಸಿತ ಕಂಡಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ಅನುಭವಿ ಆರಂಭಿಕ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್[33], ಕಾಲಿನ್ ಡಿ ಗ್ರಾಂಡ್‌ಹೋಮ್ (55)ರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿತು. ಇಂಗ್ಲೆಂಡ್ ಪರ ಟಾಮ್ ಕರನ್ 2 ವಿಕೆಟ್ ಪಡೆದರೆ, ಸ್ಯಾಮ್ ಕರನ್, ಶಕಿಬ್ ಮಹಮ್ಮದ್, ಪ್ಯಾಟ್ರಿಕ್ ಬ್ರೌನ್ ಹಾಗೂ ಮ್ಯಾಥ್ಯೂ ಪಾರ್ಕಿನ್ಸನ್ ತಲಾ ಒಂದೊಂದು ವಿಕೆಟ್ ಪಡೆದರು
ಸ್ಕೋರ್:
ನ್ಯೂಜಿಲೆಂಡ್ 180/7
ಇಂಗ್ಲೆಂಡ್ 166/7