Asianet Suvarna News Asianet Suvarna News

ಐಪಿ​ಎಲ್‌ನಲ್ಲಿ ಇನ್ಮುಂದೆ ನೋಬಾಲ್‌ ಅಂಪೈರ್‌!

ಮುಂಬರುವ 2020ರ ಐಪಿಎಲ್ ಟೂರ್ನಿಯಲ್ಲಿ ನೋಬಾಲ್‌ ಗಮ​ನಿ​ಸ​ಲೆಂದೇ ಪ್ರತ್ಯೇಕ ಅಂಪೈರ್‌ ನಿಯೋ​ಜಿ​ಸಲು ಬಿಸಿಸಿಐ ತೀರ್ಮಾನಿಸಿದೆ. ಆದರೆ ಪವರ್ ಪ್ಲೇಯರ್ ಈ ಆವೃತ್ತಿಯಲ್ಲಿ ಅಳವಡಿಸಲು ಕಷ್ಟ ಎಂದು ಈ ವಿಚಾರವನ್ನು ಕೈಬಿಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

IPL 2020 to Introduce No Ball Umpire
Author
Mumbai, First Published Nov 6, 2019, 9:58 AM IST

ಮುಂಬೈ(ನ.06): ಭಾರ​ತೀಯ ದೇಸಿ ಕ್ರಿಕೆಟ್‌ ಟೂರ್ನಿ​ಗ​ಳಲ್ಲಿ ಮಾತ್ರವಲ್ಲದೆ ವಿಶ್ವದ ಶ್ರೀಮಂತ ಟಿ20 ಲೀಗ್‌ ಐಪಿ​ಎಲ್‌ನಲ್ಲೂ ಅಂಪೈರ್‌ಗಳಿಂದ ಪದೇ ಪದೇ ಎಡವಟ್ಟು ಆದ ಕಾರಣ, ಭಾರ​ತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಭಾರೀ ಮುಜು​ಗರಕ್ಕೆ ಒಳ​ಗಾ​ಗಿತ್ತು. ಈ ಸಮಸ್ಯೆಗೆ ಪರಿ​ಹಾರ ಕಂಡು​ಕೊ​ಳ್ಳಲು ಬಿಸಿ​ಸಿಐ ಹೊಸ ಯೋಜನೆ ರೂಪಿ​ಸಿದೆ.

ಮಂಗ​ಳ​ವಾರ ಇಲ್ಲಿ ನಡೆದ ಐಪಿ​ಎಲ್‌ ಆಡ​ಳಿತ ಸಮಿತಿ ಸಭೆಯಲ್ಲಿ, 2020ರ ಆವೃತ್ತಿಯಿಂದ ನೋಬಾಲ್‌ ಗಮ​ನಿ​ಸ​ಲೆಂದೇ ಪ್ರತ್ಯೇಕ ಅಂಪೈರ್‌ ನಿಯೋ​ಜಿ​ಸಲು ನಿರ್ಧ​ರಿ​ಸ​ಲಾಯಿತು. ಬ್ರಿಜೇಶ್‌ ಪಟೇಲ್‌ ನೇತೃ​ತ್ವದ ಐಪಿ​ಎಲ್‌ ಆಡ​ಳಿತ ಸಮಿತಿ ನಡೆ​ಸಿದ ಸಭೆಯಲ್ಲಿ ನೋಬಾಲ್‌ ಅಂಪೈರ್‌ ಬಗ್ಗೆ ಚರ್ಚೆ ನಡೆ​ಯಿತು.

ನೋಬಾಲ್‌ ಅಂಪೈರ್‌ ಏಕೆ?

ಕಳೆದ ಆವೃ​ತ್ತಿ​ಯಲ್ಲಿ ಆರ್‌ಸಿಬಿ ವಿರು​ದ್ಧದ ಪಂದ್ಯ​ದಲ್ಲಿ ಮುಂಬೈ ಇಂಡಿ​ಯನ್ಸ್‌ನ ಲಸಿತ್‌ ಮಾಲಿಂಗ ನೋಬಾಲ್‌ ಎಸೆ​ದಿ​ದ್ದ​ರೂ ಅಂಪೈರ್‌ ಅದನ್ನು ಗಮ​ನಿ​ಸಿ​ರ​ಲಿಲ್ಲ. ಆರ್‌ಸಿಬಿ ಪಂದ್ಯ ಸೋಲಿನಲ್ಲಿ ಈ ಘಟನೆ ಪ್ರಮುಖ ಕಾರ​ಣ​ವೆ​ನಿ​ಸಿತು. ಅಂಪೈರ್‌ ಜತೆ ನಾಯಕ ವಿರಾಟ್‌ ಕೊಹ್ಲಿ ವಾಗ್ವಾದ ನಡೆ​ಸಿ​ದ್ದರು. ರಾಜ​ಸ್ಥಾನ ರಾಯಲ್ಸ್‌-ಚೆನ್ನೈ ಸೂಪರ್‌ ಕಿಂಗ್ಸ್‌ ನಡು​ವಿನ ಪಂದ್ಯ​ದಲ್ಲೂ ಇದೇ ರೀತಿ ಪ್ರಸಂಗವೊಂದು ನಡೆ​ದಿತ್ತು. ಚೆನ್ನೈ ನಾಯಕ ಎಂ.ಎಸ್‌.ಧೋನಿ, ಮೈದಾ​ನಕ್ಕೆ ಪ್ರವೇ​ಶಿಸಿ ಅಂಪೈರ್‌ಗಳ ಜತೆ ಜಗ​ಳ​ವಾ​ಡಿ​ದ್ದರು. ಇಂತಹ ಪ್ರಸಂಗಗಳನ್ನು ತಡೆಯಲು ಬಿಸಿ​ಸಿಐ, ನೋಬಾಲ್‌ ಗಮ​ನಿ​ಸ​ಲೆಂದೇ ಪ್ರತ್ಯೇಕ ಅಂಪೈರ್‌ ನಿಯೋ​ಜಿ​ಸಲು ನಿರ್ಧ​ರಿ​ಸಿದೆ.

IPL 2020: ರಾಜಸ್ಥಾನಕ್ಕೆ RCB ಮಾಜಿ ಕ್ರಿಕೆಟಿಗ ಕೋಚ್..!

‘ನೋ​ಬಾಲ್‌ ನೋಡಲು ಪ್ರತ್ಯೇಕ ಅಂಪೈರ್‌ ನೇಮಿ​ಸು​ವುದು ವಿಚಿತ್ರ ಎನಿ​ಸ​ಬ​ಹುದು. ಆದರೆ ಇದರ ಅಗತ್ಯ ತುಂಬಾ ಇದೆ. ನಾವು ತಂತ್ರ​ಜ್ಞಾ​ನ​ದ ಸಹಾಯ ಪಡೆ​ಯಲು ಬಯ​ಸಿ​ದ್ದೇವೆ. 3ನೇ ಹಾಗೂ 4ನೇ ಅಂಪೈರ್‌ ಜತೆ ಮತ್ತೊ​ಬ್ಬರು ಕಾರ್ಯನಿರ್ವ​ಹಿ​ಸ​ಲಿ​ದ್ದಾರೆ’ ಎಂದು ಆಡ​ಳಿತ ಸಮಿತಿ ಸದ​ಸ್ಯ​ರೊ​ಬ್ಬರು ತಿಳಿ​ಸಿ​ದ್ದಾರೆ.ನೋಬಾಲ್‌ ಅಂಪೈರ್‌ ಅನ್ನು ಐಪಿಎಲ್‌ನಲ್ಲಿ ಪರಿಚ​ಯಿ​ಸುವ ಮೊದಲು ದೇಸಿ ಟೂರ್ನಿ​ಗ​ಳಲ್ಲಿ ಪ್ರಯೋ​ಗಿ​ಸಲು ಬಿಸಿ​ಸಿಐ ಚಿಂತನೆ ನಡೆ​ಸಿದೆ. ರಣಜಿ ಟ್ರೋಫಿಯಲ್ಲಿ ನೋಬಾಲ್‌ ಅಂಪೈರ್‌ ಅನ್ನು ನೋಡ​ಬ​ಹುದು ಎಂದು ಬಿಸಿ​ಸಿಐ ಮೂಲ​ಗಳು ತಿಳಿ​ಸಿವೆ.

IPL ಇತಿಹಾಸದಲ್ಲೇ ಹೊಸ ಪ್ರಯೋಗ: ಇನ್ಮುಂದೆ ಪವರ್ ಪ್ಲೇಯರ್ ಆಟ..?

ಪವರ್‌ ಪ್ಲೇಯರ್‌ಗೆ ತಡೆ!

ಐಪಿ​ಎಲ್‌ನಲ್ಲಿ ಪವರ್‌ ಪ್ಲೇಯರ್‌ ಪರಿ​ಕ​ಲ್ಪನೆಯನ್ನು ಪರಿ​ಚ​ಯಿ​ಸ​ಬ​ಹುದು ಎನ್ನುವ ಸುದ್ದಿ ಹಬ್ಬಿತ್ತು. ಈ ಬಗ್ಗೆ ಮಂಗ​ಳ​ವಾರದ ಸಭೆಯಲ್ಲಿ ಚರ್ಚೆಯಾಯಿ​ತಾ​ದರೂ, ಸಮ​ಯದ ಅಭಾವದಿಂದ ಅಳ​ವ​ಡಿಕೆ ಕಷ್ಟಎನ್ನುವ ಕಾರಣ ಪ್ರಸ್ತಾಪ ಕೈಬಿ​ಡ​ಲಾ​ಗಿದೆ. ಐಪಿ​ಎಲ್‌ಗೂ ಮುನ್ನ ಮುಷ್ತಾಕ್‌ ಅಲಿ ಟಿ20 ಟೂರ್ನಿ​ಯಲ್ಲಿ ಈ ಪ್ರಯೋಗ ನಡೆ​ಸಲು ಚಿಂತಿ​ಸ​ಲಾಗಿತ್ತು. ಆದರೆ ಟೂರ್ನಿ ಆರಂಭ​ಗೊ​ಳ್ಳಲು ಕೇವಲ 3 ದಿನ ಬಾಕಿ ಇರುವ ಕಾರಣ, ಪವರ್‌ ಪ್ಲೇಯರ್‌ ಪರಿ​ಚ​ಯಿ​ಸು​ವುದು ಕಷ್ಟ ಎಂಬ ನಿರ್ಧಾರಕ್ಕೆ ಐಪಿ​ಎಲ್‌ ಆಡ​ಳಿತ ಸಮಿತಿ ಬಂದಿದೆ.

 

Follow Us:
Download App:
  • android
  • ios